You are hereಒಂದು ಮೂಳೆಯ ಹಾಡು
ಒಂದು ಮೂಳೆಯ ಹಾಡು
ಕ್ವರುಗ್ತೀನಿ ಕೊನೆಗೊಂದ್ಸಲ ಕೂಗ್ತಿನಿ
ಬಡ್ಡೀ ದುಡ್ನೋನ್ ಬಂಗ್ಲೆ ಕ್ಯಳ್ಗೆ
ತಳಾದೀಗ್ ಸಿಕ್ಕಿರೋ ಮೂಳೆ
ನೆಲಾನಾಸ್ಕಂಡು ಬಾಣಾನೊದ್ಕಂಡು
ಈ ಮಿಂಡ್ರುಗುಟ್ದೋರ್ ಚಂದಾಗ್ ಬದ್ಕಾಕ್
ದುಡ್ಡು ಮೂಳೆ ಆಗಿ ಕ್ವಳಿತಿದ್ದಿನಿ
ಎಷ್ಟ್ ದಿನಗಳ್ ಈ ಪುಟ್ಕೋಸಿಗಳಾಟ?
ಸಿಡಿತಿನಿ ಬಾಂಬ್ ಸಿಡ್ದಂಗೆ
ಇವ್ರ ಸಿಂಗಾರ, ಸೋಪ, ಗಾಜು ಲೈಟು ಎಲ್ಲಾ
ಪುಡಿ ಪುಡಿ ಆಗಂಗೆ
ನನ್ ಮ್ಯಾಲ್ ನಿಂತ್ಕಂಡ್ ತುಳೀತಿರೋ ಈ ಬಂಗ್ಲೆ
ಕ್ಯಳೀಕ್ ಬೀಳಂಗೆ
ಸೌದೆ ಸಿಗದಂಗ್ ಸಿಗಿತಿನಿ, ಸಾವ್ಕಾರಿ ಮಯ್ಯ
ಕಳ್ಳು ಪಚ್ಚಿ ಬಗಿತಿನಿ, ಕುಟ್ತಿನಿ
ಗಂಟ್ಮೂಳೆ ಕೊಬ್ಬ
ಕುಡಿತಿನಿ ಗಟಗಟನ, ಹ್ಯಂಡ ಕುಡ್ದಂಗೆ
ಸಾವ್ಕಾರಿ ರಕ್ತನ
ನಾ ಮೂಳೆ, ನಾ ಇಂಗೇ ಇರಲ್ಲ
ಕೂಗ್ತಿನಿ, ಸಿಡಿತಿನಿ, ಮನುಷ ಆಯ್ತಿನಿ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page