You are hereದಾರಿ ಯಾವುದೋ
ದಾರಿ ಯಾವುದೋ
ದಾರಿ ಯಾವುದೋ
ಸರಿ-ದಾರಿ ಯಾವುದೋ
ಕತ್ತಲೆಯಲ್ಲಿ ಮುಳುಗಿದ ಜನಕೆ
ಸುತ್ತಲು ಸಾವನು ಕಾಣುವ ಜನಕೆ
ಕರುಣೆಯ ಸರಪಳಿ ಕೊಲ್ಲುವ ಜನಕೆ
ಬಿಡುಗಡೆಯನ್ನು ನೀಡುವ ಒಂದು
ದಾರಿ ಯಾವುದೋ
ಸರಿ-ದಾರಿ ಯಾವುದೋ
ಭಿಕ್ಷೆಯ ಕೊಟ್ಟು ಶಿಕ್ಷೆಯ ಕೊಟ್ಟು
ನಾಯಿಯ ಬಾಳಿಗೆ ದಲಿತರ ನೂಕಿ
ನಡೆಸುವ ಹಿಂಸೆಯ ಕೊನೆಗಾಣಿಸುವ
ಸಮತೆಯ ಹೂವು ಅರಳುವ ತೋಟಕೆ
ದಾರಿ ಯಾವುದೋ
ಗೆಳೆಯ-ದಾರಿ ಯಾವುದೋ
ಅವಮಾನದ ಕಣ್ಣೀರನು ತೊಳೆಯಲು
ಸಾವಿರ ಕೈಗಳು ಮೇಲಕ್ಕೇಳುವ
ಎಲ್ಲಾ ಮನುಷ್ಯರು ಒಂದೇ ಎನ್ನುವ
ಬಡವರ ಬಾಳಿಗೆ ಬೆಳಕನು ತರುವ
ದಾರಿ ಯಾವುದೋ
ಸರಿ-ದಾರಿ ಯಾವುದೋ
ದಾರಿ ಯಾವುದೋ
ಸರಿ-ದಾರಿ ಯಾವುದೋ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page