You are hereಕತ್ತೆ ಮತ್ತು ಧರ್ಮ

ಕತ್ತೆ ಮತ್ತು ಧರ್ಮ


ಮಧುಗಿರಿ ಪಟ್ಟಣಕೆ ಸಿದ್ದಯ್ಯನೆಂಬಗಸ
ಯಂಡರು ಮಕ್ಕಳಿಲ ಏಕಾಕಿ ಸಿದ್ದಯ್ಯ
ಕತ್ತೆಯು ಅವುನ ಒಡನಾಡಿ

ಕತ್ತೆಯ ಮೈತೊಳೆದು ಮುದ್ದಾಡಿ ಸಿದ್ದಯ್ಯ
ಒಂದೆ ಗಂಗಳದಲ್ಲಿ ಉಣ್ಣೋನು ಸಿದ್ದಯ್ಯ
ಕತ್ತೆಯ ಮಗ್ಗುಲಲ್ಲಿ ಮಲಗೋನು

ಬಟ್ಟೆಯ ಹೇರಿಕೊಂಡು ಹೊಂಟರೆ ಬೀದೀಲಿ
ದೇವೇಂದ್ರನಾ ಕುದುರೆ ಸಮನಲ್ಲ ರಾಜನ
ಪಟ್ಟದ ಆನೆಯು ಚಟ್ಟಂತು

ಸಿದ್ದಯ್ನ ಸಾಕುಮಗಳು ಕತ್ತೆ ಅನ್ನೊ ಸುದ್ದಿ
ಊರ ಬಾಯಿಗೆ ಎಲೆ ಅಡಿಕೆ ಸಿದ್ದಯ್ಯ
ಕತ್ತೆ ಬಿಟ್ಟಿರಲಾರ ಆರುಗಳಿಗೆ

ಇಂಥ ಸಿದ್ದಯ್ಯನೀಗೆ ಬಂತಲ್ಲೊ ಕೇಡುಗಾಲ
ಬಟ್ಟೆಯ ಒಗಿವಾಗ ತಲೆಮ್ಯಾಲೆ ಕಾಗೆನುಗ್ಗಿ
ಮನೆಯಲ್ಲಿ ಗವುಳಿ ಲೊಚಲೊಚ

ಎದ್ದಾನು ಸಿದ್ದಯ್ಯ ಕತ್ತೇಯು ಏಳ್ಳಿಲ್ಲ
ಹೊಟ್ಟೆಯು ಊದಿ ಮಯ್ಯೆಲ್ಲ ತಣ್ಣಗಾಗಿ
ಶಿವ ತನ್ನ ಪಾದಕೆ ಕರುಕೊಂಡ

ಊರ ಸೀಳಾದೀಲಿ ಕತ್ತೇಯ ಮಣ್ಮಾಡಿ
ಗಂಧದ ಕಡ್ಡಿಯ ಹಚ್ಚವನೆ ಸಿದ್ದಯ್ಯ
ತಿಂಗಿನ ಕಾಯ ಒಡೆದವನೆ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು