You are hereಬಸವಧರ್ಮ

ಬಸವಧರ್ಮ


By admin - Posted on 27 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

“ನೋಟದ ಭಕ್ತಿ ಬಸವಣ್ಣನಿಂದಾಯಿತ್ತು,
ಕೂಟದ ಜ್ಞಾನ ಬಸವಣ್ಣನಿಂದಾಯಿತ್ತು ಕಾಣಾ.
ಎಲ್ಲಿಯ ಶಿವಜ್ಞಾನ ಎಲ್ಲಿಯ ಮಟ ಕೂಟ ಬಸವನಲ್ಲದೆ
ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ
ಕಪಿಲಸಿದ್ಧಮಲ್ಲಿನಾಥಯ.

ಎಂದು ಶಿವಶರಣ ಸಿದ್ಧರಾಮ ಮನದುಂಬಿ ಹೇಳ್ದಿದಾರೆ. ವಚನಕಾರರು ಬಸವಣ್ಣನವರ ಮರ್ಗದರ್ಶನದಲ್ಲಿ ಹೊಸ ಸಮಜವೊಂದರ ಹರಿಕಾರರಾದರು. ಈ ಹೊಸ ಸಮಜಕ್ಕೆ ಅವಶ್ಯವ್ದಿದ ವೈಚಾರಿಕತೆ, ಆತ್ಮ ಶೋಧನೆ, ಸಾಮಜಿಕ ವ್ಯಕ್ತಿತ್ವ, ನೈತಿಕಮೌಲ್ಯ, ಆರ್ಥಿಕ ವ್ಯವಸ್ಥೆ, ಮನವ ಸಂಪನ್ಮೂಲಗಳ ಸದ್ಬಳಕೆ, ಸಾಮಜಿಕ ಜವಾಬ್ದಾರಿ ಮತ್ತು ಸರಳ, ಸಹಜ ಹಾಗೂ ಸುಂದರವಾದ ಬದುಕಿಗೆ ಕಂಟಕಪ್ರಾಯವಾದ ಹಳೆಯ ಮೌಲ್ಯಗಳ ಟೊಳ್ಳುತನವನ್ನು ಎತ್ತಿತೋರಿಸುವುದು, ಹಳೆಯ ದೇವರುಗಳನ್ನು ತಿರಸ್ಕರಿಸಿ

ಹೊಸ ದೇವರನ್ನು ಸೃಷ್ಟಿಸುವುದರ ಮೂಲಕ, ಅಂದರೆ ಲೋಕದ ಜೀವಿಳಿಗೆಲ್ಲ ಇರುವ ಒಬ್ಬನೇ ದೇವನ ಕಲ್ಪನೆಯನ್ನು ಮೂಡಿಸುವುದರ ಮೂಲಕ ಮಾನವನನ್ನು ಎಲ್ಲ ರೀತಿಯ ಜಾತಿ, ಕುಲ ಮತ್ತು ಧಾರ್ಮಿಕ ಬಂಧನಗಳಿಂದ ಮುಕ್ತಗೊಳಿಸಿ ಸರ್ವ ಸಮಾನತೆಯನ್ನೇ ಮೈದಾಳಿದಂಥ ಹೊಸ ಮಾನವನನ್ನು ಸೃಷ್ಟಿಸುವುದು ೧೨ನೇ ಶತಮಾನದ ಶರಣರ ಪರಮಗುರಿಯಗಿತ್ತು. ಜನರ ಭಾಷೆಯನ್ನೇ ಧರ್ಮ ಭಾಷೆಯನ್ನಾಗಿಸಿ, ಬಸವಣ್ಣನವರ ಉದಾತ್ತ ಚಿಂತನೆಗಳನ್ನೆ ಧರ್ಮವಾಗಿಸಿ ಶರಣರು ಹೊಸ ಮಾನವೀಯ ವ್ಯವಸ್ಥೆಯನ್ನು ಸೃಷ್ಟಿಸಿ ಲೋಕಕ್ಕೇ ಆದರ್ಶಪ್ರಾಯವಾದರು.

