ಬಸವ ತತ್ವದಿಂದ ಸ್ವಾತಂತ್ರ್ಯ ರಕ್ಷಣೆ ಸಾಧ್ಯ

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

ಎಲ್ಲ ಜಾತಿ, ಧರ್ಮಗಳ ಜನ ಒಂದಾಗಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುತ್ತ ೧೯೪೭ನೇ ಆಗಸ್ಟ್ ೧೪ರ ಮಧ್ಯರಾತ್ರಿ ಸ್ವಾತಂತ್ರ್ಯ ಪಡೆದರು. ಈ ರಾಜಕೀಯ ಸ್ವಾತಂತ್ರ್ಯದ ಮೂಲಕ ನಾವು ಸಾಮಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹೋರಾಟಗಳನ್ನು ಮುಂದುವರಿಸಬೇಕಾಗಿತ್ತು. ಆದರೆ ಹಾಗಾಗದ ಕಾರಣ ಜಾತೀಯತೆ ಮತ್ತು ಬಡತನ ಒಂದಿಂದು ರೀತಿಯಲ್ಲಿ ಮುಂದುವರಿಯುತ್ತಲೇ ಹೋದವು.

ಭಯೋತ್ಪಾದನೆ, ಕೋಮುವಾದ, ಜಾತೀಯತೆ ಮತ್ತು ಲಿಂಗಭೇದದಿಂದಾಗಿ ಸಾಮಜಿಕ ಸ್ವಾತಂತ್ರ್ಯ ಕುಂಟುತ್ತ ಸಾಗಿದೆ. ಸುಲಿಗೆ ವ್ಯವಸ್ಥೆಯಿಂದಾಗಿ ಆರ್ಥಿಕ ಸ್ವಾತಂತ್ರ್ಯ ಕನಸಾಗಿದೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳು ಆರ್ಥಿಕ ಸ್ವಾತಂತ್ರ್ಯಕ್ಕೆ ಭಾರಿ ಅಡ್ಡಗಲ್ಲುಗಳಾಗಿವೆ. ಈ ಸಮಸ್ಯೆಗಳ ನಿವಾರಣೆಯಗದ್ದಿದರೆ ಸಾಮಜ್ಯಶಾಹಿಗಳು ಮತ್ತು ಕೋಮುವಾದಿಗಳು ಒಂದಾಗಿ ನಮ್ಮ ಸ್ವಾತಂತ್ರ್ಯದ ಚುಕ್ಕಾಣಿ ಹಿಡಿಯುತ್ತಾರೆ.

ಭಾರತದ ಪರಂಪರೆಯದ ಸರ್ವಧರ್ಮ ಸಮಭಾವವನ್ನು ಸರ್ವರೂ ತಮ್ಮ ಬದುಕಿನ ವಿಧಾನವಾಗಿ ಮಡಿಕೊಂಡಾಗ ಮತ್ರ ಭಯೋತ್ಪಾದನೆ ಮತ್ತು ಕೋಮುವಾದವನ್ನು ತಡೆಗಟ್ಟಲು ಸಾಧ್ಯ. ಸರ್ವಧರ್ಮ ಸಮಭಾವದ ಮೂಲಕ ನಾವು ಬಹುಮುಖಿ ಸಂಸ್ಕೃತಿಯನ್ನು ಪಡೆದ್ದಿದೇವೆ. ಇದೇ ಭಾರತೀಯ ಸಂಸ್ಕೃತಿ. ಇದರಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೆಸ್ತ, ಜೈನ, ಬೌದ್ಧ, ಪಾರ್ಸಿ, ಬಡಕಟ್ಟು, ಜಾನಪದ ಮುಂತಾದ ಸಂಸ್ಕೃತಿಗಳ ಸಮ್ಮಿಲನವಾಗಿದೆ. ಒಂದು ಧರ್ಮದವರು ಇನ್ನೊಂದು ಧರ್ಮದವರನ್ನು ಹೇಗೆ ಗೌರವಿಸಬೇಕೆಂಬುದು ನಮ್ಮ ಪೂರ್ವಜರು ನಮಗೆ ಕಲಿಸಿಕೊಟ್ಟ್ದಿದಾರೆ. ಅಂತೆಯೆ ಹಲವಾರು ಧರ್ಮಗಳ ಜನರು ಸಾವಿರಾರು ವರ್ಷಗಳಿಂದ ಒಂದಾಗಿ ಬದುಕುತ್ತ ಮದರಿ ಸಮಜದ ನಿಮಣ ಮಡ್ದಿದಾರೆ. ಇಂದು ಆ ಮದರಿ ಸಮಜ ನಶಿಸುತ್ತಿದೆ. ಅದರ ಸ್ಥಾನದಲ್ಲಿ ಭಯೋತ್ಪಾದನೆ, ಕೋಮುವಾದ, ಅಸಹನೆ ಮತ್ತು ಅರೋಪ-ಪ್ರತ್ಯಾರೋಪಗಳ ಸಮಜದ ನಿಮಣವಾಗುತ್ತಿದೆ. ದೇಶದಲ್ಲಿ ಇದಕ್ಕೆ ಪೂರಕವಾದ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಾಮಜ್ಯಶಾಹಿಗಳು ಕಾರ್ಯೋನ್ಮುಖರಾಗ್ದಿದಾರೆ.

ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಎಂಬುವು ಸಾಮಜ್ಯಶಾಹಿಗಳ ಮಂತ್ರಗಳಾಗಿವೆ. ಉದಾರೀಕರಣವೆಂದರೆ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ನೆಲೆಯೂರಲಿಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಡುತ್ತ ಅವು ಜನರ ಶೋಷಣೆ ಮಡಲು ಅವಕಾಶ ಕಲ್ಪಿಸುವುದು. ಖಾಸಗೀಕರಣ ಎಂದರೆ ಭಾರಿ ಪ್ರಮಣದಲ್ಲಿ ಬೆಳೆದ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ದುರ್ಬಲಗೊಳಿಸುತ್ತ ಅವು ಬಂಡವಾಳಶಾಹಿಗಳ ಪಾಲಾಗುವಂತೆ ನೋಡಿಕೊಳ್ಳುವುದು. ಜಾಗತೀಕರಣ ಎಂದರೆ ಭಾರತೀಯರು ವಿದೇಶಿವಸ್ತುಗಳನ್ನು ಕೊಳ್ಳುವುದಕ್ಕಾಗಿ ಕೇವಲ ಗ್ರಾಹಕರಾಗಿ ಪರಿವರ್ತನೆಗೊಳ್ಳುವುದು. ಅವರನ್ನು ಹೆಚ್ಚು ಹೆಚ್ಚು ವಸ್ತುಮೋಹಿಗಳನ್ನಾಗಿ ಮಡುವುದು. ವಸ್ತುಗಳನ್ನು ಕೊಳ್ಳಲೇಬೇಕೆಂಬ ವಾತಾವರಣ ಸೃಷ್ಟಿಸುವುದಕ್ಕಾಗಿ ಅವರು ಉಳಿತಾಯ ಮಡದಂಥ ವ್ಯವಸ್ಥೆ ಮಡುವುದು. ಅಂದರೆ ಅವರ ಉಳಿತಾಯದ ಹಣಕ್ಕೆ ಕಡಿಮೆ ಬಡ್ಡಿ ನಿಗದಿಪಡಿಸುವುದು. ಕಂತಿನ ಮೇಲೆ ಸಾಲತೀರಿಸುವ ವ್ಯವಸ್ಥೆಯೊಂದಿಗೆ ವಸ್ತುಗಳನ್ನು ಕೊಳ್ಳುವಂತೆ ಮಡುವುದು. ಸುಲಭವಾಗಿ ಸಾಲ ಸಿಗುವಂತೆ ಮಡುವುದು. ಅವರು ಆ ಸಾಲದಿಂದ ವಸ್ತುಗಳನ್ನು ಕೊಳ್ಳುವಂತೆ ಮಡುವುದು. ಹೀಗೆ ಇಡೀ ಸಮಜವನ್ನು ಸಾಲದ ಬಲೆಯಲ್ಲಿ ಸಿಗಿಸುತ್ತ ಸುಲಿಗೆ ಮುಂದುವರಿಸುವುದು. ಆ ಮೂಲಕ ವಿದೇಶಿ ಕಂಪನಿಗಳು ಬಲಶಾಲಿಯಗುವಂತೆ ನೋಡಿಕೊಳ್ಳುವುದು ಜಾಗತೀಕರಣದ ಉದೇಶವಾಗಿದೆ.

