You are hereಕನ್ನಡದ ಕಂಪು ಕಲ್ಯಾಣದ ಬೆಳಕು

ಕನ್ನಡದ ಕಂಪು ಕಲ್ಯಾಣದ ಬೆಳಕು


By admin - Posted on 27 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು


೧೨ನೇ ಶತಮನದ ಶರಣರ ನಡೆನುಡಿಗಳು ೨೧ನೇ ಶತಮನದಲ್ಲಿ ಆಚರಿಸುವ ಸುವರ್ಣ ಕರ್ನಾಟಕಕ್ಕೆ ಮಗದರ್ಶಿಯಗಬಲ್ಲವು. ಸಮಜ ಮತ್ತು ಭಾಷೆಯ ಬಗ್ಗೆ ಶರಣರಿಗೆ ನಿಖರವಾದ ಪರಿಜ್ಞಾನವಿತ್ತು. ಅಂತೆಯೆ ಅವರಿಗೆ ತಾತತಮ್ಯವಿಲ್ಲದ ಜೀವನವಿಧಾನವನ್ನು ಕಂಡುಕೊಳ್ಳಲು ಸಾಧ್ಯವಾಯಿತು. ೧೨ನೇ ಶತಮನದ ಶರಣರ ಸಾಧನೆ ಮತ್ತು ಚಿಂತನೆ ೨೧ನೇ ಶತಮನದವರಿಗೆ ಮರ್ಗದರ್ಶಿಯಗಿವೆ.

ನಮ್ಮ ಸಮಜ ಹೇಗಿರಬೇಕು? ನಮ್ಮ ಭಾಷಾನೀತಿ ಹೇಗಿರಬೇಕು? ಧರ್ಮ ಹೇಗಿರಬೇಕು? ನಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು. ಅವು ಹೊಸ ಮೌಲ್ಯಗಳೊಂದಿಗೆ ಹೇಗೆ ಬೆಳವಣಿಗೆ ಹೊಂದಬೇಕು? ಸಮಜದೊಳಗಿನ ಸಮುದಾಯಗಳ ಮಧ್ಯದ ಸಂಘರ್ಷವನ್ನು ಹೇಗೆ ಶಮನಗೊಳಿಸಬೇಕು. ಮನವ ವಿಕಾಸಕ್ಕೆ ಅಡ್ಡಿಯಗುವಂಥ ಆಚರಣೆಗಳಿಂದ ಹೇಗೆ ದೂರವಾಗಬೇಕು? ಹೊಸ ಜೀವನಶೈಲಿಯನ್ನು ಹೇಗೆ ರೂಪಿಸಿಕೊಳ್ಳಬೇಕು? ಸಮಜದಲ್ಲಿ ಕಾಯಕಜೀವಿಗಳು ಮತ್ತು ಹೆಣ್ಣುಮಕ್ಕಳು ಘನತೆಯಿಂದ ಬದುಕುವಂತಾಗಲು ಏನು ಮಡಬೇಕು? ನೈತಿಕತೆ ಮತ್ತು ದಾಂಪತ್ಯದ ಮಹತ್ವವೇನು? ಲೋಕಕಲ್ಯಾಣದ ಆರ್ಥಿಕನೀತಿಯನ್ನು ಹೇಗೆ ಜಾರಿಗೊಳಿಸಬೇಕು? ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು? ಎಂಬುದರ ಬಗ್ಗೆ ಜಗಜ್ಜ್ಯೋತಿ ಬಸವೇಶ್ವರರು ತಮ್ಮ ವಚನಗಳಲ್ಲಿ ತಿಳಿಸುವುದರ ಮೂಲಕ ಶರಣ ಸಮಜದ ರೂಪು-ರೇಷೆಗಳ ಅರಿವು ಮೂಡಿಸ್ದಿದಾರೆ.