ಈ ಗುರಿ ಸಾಧನೆಗಾಗಿ ಶರಣರು ವಚನ ಚಳವಳಿ ಆರಂಭಿಸಿದರು. ೧೨ನೆಯ ಶತಮಾನದಲ್ಲಿ ವಿಶ್ವದ ಯವುದೇ ಮೂಲೆಯಲ್ಲಿ ಕಂಡುಬರದ ಈ ಚಳವಳಿ ಕನ್ನಡದ ನೆಲದಲ್ಲಿ ರೂಪತಾಳ್ದಿದು ಕನ್ನಡಿಗರ ಸುದೈವವಾಗಿದೆ.

“ಎನ್ನ ತನು-ಮನ-ಪ್ರಾಣಂಗಳು
ಶುದ್ಧವಾದವು ಬಸವಣ್ಣಾ ನಿಮ್ಮ ಧರ್ಮದಿಂದ.
ಇಂತಿವೆಲ್ಲವೂ ಶುದ್ಧವಾದವು ಕಲಿದೇವಾ
ನಿಮ್ಮ ಶರಣ ಸಂಗನಬಸವಣ್ಣನಾ ಧರ್ಮದಿಂದ.”

ಎಂದು ಶರಣ ಮಡಿವಾಳ ಮಚಿದೇವರು ಬಸವಧರ್ಮದ ಪರಿಶುದ್ಧತೆಯನ್ನು ಸಾರಿದರು. ಶರಣರ ಕಾಯಕ ಮಡಿವಾಳರ ಕಾಯಕ ಎಂದು ಬಸವಣ್ಣನವರು ಹೇಳ್ದಿದಾರೆ. ಜಗತ್ತನ್ನು ಶುದ್ಧಗೊಳಿಸುವುದೇ ಬಸವಧರ್ಮದ ಮೂಲ ಗುರಿಯಗಿದೆ. ಬಸವ ತತ್ತ್ವದ ಪ್ರಕಾರ ಜಗತ್ತು ಶುದ್ಧಗೊಂಡಾಗ ಎಲ್ಲ ಜೀವಗಳು ಎಲ್ಲರೊಡನೆ ಒಂದಾಗಿ ಜವಾಬ್ದಾರಿಯುತವಾದ ಸ್ವತಂತ್ರ ಬದುಕಿನ ಆನಂದವನ್ನು ಅನುಭವಿಸುತ್ತವೆ.