ಒಂದು ಈಸ್ಟ್ ಇಂಡಿಯ ಕಂಪಯನ್ನು ಓಡಿಸುವುದಕ್ಕಾಗಿ ಭಾರತೀಯರು ೨೦೦ ವರ್ಷಗಳ ವರೆಗೆ ಹೋರಾಟ ಮಡಬೇಕಾಯಿತು. ಇಂದು ಅದಕ್ಕಿಂತಲೂ ಪ್ರಬಲವಾದ ೨೦೦ಕ್ಕೂ ಹೆಚ್ಚು ಕಂಪನಿಗಳು ಭಾರತದಲ್ಲಿ ನೆಲೆಯೂರಿವೆ. ಕೊನೆಗೊಂದು ದಿನ ಭಾರತೀಯರು ಈ ಕಂಪನಿಗಳ ಗುಲಾಮರಾಗಿ ಬದುಕ ಬೇಕಾಗುತ್ತದೆ.

ಜಾತಿಭೇದ, ಲಿಂಗಭೇದ, ಧರ್ಮಭೇದ, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣಗಳನ್ನು ಸೋಲಿಸದೆ ಸರ್ವರಿಗೂ ಹಿತಕಾರಿಯದಂಥ ವರ್ಗರಹಿತ ಸಮಜವನ್ನು ತರಲು ಸಾಧ್ಯವಿಲ್ಲ. ವರ್ಗರಹಿತ ಸಮಜದಿಂದ ಮತ್ರ ಶೋಷಣೆಯನ್ನು ತಡೆಗಟ್ಟಲು ಸಾಧ್ಯ. ಶೋಷಣೆಯ ಸಮಜದಲ್ಲಿ ಸ್ವಾತಂತ್ರ್ಯ ಅರ್ಥಹೀನವಾಗುತ್ತದೆ. ಆದರಿಂದ ಭಾರತದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿದಾಗ ಮತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ.

ಜಾತೀಯತೆ, ಅಸ್ಪೃಶ್ಯತೆ ಮತ್ತು ಲಿಂಗತಾರತಮ್ಯ ಹಿಂದೂ ಧರ್ಮಕ್ಕೆ ಅಂಟಿದ ಶಾಪಗಳಾಗಿವೆ. ಆದರಿಂದಲೇ ಬಸವಣ್ಣನವರು ಈ ಸಮನತೆಯ ವಿಚಾರ ಕ್ರಾಂತಿ ಮಡಿದರು. ಅವರು ಹಾಕಿಕೊಟ್ಟ ಮರ್ಗವನ್ನೇ ನಾವಿಂದು ಬಸವಧರ್ಮವೆಂದು ಕರೆಯುತ್ತೇವೆ. ಬಸವಧರ್ಮವು ಜಾತೀಯತೆಯನ್ನು ವಿರೋಧಿಸುವುದು. ‘ಜಾತಿಸಂಕರವಾದ ಬಳಿಕ ಕುಲವನರಿಸುವರೆ’ ಎಂದು ಬಸವಣ್ಣನವರು ಪ್ರಶ್ನಿಸಿ ಜಾತೀಯತೆಯನ್ನು ಅಲ್ಲಗಳೆದ್ದಿದಾರೆ. ‘ನಿಮ್ಮ ನಾಮವಿಡಿದ ಅನಾಮಿಕ ನಾನು’ ಎಂದು ಕೆಳಜಾತೀಕರಣಕ್ಕೆ ಒಳಗಾಗಿ ಆದರ್ಶಪ್ರಾಯರಾಗ್ದಿದಾರೆ. ‘ಶರಣ ಸತಿ’ ಎಂದು ಹೇಳುವುದರ ಮೂಲಕ ಲಿಂಗಭೇದವಿಲ್ಲದ ಸಮಜವನ್ನು ಸೂಚಿಸ್ದಿದಾರೆ. ‘ಲಿಂಗ ಪತಿ’ ಎಂದು ಹೇಳುವುದರ ಮೂಲಕ ಒಬ್ಬನೇ ದೇವರು. ಅವನೇ ಮಹಾನ್ ಎಂದು ಸಾರ‍್ದಿದಾರೆ. ‘ದೇವನೊಬ್ಬ ನಾಮ ಹಲವು’ ಎಂದು ತಿಳಿಸುವುದರ ಮೂಲಕ ಎಲ್ಲ ಧರ್ಮಗಳವರಿಗೂ ಒಬ್ಬನೇ ದೇವರು ಎಂಬುದನ್ನು ಸೂಚಿಸ್ದಿದಾರೆ. ಹೀಗೆ ಬಸವಣ್ಣನವರು ನಮ್ಮನ್ನು ಎಲ್ಲ ಸಣ್ಣತನದ ಚೌಕಟ್ಟುಗಳಿಂದ ಎತ್ತ್ದಿದಾರೆ.