ಪ್ರಜಾಪ್ರಭುತ್ವದ ಸೃಷ್ಟಿಯಲ್ಲಿ ಜನಪ್ರಾತಿನಿಧ್ಯ, ಕಾಯಕ ಸಮನತೆ, ಸಾಮಜಿಕ ಪ್ರಜ್ಞೆ ಮತ್ತು ಮುಕ್ತ ಚಿಂತನೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಬಸವಣ್ಣನವರು ಸಾರಿ ಹೇಳಿದರು. ಬುದ್ಧನಲ್ಲಿ ಈ ವಿಚಾರಗಳು ಬೀಜರೂಪದಲ್ಲಿವೆ; ಆದರೆ ಬಸವಣ್ಣನವರಲ್ಲಿ ಅವು ಕ್ರಿಯರೂಪ ತಾಳಿದವು. ಹೀಗೆ ಬಸವಣ್ಣನವರು ಕನ್ನಡ ನಾಡಿನಲ್ಲಿ ಅಪೂರ್ವ ಪ್ರಯೋಗ ಮಡಿದರು. ಅವರ ಚಿಂತನೆಗಳು ಮಧ್ಯಯುಗದ ಅತ್ಯಾಧುನಿಕವಾಗ್ದ್ದ್ದಿದವು. ಈಗ ಅವು ನಮಗೆ ದಾರಿದೀಪಗಳಾಗಿವೆ.

ಆರೋಗ್ಯಪೂರ್ಣವಾದ ಸಮಜ ನಿಮಣದಲ್ಲಿ ಶರಣರ ‘ಗುರು-ಲಿಂಗ-ಜಂಗಮ’, ’ಕಾಯಕ-ಪ್ರಸಾದ-ದಾಸೋಹ’ ಮತ್ತು ’ಸಮರತಿ-ಸಮಕಳೆ-ಸಮಸುಖ’ ಪರಿಕಲ್ಪನೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಬಸವಣ್ಣನವರು ಈ ವಿಚಾರಗಳನ್ನು ಶರಣರ ಬದುಕಿನಲ್ಲಿ ಹಾಸುಹೊಕ್ಕಾಗಿಸಿದರು. ೨೧ನೇ ಶತಮನದಲ್ಲಿರುವ ನಾವೆಲ್ಲ ಎದುರಿಸುತ್ತಿರುವ ಸಮಸ್ಯೆಗಳಿಗೆ ಶರಣರ ಚಳವಳಿಯಲ್ಲಿ ಉತ್ತರ ಕಂಡುಕೊಳ್ಳುವುದು ಅವಶ್ಯವಾಗಿದೆ. ಶರಣರ ಚಳವಳಿ ಸಮಜವನ್ನು ಹೇಗೆ ಸಮೃದ್ಧವಾಗಿಡಬೇಕು ಎಂಬುದನ್ನು ಸೂಚಿಸುತ್ತದೆ. ಜಾತಿಸಂಘರ್ಷ, ಕೋಮುಗಲಭೆ, ಭಾಷಾ ಸಮಸ್ಯೆ, ನಿರುದ್ಯೋಗ, ವರ್ಗ, ವರ್ಣ ಮತ್ತು ಲಿಂಗಭೇದಗಳಿಂದ ಕೂಡಿದ ಸಮಜ ನರ ಸತ್ತ ಸಮಜವಾಗಿ ಮುಂದುವರಿಯುತ್ತಿರುತ್ತದೆ. ಇಂಥ ಸಮಜವನ್ನು ಅದು ಹೇಗೆ ಸಮೃದ್ಧಗೊಳಿಸಬೇಕು ಎಂಬುದನ್ನು ಶರಣರಿಂದ ಕಲಿಯಬೇಕಿದೆ. ಶರಣರನ್ನು ಅರಿಯದೆ ಸುವರ್ಣ ಕರ್ನಾಟಕದ ಆಚರಣೆ ಪರಿಪೂರ್ಣವಾಗದು.

ಕಾಯಕ ಜೀವಿಗಳಿಗೆ ಬೆಲೆ ಕೊಡದ ಸಮಜವು ಸುಲಿಗೆ ವ್ಯವಸ್ಥೆಯ ಸಮಜವಾಗಿರುತ್ತದೆ ಎಂಬುದನ್ನು ಶರಣರು ಪ್ರತಿಪಾದಿಸಿದರು. ಅಂತೆಯೆ ವೈದಿಕ ವ್ಯವಸ್ಥೆಯಲ್ಲಿ ಕಟ್ಟಕಡೆಯವರಾದ ಕಾಯಕಜೀವಿಗಳು ಶರಣರ ಸಾಮಜಿಕ ವ್ಯವಸ್ಥೆಯಲ್ಲಿ ಮೊಟ್ಟಮೊದಲನೆಯವರಾದರು.