೧೨ನೇ ಶತಮಾನದ ಸಮಾಜ ಎಲ್ಲ ರೀತಿಯ ಸಮಸ್ಯೆಗಳಿಂದ ನರಳುತ್ತಿತ್ತು. ಅನ್ನದ ಋಣವು ‘ಜೋಳವಾಳಿ’ ಎಂಬ ಬಹುದೊಡ್ಡ ಮೌಲ್ಯವಾಗಿತ್ತು. ಸಮಜದಲ್ಲಿ ಬಹುಜನರಾಗ್ದಿದ ಅಸ್ಪೃಶ್ಯರು, ವಿವಿಧ ಕಾಯಕ ಮಡುವ ಹಿಂದುಳಿದವರು ಮತ್ತು ರೈತಾಪಿ ಜನ ಬದುಕಿಗೆ ಎಲ್ಲವನ್ನು ಉತ್ಪಾದಿಸುತ್ತ ಕಷ್ಟಕರವಾದ ಜೀವನವನ್ನು ಸಾಗಿಸುತ್ತ್ದಿದರೂ ರಾಜರ, ಪಂಡಿತರ, ಪಾಳೆಯಗಾರರ, ಜಮೀನುದಾರರ ಮತ್ತು ಬಡ್ಡಿವ್ಯಾಪಾರಿಗಳ ಋಣದಲ್ಲಿ ಬದುಕುವಂಥ ಪರಿಸ್ಥಿತಿ ಇತ್ತು. ಜನರ ಬದುಕನ್ನು ಸದಾ ಹೀನಾಯವಾಗಿಸುವಂಥ ಕರ್ಮಸಿದ್ಧಾಂತ ಮತ್ತು ಮೂಢನಂಬಿಕೆಗಳು ಜನಜೀವನವನ್ನು ಅಧೋಗತಿಗೆ ಒಯ್ದ್ದಿದವು. ಧರ್ಮಗಳು ನಿಜಾಚರಣೆಯನ್ನು ಮರೆತ್ದದರಿಂದ ಧರ್ಮದ ಹೆಸರಿನಲ್ಲಿ ಹಿಂಸೆ, ಬಲಿ, ನರಬಲಿ, ಸುಲಿಗೆ, ಮೋಸ, ಕಂದಾಚಾರಗಳು ಸಮಜದಲ್ಲಿ ತಲೆ ಎತ್ತ್ದಿದವು. ಯುದ್ಧ, ಶೀತಲ ಯುದ್ಧ, ಅಧಿಕಾರ ದಾಹ ಮತ್ತು ಅಪನಂಬಿಕೆಗಳಿಂದ ರಾಜ್ಯವ್ಯವಸ್ಥೆ ಹದಗೆಟ್ಟಿತ್ತು. ಹೀಗೆ ಧರ್ಮ, ರಾಜ್ಯ ಮತ್ತು ಸಮಜ ಅಧೋಗತಿಗೆ ಇಳಿದ್ದಿದವು. ಇಂಥ ಸ್ಥಿತಿಯಲ್ಲಿ ಬಸವಣ್ಣನವರು ಹೊಸ ಭರವಸೆಯಗಿ ಮೂಡಿಬಂದರು. ಬಸವಣ್ಣನವರು ಬ್ರಾಹ್ಮಣ ವರ್ಣದಲ್ಲಿ ಜನಿಸಿ ಜಡ ಅಗ್ರಹಾರಗಳ ನಿಷ್ಕರುಣಿ ಅಂತರಂಗವನ್ನು ಅರಿತರು ಮತ್ತು ಸಕಲ ವೇದ ಶಾಸ್ತ್ರ ಪುರಾಣಗಳ ಅಧ್ಯಯನ ಮಡಿ ಮೂಢ ಧರ್ಮಗಳ ಟೊಳ್ಳುತನವನ್ನು ಗ್ರಹಿಸಿದರು. ಅವರು ಬಿಜ್ಜಳನ ಭಂಡಾರಿಯಗ್ದಿದಾಗ ಜನಸಾಮನ್ಯರ ಸುಲಿಗೆಯ ವಿರಾಟ್ ಸ್ವರೂಪದ ದರ್ಶನವಾಯಿತು. ಪ್ರಧಾನಿಯಗಿ ಹೀನ ರಾಜಕೀಯ ವ್ಯವಸ್ಥೆಯ ಕ್ರೌರ್ಯವನ್ನು ಮನಗಂಡರು. ಇವೆಲ್ಲವುಗಳ ಹಿಡಿತಕ್ಕೆ ಸಿಕ್ಕಿ ನರಳುತ್ತಿರುವ ಸಮಜವನ್ನು ಸಂರಕ್ಷಿಸುವ ಸಂಕಲ್ಪ ಮಡಿದರು. ಅಂತಃಕರಣದಿಂದ ಕೂಡಿದ ಈ ಸಂಕಲ್ಪವೇ ಬಸವಧರ್ಮದ ಮೂಲ. ಈ ಮೂಲವನ್ನು ಹಿಡಿದುಕೊಂಡು ಬಸವಧರ್ಮದ ವಿಶ್ವಸಂದೇಶಗಳನ್ನು ಲೋಕದ ಜನಸಮುದಾಯಗಳಿಗೆ ತಲುಪಿಸುವ ಜವಾಬ್ದಾರಿ ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜ್ಞಾವಂತರ ಮೇಲಿದೆ.