ಬಸವಣ್ಣನವರು ಹೇಳಿದಂತೆ ಬದುಕುವುದೆಂದರೆ ಜಾತ್ಯತೀತರಾಗಿ, ಸರ್ವಧರ್ಮ ಸಮಭಾವದವರಾಗಿ, ಯವುದೇ ರೀತಿಯ ಮೇಲು ಕೀಳು ಭಾವನೆ ಇಲ್ಲದೆ ಬದುಕುವುದು. ಉದಾತ್ತವಾಗಿ ಚಿಂತನೆ ಮಡುತ್ತ ಸೀದಾ ಸಾದಾ ಜೀವನ ನಡೆಸುವುದು. ವಸ್ತುಮೋಹಕ್ಕೆ ಒಳಗಾಗದಂತೆ ಇರುವುದು. ಸುಲಿಗೆ ವ್ಯವಸ್ಥೆಯನ್ನು ವಿರೋಧಿಸುತ್ತ ಸ್ವತಂತ್ರಧೀರರಾಗುವುದು. ಹೀಗೆ ಬಸವ ತತ್ವವು ನಮಗೆ ಬದುಕಲು ಕಲಿಸುವುದು. ಹೀಗೆ ಬದುಕಿದಾಗ ಮತ್ರ ಭಯೋತ್ಪಾದಕರ ಆಟ ನಡೆಯುವುದಿಲ್ಲ. ಕೋಮುವಾದಿಗಳು ನಮ್ಮನ್ನು ಪ್ರಚೋದಿಸಲು ಸೋಲುತ್ತಾರೆ. ಜಾತಿವಾದಿಗಳು ಮೌನವಾಗುತ್ತಾರೆ. ಪುರಷರ ಅಹಂಕಾರವು ನಾಶವಾಗುತ್ತದೆ. ಬಸವಣ್ಣನವರ ಕಾಯಕ ತತ್ವದಿಂದ ದುಡಿದು ತಿನ್ನುವ ಛಲ ಮೂಡುವುದು.

ಕಾಯಕವು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವುದು. ಕಾಯಕ ತತ್ವವು ಸಂಗ್ರಹ ಬುದ್ಧಿಯನ್ನು ವಿರೋಧಿಸುವುದರಿಂದ ಸುಲಿಗೆಗೆ ಅವಕಾಶವಿರುವುದಿಲ್ಲ. ಪ್ರಸಾದ ತತ್ವವು ವಸ್ತುಗಳನ್ನು ಬೇಕಾಬಿಟ್ಟಿಯಗಿ ಉಪಯೋಗಿಸುವುದಕ್ಕೆ ತಡೆಯೊಡ್ಡುವುದು. ಎಷ್ಟು ಬೇಕೊ ಅಷ್ಟನ್ನು ಮತ್ರ ಸ್ವಲ್ಪವೂ ಹಾಳಾಗದಂತೆ ಎಚ್ಚರಿಕೆಯಿಂದ ಉಪಯೋಗಿಸಿದರೆ ದೇಶದಲ್ಲಿ ಯರೂ ಉಪವಾಸ ಬೀಳುವುದಿಲ್ಲ. ದಾಸೋಹ ತತ್ವದಿಂದ ಸಾಮಜಿಕ ಪ್ರಜ್ಞೆ ಮೂಡುವುದು. ಆ ಮೂಲಕ ಮೂಡುವ ಸಹಕಾರ ಭಾವದಿಂದ ಒಬ್ಬರ ಹಿತಚಿಂತನೆಯನ್ನು ಇನ್ನೊಬ್ಬರು ಮಡತೊಡಗುವರು.