ವೈದಿಕ ವ್ಯವಸ್ಥೆಯಲ್ಲಿನ ೩೩ ಕೋಟಿ ದೇವತೆಗಳು ಮತ್ತು ವರ್ಣ ವ್ಯವಸ್ಥೆಯಿಂದಾಗಿ ನಮ್ಮ ಸಮಜ ಜಾತಿ, ಉಪಜಾತಿ ಮತ್ತು ಅಸ್ಪೃಶ್ಯತೆಯಿಂದ ಬಳಲುತ್ತಿದೆ. ಮೇಲ್ವರ್ಗ, ಮೇಲ್ಜಾತಿಗಳು ಕೆಳವರ್ಗ ಮತ್ತು ಕೆಳಜಾತಿಗಳನ್ನು ಸುಲಿಗೆ ಮಡುತ್ತಲೇ ಇವೆ. ಪುರುಷ ಪ್ರಧಾನ ವ್ಯವಸ್ಥೆಯ ಕಾರಣ ಮಹಿಳೆ ಸಮನತೆ ಸಾಧಿಸಲು ನಿರಂತರ ಪ್ರಯತ್ನ ಮಡಬೇಕಿದೆ. ೮೫೦ ವರ್ಷಗಳ ಹಿಂದೆಯೆ ಇದನ್ನರಿತ ಶರಣರು, ’ಒಬ್ಬನೇ ದೇವರು, ಒಂದೇ ಜನಾಂಗ, ಒಂದೇ ಭೂಮಿ’ ಎಂಬುದನ್ನು ಪ್ರತಿಪಾದಿಸಿದರು. ಆ ಮೂಲಕ ವಿಶ್ವವ್ಯಾಪಿ ಚಿಂತನೆಗಳನ್ನು ಹರಡಿದರು. ಕೆಳವರ್ಗ ಮತ್ತು ಕೆಳಜಾತಿಗಳ ಜನರು, ಮಹಿಳೆಯರು ಮತ್ತು ಮೇಲ್ವರ್ಗದ ಪ್ರಜ್ಞಾವಂತರು ಶರಣರ ಚಿಂತನೆಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಆ ಮೂಲಕ ಜಾತಿಸಂಕರವಾಗಿ ಶರಣಸಂಕುಲದ ನಿಮಣವಾಯಿತು. ಆ ಮೂಲಕ ನವಮನವರ ಉದಯವಾಯಿತು.