ವಚನಕಾರರು ಈ ಜವಾಬ್ದಾರಿಯೊಂದಿಗೆ ವಚನಗಳನ್ನು ರಚಿಸುತ್ತ ಗಣಪ್ರಜ್ಞೆಯನ್ನು ಮೂಡಿಸಿದರು. ಗಣಪ್ರಜ್ಞೆ ಎಂದರೆ ಸಮಜದ ಎಲ್ಲರನ್ನು ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದೆ ನೋಡುವುದು. ಎಲ್ಲರ ಹಕ್ಕುಗಳು ಸಮನ ಎಂಬ ತತ್ತ್ವದಲ್ಲಿ ನಂಬಿಕೆ ಇಡುವುದು. ವರ್ಣ ವ್ಯವಸ್ಥೆ ಮತ್ತು ಕರ್ಮಸಿದ್ಧಾಂಥವನ್ನು ತಿರಸ್ಕರಿಸುವ ಈ ಗಣಪ್ರಜ್ಞೆ ೨೧ನೇ ಶತಮನಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿದೆ. ಇದು ಪ್ರಜಾಪ್ರಭುತ್ವದ ಯುಗ. ಆದರೆ ಮರುಕಟ್ಟೆ ಮೌಲ್ಯಗಳೇ ಪ್ರಧಾನವಾಗುತ್ತಿರುವ ಸಮಜದಲ್ಲಿ ಮನವ ತನಗರಿಯದಂತೆಯೆ ಗುಲಾಮನಾಗುತ್ತ್ದಿದಾನೆ. ಇಂಥ ಆಧುನಿಕ ಯುಗದಲ್ಲಿ ಮನವೀಯ ಮೌಲ್ಯಗಳು ಕಾಲಕಸವಾಗುತ್ತಿವೆ. ಉತ್ಪಾದನಾ ವ್ಯವಸ್ಥೆ ಕಂಪ್ಯೂಟರೀಕರಣಕ್ಕೊಳಪಡುತ್ತಿರುವುದರಿಂದ ಮನವಸಂಪನ್ಮೂಲಕ್ಕೆ ಬೆಲೆಯಿಲ್ಲದಂಥ ಪರಿಸ್ಥಿತಿ ಉಂಟಾಗುತ್ತಿದೆ. ವಿವಿಧ ವಸ್ತುಗಳ ಉತ್ಪಾದನೆ ಮಡುವ ಕಾಯಕಜೀವಿಗಳು ತಮ್ಮ ಕಾಯಕ ಕಳೆದುಕೊಂಡು ನಿರುದ್ಯೋಗಿಯಗುವಂಥ ಸ್ಥಿತಿ ಎಡೆ ತಾಂಡವವಾಡುತ್ತಿದೆ. ರೈತಾಪಿ ಜನರು ಭೂಮಿಯಲ್ಲಿ ಬೆವರು ಸುರಿಸಿದರೂ ಸಾಲದ ಶೂಲದಲ್ಲಿ ಸಿಲುಕಿ ಜೀವ ಕಳೆದುಕೊಳ್ಳುವಂಥ ಮಟ್ಟಕ್ಕೆ ಬಂದು ತಲುಪ್ದಿದಾರೆ. ನಿರುದ್ಯೋಗ, ಬಡತನ, ಅಸಹಾಯಕತೆ ಮತ್ತು ಅಪಮನದ ಬದುಕಿನಿಂದ ಜನಸಮುದಾಯವನ್ನು ಮೇಲೆತ್ತಿ ದುಡಿಮೆ ಮತ್ತು ಸ್ವಾಭಿಮನದ ಸಮಜದ ಕಡೆಗೆ ಒಯ್ಯಬೇಕಿದೆ. ಹೀಗೆ ಮನವನನ್ನು ಸ್ವತಂತ್ರಧೀರನನ್ನಾಗಿಸುವ ಶಕ್ತಿ ಬಸವಧರ್ಮಕ್ಕೆ ಇದೆ. ಬಸವಧರ್ಮವನ್ನು ಲೋಕದ ಜನರು ತಮ್ಮ ಧರ್ಮಗಳಿಂದ ಮತಾಂತರ ಹೊಂದದೆಯೂ ಪಾಲಿಸಲು ಸಾಧ್ಯವಾಗುವಷ್ಟು ವಿಶಾಲವಾಗಿದೆ. ಎಲ್ಲ ಮನವೀಯ ಧರ್ಮಗಳ ಅಂಶಗಳನ್ನು ಒಳಗೊಂಡಾಗ ಮತ್ರ ಒಂದು ಧರ್ಮ ವಿಶ್ವಧರ್ಮವಾಗುತ್ತದೆ. ಅಂಥ ಶಕ್ತಿ ಬಸವಧರ್ಮಕ್ಕೆ ಇದೆ. ಅದು ವಿಶ್ವಧರ್ಮಗಳಾದ ಬೌದ್ಧ, ಕ್ರೆಸ್ತ, ಇಸ್ಲಾಂ ಮುಂತಾದ ಧರ್ಮಗಳ ಜೊತೆ ಸಾಗುವ ಯೋಗ್ಯತೆಯನ್ನು ಬಸವಧರ್ಮ ಹೊಂದಿದೆ. ಇಂಥ ವಿಶ್ವಧರ್ಮಗಳು ಮನವರ ಮಧ್ಯೆ ತಾರತಮ್ಯ ಮಡುವ ಸಿದ್ಧಾಂತಗಳನ್ನು ವಿರೋಧಿಸುತ್ತವೆ. ಸುಲಿಗೆ ವ್ಯವಸ್ಥೆ, ಹಿಂಸಾತ್ಮಕ ಬದುಕು, ಭೇದಭಾವದ ಸಮಜ, ಅಹಂಕಾರದ ವಾತಾವರಣ ಮತ್ತು ಸ್ವಾರ್ಥಕೇಂದ್ರಿತ ಆಚರಣೆಗಳನ್ನು ಅಲ್ಲಗಳೆಯುತ್ತವೆ. ವಿಶ್ವವ್ಯಾಪಿ ನವಮನವನಿಗಾಗಿ ಮರ್ಗದರ್ಶನ ಮಡುತ್ತವೆ. ಸುಖ, ಸಂತೋಷ ಮತ್ತು ನೆಮ್ಮದಿ ಹೊಂದುತ್ತ ಮುಂಬರುವ ಜನಕೋಟಿಗೆ ಒಳ್ಳೆಯದಾಗುವಂಥ ವಾತಾವರಣ ನಿರ್ಮಿಸುವ ಜವಾಬ್ದಾರಿಯೊಂದಿಗೆ ಈ ಜಗತ್ತನಲ್ಲಿ ಮನವ ಬದುಕುವ ಬಗೆಯನ್ನು ವಿಶ್ವಧರ್ಮಗಳು ಕಲಿಸಿಕೊಡುತ್ತವೆ. ಇಂಥ ಒಂದು ವಿಶ್ವಧರ್ಮವಾದ ಬಸವಧರ್ಮ ವಿಶ್ವಸಂದೇಶಗಳ ಆಗರವೇ ಆಗಿದೆ.

