You are hereಡಾ|| ಸಿದ್ಧಲಿಂಗಯ್ಯ

ಡಾ|| ಸಿದ್ಧಲಿಂಗಯ್ಯ


ಕುವೆಂಪುವಿನ ದಟ್ಟ ಸ್ವಭಾವ ಈ ಕವಿಯ ಮೊದಲ ಪದ್ಯಗಳಲ್ಲಿ ಕಂಡದ್ದು ಸಹಜವೂ, ನಿರೀಕ್ಷಿತವೂ ಆಗಿತ್ತು. ಕನ್ನಡದಲ್ಲಿ ಕ್ರಾಂತಿ ಕವಿತೆ ಬರೆವಾತನಿಗೆ ಕುವೆಂಪು ವ್ಯೂಹದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಕುವೆಂಪು ಲಯದ ಚಕ್ರವ್ಯೂಹದಿಂದ ಆಚೆಗೆ ಬರಲಾಗದೆ ಅನೇಕ ಅಭಿಮನ್ಯುಗಳು ಹತರಾಗುತ್ತಾರೆ. ಒಂದು ರೀತಿಯ ಕ್ರಾಂತಿಯ ಕಲ್ಪನೆ ಮತ್ತು ಕಾವ್ಯಕೃತಿಯ ಕಲ್ಪನೆ ಕನ್ನಡ ಪರಂಪರೆಯಲ್ಲಿ ಓಟ್ಟೊಟ್ಟಿಗೇ ಹೋಗುತ್ತದೆ. ಕ್ರಾಂತಿ ಎಂದರೆ ಸಾಮಾನ್ಯ ಜನ ಸಿಡಿದೇಳುವ ಕ್ರಿಯೆ. ಅದೊಂದು ದಂಗೆ. ಜನ ಸಿಟ್ಟಿನಿಂದ ಒಮ್ಮೆಗೇ ಸ್ಫೋಟಿಸುವ ಜ್ವಾಲಾಮುಖೀ ಕ್ರಿಯೆ. ಕ್ರಾಂತಿಯ ಈ ಸರಳ ಕಲ್ಪನೆಗೆ ಅನುಗುಣವಾಗಿಯೇ ಕಾವ್ಯವೂ ಇರುತ್ತದೆ. ಹೀಗಾಗಿ, ಕ್ರಾಂತಿ ಕಾವ್ಯ ಎಂದರೆ ಕನ್ನಡದಲ್ಲಿ ಹಾಡುಗಬ್ಬ ಅಥವಾ ಹಾಡಿನ ಲಯಗಳಿಗೆ ಹತ್ತಿರವಿರುವಂಥದು. ಕನ್ನಡದ ಲಯ ಶರೀರದಲ್ಲಿ ಕ್ರಾಂತಿ ಮಿಡಿಯುವುದೇ ಹಾಡಿನಲ್ಲಿ. ಹೀಗಾಗಿ, ಕವಿ ಸಿದ್ಧಲಿಂಗಯ್ಯನವರ ಪುಟ್ಟ ದೇಹದಲ್ಲಿ ಕುವೆಂಪು ಅವಾಹನೆಯಾದದ್ದು ಕನ್ನಡ ಪರಂಪರೆಯ ಮೂಲಾಧಾರಗಳ ದೃಷ್ಟಿಯಿಂದ ನಿರೀಕ್ಷಿತವೇ ಆಗಿತ್ತು.
(ಡಿ.ಆರ್. ನಾಗರಾಜ್, "ಆಯ್ದ ಕವಿತೆಗಳು" ಕವನ ಸಂಕಲನದ ಮುನ್ನುಡಿಯಿಂದ.)


ತಮ್ಮ 'ಆಯ್ದ ಕವಿತೆಗಳು' ಕವನ ಸಂಕಲನವನ್ನು ವಿಚಾರಮಂಟಪದಲ್ಲಿ ಪ್ರಕಟಿಸಲು ಒಪ್ಪಿಗೆಯಿತ್ತ ಡಾ|| ಸಿದ್ಧಲಿಂಗಯ್ಯನವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.