ಬಸವ ತತ್ವದಿಂದ ಕೂಡಿದ ಸಮಜದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಕ್ಕೆ ಗ್ರಾಹಕರು ಇರುವುದಿಲ್ಲ. ಏಕೆಂದರೆ ಸರಳ ಸಹಜವಾಗಿ ಬದುಕುವವರು ಬಹುರಾಷ್ಟ್ರೀಯ ಕಂಪನಿಗಳ ಗ್ರಾಹಕರಾಗಿ ಪರಿವರ್ತನೆಯಗುವುದಿಲ್ಲ. ಜನರು ವಸ್ತುಗಳ ಬದಲಿಗೆ ತತ್ವಕ್ಕೆ ಬೆಲೆ ಕೊಡುವಂಥ ಸಮಜದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ದಿವಾಳಿ ತೆಗೆಯುತ್ತವೆ. ‘ಬೇಡುವವರಿಲ್ಲದೆ ಬಡವಾದೆನಯ’ ಎಂದು ಬಸವಣ್ಣನವರು ಹೇಳುತ್ತಾರೆ. ಪುಕ್ಕಟೆ ಕೊಡುವುದನ್ನೂ ತೆಗೆದುಕೊಳ್ಳದವರು ಹಣ ಕೊಟ್ಟು ಕೊಳ್ಳುವರೆ? ಹೀಗೆ ಬಸವ ಸಮಜದಲ್ಲಿ ಸಾಮಜ್ಯಶಾಹಿಗಳನ್ನು ಯುದ್ಧ ಮಡದೆ ಸೋಲಿಸಬಹುದು. ಅದೇ ರೀತಿ ಭಯೋತ್ಪಾದಕರು, ಕೋಮುವಾದಿ ಮತ್ತು ಜಾತಿವಾದಿಗಳು ಇಂಥ ಸಮಜದಲ್ಲಿ ಪರಿವರ್ತನೆಯಗದೆ ಉಳಿಯಲು ಸಾಧ್ಯವೇ ಇಲ್ಲ. ಬಸವ ಸಮಜದ ನಿಮಣವಾದಾಗ ನಾವು ಎಲ್ಲ ಸಮಸ್ಯೆಗಳಿಂದ ಮುಕ್ತವಾದ ಸ್ವಾತಂತ್ರ್ಯವನ್ನು ಪಡೆಯುತ್ತೇವೆ.

ಭಾರತದಲ್ಲಿ ಮುಕ್ಕಾಲು ಪಾಲು ಜನರು ಸರ್ಕಾರದ ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತ್ದಿದಾರೆ. ಅವರ ಬದುಕು ನೆರೆಹೊರೆಯವರ ಸಹಕಾರದಿಂದ ಸಾಗಿರುತ್ತದೆ. ಈ ಸಹಕಾರ ಜಾತಿ, ಧರ್ಮ, ವರ್ಗ ಮತ್ತು ಲಿಂಗಭೇದಗಳನ್ನು ಮೀರಿ ಇರುತ್ತದೆ. ಹಾಸಿಗೆ ಇದಷ್ಟು ಕೈಚಾಚುತ್ತ ಸಹಕಾರದೊಂದಿಗೆ ಬದುಕಿದಾಗ ಮತ್ರ ಸಾಲದ ಬಾಧೆಯಿಂದ ಮುಕ್ತರಾಗುತ್ತೇವೆ. ಅಲ್ಲದೆ ದೇಶ ಕೂಡ ಸಾಲದ ಬಾಧೆಯಿಂದ ಹೊರಬರಲು ಸಾಧ್ಯವಾಗುವುದು.

ಹಳ್ಳಿಗಳಲ್ಲಿ ಸಹಕಾರ ಭಾವದ ಕೊರತೆಯಗುತ್ತಿರುವುದರಿಂದ ಮತ್ತು ರೈತರು ಸಾಲದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದರಿಂದ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಅಸಹಾಯಕ ಸಮಜ ನಿಮಣವಾಗುತ್ತಿದೆ. ಆದರೆ ರೈತರನ್ನು ಮತ್ತು ಜನರನ್ನು ಸುಲಿಯುತ್ತಿರುವ ಬೀಜ, ಕೀಟನಾಶಕ, ರಸಗೊಬ್ಬರ, ಆಹಾರೋತ್ಪನ್ನ ಮತ್ತು ಬಳಕೆ ವಸ್ತುಗಳನ್ನು ಉಪಯೋಗಿಸುವ ಕಂಪನಿಗಳು ಲಾಭವನ್ನು ಹೆಚ್ಚಿಸಿಕೊಳ್ಳುತ್ತಲೇ ಇವೆ.

ಬಸವತತ್ವದೊಂದಿಗೆ ದೇಶದ ಸಂಪನ್ಮೂಲ ಮತ್ತು ಮನವಸಂಪನ್ಮೂಲಗಳ ಸದ್ಬಳಕೆಯಿಂದ ನಮ್ಮ ಸ್ವಾತಂತ್ರ್ಯ ಕಾಪಾಡಿಕೊಳ್ಳುತ್ತ ಸಾಗಿದರೆ, ಜಾತಿ ಮತ್ತು ಕೋಮುಗಲಭೆಗಳಿಲ್ಲದ ಹಾಗೂ ಸುಲಿಗೆಗೆ ಅವಕಾಶವಿಲ್ಲದ ಸ್ವಾಭಿಮನಿ ಸಮಜವನ್ನು ನಿರ್ಮಿಸಲು ಸಾಧ್ಯ.

ಓದುಗರ ಅಭಿಪ್ರಾಯಗಳು

Search