ಬಸವಣ್ಣನವರ ಚಿಂತನೆಗಳು ನಮ್ಮ ಅಂತಃಕರಣವನ್ನು ತಟ್ಟಬೇಕಿದೆ. ನಾವು ಜಾತಿ ಮತಗಳ ಗೊಂಡಾರಣ್ಯದಿಂದ ಹೊರಬರಬೇಕಿದೆ. ಅಸ್ಪೃಶ್ಯತೆಯನ್ನು ನಿರ್ಮೂಲ ಮಡಬೇಕಿದೆ. ಮೇಲು ಕೀಳುಗಳನ್ನು ಹೊಡದೊಡಿಸಬೇಕಿದೆ. ಸ್ತ್ರೀ ಪುರುಷರಲ್ಲಿ ಸಹಚರ ಭಾವ ಮೂಡಬೇಕಿದೆ. ಸಕಲಜೀವಾತ್ಮರಿಗೆ ಲೇಸನೇ ಬಯಸಬೇಕಿದೆ, ಅಂದಾಗ ಮತ್ರ ಈ ಭೂಮಿ ಸರ್ವರೀತಿಯಿಂದಲೂ ಬದುಕಲು ಯೋಗ್ಯವಾತ್ತದೆ. ಇಲ್ಲದ್ದಿದರೆ ಅಹಂಕಾರದ ಆಧಿಪತ್ಯದಲ್ಲಿ ಇಡೀ ಜಗತ್ತು ವಿನಾಶದೆಡೆಗೆ ಸಾಗುತ್ತ ಒಂದು ದಿನ ಬದುಕಲು ಸಾಧ್ಯವಾಗದಂತೆ ಸ್ಥಿತಿ ತಲುಪುವುದರಲ್ಲಿ ಸಂಶಯವಿಲ್ಲ.