ಇಂಥ ಉನ್ನತ ವಿಚಾರಗಳ ಪ್ರಚಾರಕ್ಕೆ ಶರಣರು ಜನಭಾಷೆಯದ ಕನ್ನಡವನ್ನೇ ಬಳಸಿದರು. ಅಲ್ಲಿಯ ವರೆಗೆ ಧರ್ಮಗುರುಗಳು ಸಂಸ್ಕೃತದ ಮೂಲಕ ದೇವರ ಜೊತೆ ವ್ಯವಹರಿಸುತ್ತ್ದಿದರು. ಸಂಸ್ಕೃತವನ್ನು ಅರಿಯದ ಜನಸಾಮನ್ಯರಿಗೆ ದೇವರ ಜೊತೆಗಿನ ಧರ್ಮಗುರಗಳ ವ್ಯವಹಾರವೇ ಗೊತ್ತಾಗುತ್ತಿರಲಿಲ್ಲ. ಹೀಗೆ ಭಾಷೆ ಎಂಬುದು ಶೋಷಣೆ ಮೂಲವಾಗುವುದನ್ನು ಶರಣರು ಗುರುತಿಸಿದರು. ಅಂತೆಯೆ ಜನಭಾಷೆಯದ ಕನ್ನಡವನ್ನೇ ಧರ್ಮದ ಭಾಷೆಯನ್ನಾಗಿಸಿದರು. ಹೀಗೆ ಮೊದಲಬಾರಿಗೆ ದೇವರು ಕನ್ನಡದಲ್ಲಿ ಮತನಾಡತೊಡಗಿದ. ನಮ್ಮ ನಾಡಿನ ಜನಸಾಮನ್ಯರು ದೇವರನ್ನು ಕನ್ನಡದ ಮೂಲಕ ಅರಿಯತೊಡಗಿದರು. ಮಧ್ಯವರ್ತಿಗಳನ್ನು ದೂರ ಸರಿಸಿ ದೇವರು ಮತ್ತು ಜನರ ಮಧ್ಯೆ ನೇರ ಸಂಪರ್ಕ ಉಂಟಾಗುವಂತೆ ಶರಣರು ಮಡಿದರು. ಈ ಎಲ್ಲ ಬದಲಾವಣೆಗಳ ಸೂತ್ರಧಾರಿ ಬಸವಣ್ಣನವರಾಗ್ದಿದರಿಂದ ಸಿದ್ಧರಾಮರಂಥ ಶರಣರು ಈ ಹೊಸ ಧರ್ಮವನ್ನು ಬಸವಧರ್ಮ ಎಂದು ಕರೆದರು.

ಕನ್ನಡವು ಧರ್ಮದ ಭಾಷೆಯದ ಕಾರಣ. ಬೇರೆ ಭಾಷೆ ಮತ್ತು ಪ್ರದೇಶಗಳಿಂದ ಬಂದ ಶರಣರು ಕೂಡ ಕನ್ನಡ ಕಲಿತು ಕನ್ನಡದಲ್ಲಿಯೇ ವಚನಗಳನ್ನು ಬರೆದರು. ಸಂಸ್ಕೃತದಲ್ಲಿ ಪಾಂಡಿತ್ಯ ಸಾಧಿಸಿದ ಶರಣರು ಕೂಡ ಕನ್ನಡದ ವಚನ ರಚನೆ ಮಡಿದರು. ಪ್ರತಿಯೊಬ್ಬರು ನೆಲದ ಭಾಷೆಯಲ್ಲಿ ವ್ಯವಹರಿಸುವುದರ ಮೂಲಕ ಐಕ್ಯ ಸಾಧಿಸಬೇಕೆಂಬುದು ಶರಣರ ಸಂದೇಶವಾಗಿದೆ. ನೆಲದ ಭಾಷೆಯದ ಕನ್ನಡದ ಬೆಳವಣಿಗೆಗೆ ಶರಣರು ಸಂಸ್ಕೃತವನ್ನು ಶಕ್ತಿವರ್ಧಕದಂತೆ ಬಳಸಿದರು. ಶರಣರ ವಚನಗಳು ಸಂಸ್ಕೃತದ ಉದ್ಧರಣೆಗಳಿಂದ ತುಂಬಿಹೋಗಿವೆ. ಶರಣರ ವಚನಗನ್ನಡ ಹೀಗೆ ಸಮೃದ್ಧವಾಯಿತು. ಭಾಷೆಯನ್ನು ಬೆಳೆಸುವ ಕ್ರಮವಿದು.

