You are hereಗಳ್ಡಗಳು
ಗಳ್ಡಗಳು
ನಾನ್ ಹೆಣ ನನ್ ಸುಟ್ಬುಡಿ
ಬರೇ ಉಸುರ್ ಕೊಟ್ ಓಡಾಡುಸ್ ಬ್ಯಾಡಿ
ಕೂಲೀಗ್ ಕರೀಬ್ಯಾಡಿ ದುಡಿಯಾಕ್ಯಳೀ ಬ್ಯಾಡಿ
ಕ್ವಳ್ಚೆ ಜಾಗ್ದಲ್ ಮಲುಗ್ಸಿ ಕಕ್ಕಸ್ ಪೈಪ್
ಇತ್ ಕಡೀಗೆ ತಿರುಗುಸ್ಬ್ಯಾಡಿ
ಜೀತ ಸಾಲ ಬಡ್ಡಿ ಚಪ್ಪಡಿ ಏರಿ
ಅಪ್ಪಚ್ಚಿ ಮಾಡಿ ಆಡ್ಕಂಡ್ ನಗಬ್ಯಾಡಿ
ದಯಾ ತುಂಬಿರೋ ನಿಮ್ ಕ್ವಲೆಗಡುಕ್ತನ
ನಾಯ ತುಂಬಿರೋ ನಿಮ್ ಮಾತ್ಗಾರ್ಕೆ
ವಳಗ್ಯಲ್ಲ ಕ್ವಳ್ತು ಹುಳಾ ಬಿದ್ದಿರಾ ನೀವು
ಏನೂ ಬ್ಯಾಡ
ತೋಡಿರೋ ಗುಂಡೀಗ್ ನನ್ ಓಡಾಕ್ ಬುಡಿ
ಇಕ್ಕಿರೋ ಬೆಂಕೀಗ್ ನನ್ನ ಬೀಳಾಕ್ ಬುಡಿ
ನನ್ ಮಯ್ಯಾಗಿನ ಬಾಡ ಇಸ್ಟಿಸ್ಟೇ ಕಿತ್
ತಿನ್ ಬ್ಯಾಡಿ, ನಾ ಜೀಮೂತ ವಾಹನ ಅಲ್ಲ
ಏ ಗಳ್ಡಗಳಾ
ನನ್ ಜುಟ್ ಕಚ್ಕಂಡ್ ಮ್ಯಾಲ್ಕಾರಿ
ಎಲ್ಲಾನ ಕೆಂಪಟ್ಟೆ ಕೆಂಪ್ ನ್ಯಲ್ದಡೆ ನನ್ಯಸುದ್ಬುಡಿ
ನಾ ಬದಿಕತ್ತಿನಿ ಸರಿಯಾಗುಸ್ರಾಡ್ತಿನಿ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page