ಮಾರುಕಟ್ಟೆ ಮೌಲ್ಯಗಳ ಜಾಗತೀಕರಣದ ಈ ಸಂದರ್ಭದಲ್ಲಿ ಬಸವಣ್ಣನವರ ಮೌಲ್ಯಗಳ ಜಾಗತೀಕರಣ ಮಡಬೇಕಿದೆ. ಈ ಕಾಲಘಟ್ಟದಲ್ಲಿ ಗ್ರಾಹಕನಾಗುತ್ತಿರುವ ಮನವನ್ನು ರಕ್ಷಿಸಿ ನಿಜಮನವನನ್ನಾಗಿ ಮಡಬೇಕಿದೆ. ವಸ್ತುಗಳ ಬೆಲೆ ಹೆಚ್ಚಿದಂತೆಲ್ಲ ಮನವ ಬೆಲೆ ಕಳೆದುಕೊಳ್ಳುತ್ತ್ದಿದಾನೆ. ಹಣ ಮತನಾಡುವಾಗ ಮನವ ಮೌನವಾಗುತ್ತಾನೆ. ದಶಾವತಾರಗಳ ನಂತರ ಹಣವು ಹನ್ನೊಂದನೆಯ ಅವತಾರವಾಗಿ ರೂಪುಗೊಳ್ಳುತ್ತಿದೆ. ಇಂದು ಎಲ್ಲರೂ ಹಣದ ಆರಾಧಕರೇ ಆಗುತ್ತ್ದಿದಾರೆ. ಇಂಧ ಸಂದರ್ಭದಲ್ಲಿ ಬಸವಧರ್ಮವು ನಿಜ ದೇವರ ದರ್ಶನ ಮಡಿಸುತ್ತದೆ. ಬಸವಣ್ಣನವರ ದೇವರು ವಿಶ್ವವ್ಯಾಪಿಯಗ್ದಿದಾನೆ. ಹೀಗಾಗಿ ಎಲ್ಲ ಜನಾಂಗಗಳ ದೇವರಾಗ್ದಿದಾನೆ. ಆತ ನಿರಾಕಾರನಾಗ್ದಿದಾನೆ. ಅನಂತವಾಗ್ದಿದಾನೆ, ಅನನ್ಯನಾಗ್ದಿದಾನೆ. ಏಕಮೇವಾದ್ವಿತೀಯನಾಗ್ದಿದಾನೆ. ಆತನನ್ನು ಅಂತಃಕರಣದಿಂದ ಮತ್ರ ಅನುಭಾವಿಸಲು ಸಾಧ್ಯ. ಜಗತ್ತೆಲ್ಲ ಒಂದು, ಜೀವಜಾಲವೆಲ್ಲ ದೇವರ ಅಂಶ ಎಂಬುದನ್ನು ಅರಿಯಲು ಸಾಧ್ಯ. ಹೀಗೆ ನಾವು ಪವಿತ್ರರಾಗಬೇಕಿದೆ, ವಿಶ್ವಮನವರಾಗಬೇಕಿದೆ. ಮನವನನ್ನು ವಿಶ್ವಮನವನನ್ನಾಗಿಸುವುದೇ ವಿಶ್ವಧರ್ಮಗಳ ಉದೇಶವಾಗಿದೆ. ಬಸವಧರ್ಮ ಇದೇ ಉದೇಶವನ್ನು ಹೊಂದಿದ ವಿಶ್ವಧರ್ಮವಾಗಿದೆ.