ಕನ್ನಡ ಭಾಷೆ ಪೂರ್ವದ ಹಳೆಗನ್ನಡ, ಹಳೆಗನ್ನಡ ಮತ್ತು ನಡುಗನ್ನಡ ಅವಸ್ಥೆಗಳನ್ನು ದಾಟಿ ಹೊಸಗನ್ನಡವಾಗಿ ನಿಂತಿದೆ. ಹೀಗೆ ಕನ್ನಡ ಭಾಷೆ ಅಭಿವೃದ್ಧಿ ಹೊಂದುವಾಗ ಅನೇಕ ಭಾಷೆಗಳ ಶಬ್ದಗಳನ್ನು ತನ್ನದಾಗಿಸಿಕೊಂಡಿದೆ. ಕನ್ನಡ ಭಾಷೆಯಲ್ಲಿ ಮೂಲ ಶಬ್ದಗಳಿಗಿಂತ ಪರಭಾಷೆಯ ಶಬ್ದಗಳೇ ಹೆಚ್ಚಾಗಿವೆ. ಸಂಸ್ಕೃತ, ಅರಬಿ, ಪಾರ್ಸಿ, ಉರ್ದು, ಹಿಂದಿ, ಮರಾಠಿ, ಕೊಂಕಣಿ, ತೆಲಗು, ತಮಿಳು ಹೀಗೆ ಅನೇಕ ಭಾಷೆಗಳ ಶಬ್ದಗಳು ಕನ್ನಡದಲ್ಲಿ ಬಂದು ಕನ್ನಡಮಯವಾಗಿ ಕನ್ನಡದ ಶಬ್ದಸಂಪತ್ತನ್ನು ಹೆಚ್ಚಿಸಿವೆ. ಆದರೆ ಹೀಗೆ ವೈವಿಧ್ಯಮಯವಾದ ಕನ್ನಡವನ್ನು ಏಕತಾನತೆಯ ಕನ್ನಡವಾಗಿಸಲು ಕೆಲವರು ಯತ್ನಿಸಿದರು. ಕನ್ನಡ ಆಡಳಿತ ಭಾಷೆಯಗಿಸುವ ನೆಪದಲ್ಲಿ ಪರಭಾಷೆಯ ಕನ್ನಡಮಯ ಶಬ್ದಗಳ ಬದಲಿಗೆ ಕನ್ನಡಮಯವಾಗದೆ ಕೃತ್ರಿಮವಾಗಿ ಉಳಿಯುವಂಥ ಸಂಸ್ಕೃತ ಶಬ್ದಗಳನ್ನು ಅಧಿಕೃತವಾಗಿ ಜಾರಿಗೊಳಿಸಿದರು. ಆರಕ್ಷಕ, ಅಭಿಯಂತರ, ಅಪರ ಮತ್ತು ನ್ಯಾಯವಾದಿಯಂಥ ಸಂಸ್ಕೃತ ಪದಗಳು ಇಂದಿಗೂ ಕನ್ನಡಮಯವಾಗಿಲ್ಲ. ಕನ್ನಡದ ಶಕ್ತಿಯನ್ನು ವರ್ಧಿಸುವುದಕ್ಕಾಗಿ ೧೨ನೇ ಶತಮನದಲ್ಲಿ ಸಂಸ್ಕೃತವನ್ನು ಬಳಸಿಕೊಂಡಂತೆ ೨೧ನೇ ಶತಮನದಲ್ಲಿ ಇಂಗ್ಲಿಷ್ ಅನ್ನು ಬಳಸಿಕೊಳ್ಳುವುದು ಅವಶ್ಯವಾಗಿದೆ. ಇದು ಕಾಲದ ಕರೆ. ಹೀಗೆ ಭಾಷಾನೀತಿಯನ್ನು ರೂಪಿಸುವಲ್ಲಿ ಶರಣರು ನಮಗೆ ಮರ್ಗದರ್ಶಕರಾಗ್ದ್ದಿದಾರೆ.

ಶರಣರ ಬಹುದೊಡ್ಡ ಸಾಧನೆ ಎಂದರೆ. ಕಾಯಕವನ್ನು ಜಾತಿಯಿಂದ ಮುಕ್ತಗೊಳಿಸ್ದಿದು ಮತ್ತು ಎಲ್ಲ ಕಾಯಕಗಳನ್ನು ಸಮನವಾಗಿ ನೋಡ್ದಿದು. ಯವುದೇ ಕಾಯಕದಿಂದ ಯವುದೇ ವ್ಯಕ್ತಿ ಕೀಳರಿಮೆಯಿಂದ ಬಳಲಬಾರದು ಎಂಬುದು ಶರಣರ ನಿಲುವಾಗಿತ್ತು. ಕಸಗುಡಿಸುವವರು, ತೊಗಲು ಹದ ಮಡುವವರು, ಚಪ್ಪಲಿ ಹೊಲಿಯುವವರು, ಬಟ್ಟೆ ತೊಳೆಯುವವರು, ಸ್ಮಶಾನ ಕಾಯುವವರು ಮುಂತಾದವರು ಸತ್ಯ ಶುದ್ಧ ಕಾಯಕದಿಂದ ಗುಣಾಢ್ಯರಾಗಿ ಬದುಕಿದರು. ಪ್ರಧಾನಿ ಬಸವಣ್ಣನವರು ಮತ್ತು ಕಾಯಕ ಜೀವಿಗಳ ಮಧ್ಯೆ ಯವುದೇ ವ್ಯತ್ಯಾಸವಿರಲಿಲ್ಲ, ಶರಣರು ಇಂಥ ಅನುಮಪ ಸಮಜವನ್ನು ಸೃಷ್ಟಿಸಿದರು!

