You are hereಅಜ್ಜಿಯ ಹಾಡು
ಅಜ್ಜಿಯ ಹಾಡು
ಈ ಊರಿನ ಜಮೀನುದಾರ
ಸಂಕಪ್ಪಯ್ಯ ನನ್ನ ಮಗ
ನಮ್ಮದು ಊರಿಗೆ ದೊಡ್ಡ ಜಾತಿ
ಭೂಮಿಯ ದೇವರು ನಮ್ಮ ಜನ
ಉತ್ತಮ ಜಾತಿಯ ನಾವುಗಳೆಲ್ಲ
ದೇವಾಲಯದ ಕಳಸಗಳು
ನಮ್ಮಯ ಊರಿನ ಪಂಚಮರೆಲ್ಲ
ಪಾಯ ಕೆಳಗಿನ ಕಲ್ಲುಗಳು
ಕಲ್ಲುಗಳೆಂದೂ ಕಳಸಗಳಲ್ಲ
ಹೊಲೆಯರಿಗೆಂದೂ ನೆಲವಿಲ್ಲ
ಕಪ್ಪುನಾಯಿ ಕೆಂಪಾಗುವುದಿಲ್ಲ
ಹೊಲೆಯರಿಗೆಂದೂ ಬೆಲೆಯಿಲ್ಲ
ಹೀಗೆನ್ನುವ ಮುದುಕಿಗೆ ಸಾವೇ ಇಲ್ಲವೆ
ಚೋಮನಿಗೆಂದೂ ನೆಲವೇ ಬೇಡವೆ
ನೋವನು ಉಂಡು ನೋವನು ಹೊದಿಯುವ
ದಲಿತರ ಬಾಳಿಗೆ ಬೆಳಕೇ ಬೇಡವೆ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page