‘ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ,
ನಿರ್ಮಳ ಬಸವಾ ಶಿವಜ್ಞಾನಿ ಬಸವಾ,
ನಿಮ್ಮ ಧರ್ಮವಯ್ಯಾ ಈ ಭಕ್ತಿಯ ಪದವು.
ಕರುಣಿ ಕಪಿಲಸಿದ್ಧಮಲ್ಲಿ?ಥಯ
ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯ.’

ಎಂದು ಸಿದ್ಧರಾಮರು ಹೇಳಬೇಕಾದರೆ ಬಸವಣ್ಣನವರ ವ್ಯಕ್ತಿತ್ವ ಎಂಥದು ಎಂಬುದರ ಅರಿವಾಗುವುದು. ಅವರ ಧರ್ಮ ಅವರ ಅಂತಃಕರಣವೇ ಆಗಿದೆ. ಅವರ ಅಂಥಕರಣವು ಮಂಗಳಕರವಾದ ಪರಮಾತ್ಮನಷ್ಟೇ ವಿಶಾಲವಾಗಿದೆ. ವಿಶ್ವಧರ್ಮವಾಗಿ ಮಾನವತೆಯನ್ನು ಸಾರುತ್ತ ನಿಂತಿದೆ.

ಬಸವಣ್ಣನವರ ದೇವರು ನಿರಾಕಾರನಾಗ್ದಿದಾನೆ. ಸ್ಥಾವರ ದೇವರ ಜಾಗದಲ್ಲಿ ಬಸವಣ್ಣನವರು ನಿರಾಕಾರ ದೇವರನ್ನು ತಂದಿರಿಸ್ದಿದು ಭಾರತದ ಧಾರ್ಮಿಕ ಇತಿಹಾಸದಲ್ಲಿ ಅನುಪಮ ಸಾಧನೆಯಾಗಿದೆ.

“ತೋರಲಿಲ್ಲದ ಸಿಂಹಾಸನದ ಮೇಲೆ
ಹೇಳಬಾರದ ಘನವು ಬಂದೆರಗಿದಡೆ,
ತೋರಿ ಮೆರೆವ ಸಂಗಮನಾಥನು ಎದ್ದು ಹೋದನು.”

ಎಂದು ಬಸವಣ್ಣ?ವರು ಹೇಳುತ್ತಾರೆ. ಬಸವಣ್ಣ?ವರ ನಿರಾಕಾರ ದೇವರು ವಿಶ್ವದ ದೇವರಾಗಿದ್ದಾನೆ. ಬಸವಣ್ಣನವರ ಧರ್ಮ ವಿಶ್ವಧರ್ಮವಾಗಿದೆ. ಬಸವಣ್ಣನವರ ಸಂದೇಶಗಳು ವಿಶ್ವಸಂದೇಶಗಳಾಗಿವೆ.