You are hereನಗ್ಬೇಕು
ನಗ್ಬೇಕು
ನ್ಯಡೀತಿರೋ ಅನ್ಯಾಯ ತಡಿಯಾಕೆ
ದುಪ್ಟಿ ಎಸ್ದು ಎಗರ್‍ಬೇಕು
ಕೈಮುಗ್ದು ಕಾಲಗ್ ಬಿದ್ದು
ಹಾರ ಹಾಕುದ್ರಾಗಲ್ಲ
ರೇಡಿವಳಗೆ ಮೀಟಿಂಗ್ ಕೇಳಿ
ಹಲ್ ಗಿಂಜುದ್ರಾಗಲ್ಲ
ದೇವ್ರು ದಿಂಡ್ರುಗ್ ಕಡ್ಡಿ ಹಚ್ಚಿ
ಸಾಕಾಗೋಯ್ತಪ್ಪ
ನನ್ ಮಗ್ನವ್ ಹಂಗೇ ಕುಂತವೆ
ಉಸ್ರೇ ವಂಡಲ್ಲ
ಸನ್ಕೆ ಗುದ್ಲಿ ತಗಂಡು
ದೆವ್ಗುಳ್ ವಂಟಂಗ್ ಹೋಗ್ಬೇಕು
ಕಳೆ ಕಿತ್ತಂಗ್ ಕೀಳ್ಬೇಕು
ಕುಂಟೆ ವಡ್ದಂಗ್ ವಡೀಬೇಕು
ಏರೂ ಪೇರೂ ನ್ಯಾರಾಮಾಡಿ
ಬಾಡ್ ತಿಂದಂಗ್ ನಗ್ಬೇಕು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page