ಕಾಯಕವೆಂಬುದು ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಮತ್ರ ಮಡುವ ಕೆಲಸವಲ್ಲ. ಸ್ವಾವಲಂಬನೆ, ಕುಟುಂಬ ಪ್ರೀತಿ ಮತ್ತು ಸಾಮಜಿಕ ಪ್ರಜ್ಞೆಯೊಂದಿಗೆ ಮಡುವ ಮನವ ಕರ್ತವ್ಯವಾಗಿದೆ. ಅಂತೆಯೆ ಅದು ಕೂಡ ಲಿಂಗಪೂಜೆಯೇ ಆಗಿದೆ. ಕಾಯಕವೇ ದೇವರನ್ನು ಕಾಣುವ ಮರ್ಗವಾಗಿದೆ. ಕಾಯಕವು ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಕೂಡಿದೆ. ಕಾಯಕದ ಮೂಲಕ ಪಡೆದ್ದದಕ್ಕೆ ’ದುಡಿದು ಗಳಿಸ್ದಿದೇವೆ’ ಎಂಬ ಅಹಂಭಾವ ಮೂಡದೆ ಇರುವಂತೆ ಪ್ರಸಾದ ತತ್ತ್ವ ನಮ್ಮನ್ನು ರಕ್ಷಿಸುವುದು. ನಾವು ಕಾಯಕದ ಮೂಲಕ ಪಡೆದ್ದದನ್ನು ದೇವರ ಪ್ರಸಾದವೆಂದು ಭಾವಿಸಬೇಕು. ಆ ಪ್ರಸಾದವನ್ನು ತಮಗೆಷ್ಟು ಬೇಕೋ ಅಷ್ಟನ್ನು ಮತ್ರ ಬಳಸಿಕೊಂಡು ಮಿಕ್ಕ್ದಿದನ್ನು ದಾಸೋಹದ ಮೂಲಕ ವಿನಮ್ರವಾಗಿ ಸಮಜಕ್ಕೆ ಅರ್ಪಿಸಬೇಕು ಎಂಬುದು ಶರಣರ ಆಶಯವಾಗಿದೆ. ಇಂಥ ವ್ಯವಸ್ಥೆಯಲ್ಲಿ ಯರೂ ನಿರುದ್ಯೋಗಿಗಳಾಗಿರುವುದಿಲ್ಲ. ವಿವಿಧ ಕಾಯಕಗಳ ಕಾರಣ ಯರೂ ಅಪಮನಕ್ಕೊಳಗಾಗುವುದಿಲ್ಲ. ಯರೂ ಹಸಿವಿನಿಂದ ಬಳಲುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯರೂ ಒಂಟಿತನವನ್ನು ಅನುಭವಿಸುವುದಿಲ್ಲ. ಅಂತೆಯೆ ಬಸವಣ್ಣನವರು ಪ್ರಧಾನಿಯಗ್ದಿದ ಕಲ್ಯಾಣದಲ್ಲಿ ಕೊಡುವವರ‍್ದಿದರು ಆದರೆ ಬೇಡುವವರ‍್ದಿದಿಲ್ಲ. ಊರ ಮುಂದೆ ಹಾಲ ಹಳ್ಳ ಹರಿಯುತ್ತಿತ್ತು. ಅಂದರೆ ಜನರ ಬದುಕು ಸಮೃದ್ಧವಾಗಿತ್ತು.

ಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಡು ಎಂದು ಭಗವದ್ಗೀತೆ ಹೇಳುತ್ತದೆ. ಆದರೆ ಬಸವಣ್ಣನವರು ‘ಲಿಂಗವ ಪೂಜಿಸಿ ಫಲವೇನಯ’ ಎಂದು ಕೇಳುತ್ತಾರೆ. ಪ್ರತಿಯೊಬ್ಬ ಕಾಯಕ ಜೀವಿಗೆ ಫಲಾಪೇಕ್ಷೆ ಇರಬೇಕು ಎಂಬುದು ಅವರ ವಾದವಾಗಿದೆ. ಲಿಂಗಪೂಜೆ ಕೂಡ ಒಂದು ಕಾಯಕವೇ ಆಗಿದೆ. ಆದರಿಂದ ಲಿಂಗಪೂಜೆಯಲ್ಲೂ ಬಸವಣ್ಣನವರಿಗೆ ಫಲಾಪೇಕ್ಷೆ ಇದೆ. ಇದೆಂಥ ಕಾಯಕ, ಅದೆಂಥ ಫಲ ಎಂಬ ಭಾವ ಮೂಡಬಹುದು. ಆದರೆ ಲಿಂಗಪೂಜೆ ಎಂಬುದು ಅನುಭಾವದ ಕಾಯಕವಾಗಿದೆ ಎಂಬುದನ್ನು ಬಸವಣ್ಣನವರು ಸೂಚಿಸ್ದಿದಾರೆ. ಇದರಿಂದ ಸಿಗುವ ಫಲವೆಂದರೆ ಒಳಲೋಕದ ಆನಂದ ಮತ್ತು ಹೊರಲೋಕದ ಅಭ್ಯುದಯ ಪ್ರಜ್ಞೆ. ’ಲಿಂಗವ ಪೂಜಿಸಿ ಫಲವೇನಯ ಸಮರತಿ, ಸಮಕಳೆ, ಸಮಸುಖವನರಿಯದನ್ನಕ?’ ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಹೆಣ್ಣು ಗಂಡು ಸಮನವೆಂದು ಸಾರುವುದೇ ಸಮರತಿ ಪ್ರಜ್ಞೆ. ಬ್ರಹ್ಮತೇಜ, ಕ್ಷಾತ್ರ ತೇಜಗಳಿಲ್ಲ ಇರುವುದೊಂದೇ ಮನವ ತೇಜ ಎಂದು ಸಾರುವುದೇ ಸಮಕಳೆ. ಈ ಸಮಕಳೆ ಪ್ರಜ್ಞೆ ವರ್ಣಭೇದ ನೀತಿಯನ್ನು ಹೊಡೆದುಹಾಕುತ್ತದೆ. ಬಡವರಿಗೊಂದು ಸುಖ, ಶ್ರೀಮಂತರಿಗೊಂದು ಸುಖ ಎಂಬುದಿಲ್ಲ ಎಂಬುದನ್ನು ಅರಿಯುವುದೇ ಸಮಸುಖ ಪ್ರಜ್ಞೆ. ಈ ರೀತಿ ವಿಶ್ವಮನವನಾಗುವುದೇ ಲಿಂಗಪೂಜೆಯ ಫಲ!

ಹೀಗೆ ಶರಣರು ಮನವರನ್ನು ವಿಶ್ವಮನವರನ್ನಾಗಿ ಮಡಲು ಯತ್ನಿಸಿದರು. ಶರಣರೆಂದರೆ ವಿಶ್ವಮನವರು. ಜಗನ್ನಿಯಮಕನಿಗೆ ಮತ್ರ ಶರಣರಾಗುವವರು. ಹೇಡಿಗಳಂತೆ ಉಳ್ಳವರಿಗೆ ಶರಣಾಗತರಾಗುವವರಲ್ಲ. ದಾಕ್ಷಿಣ್ಯಪರರಲ್ಲ, ಅನ್ಯಾಯದಿಂದ ಕೂಡಿದ ಲೋಕದ ವಿರೋಧಿಗಳು. ಸರ್ವಾಂಗ ಕಲಿಗಳು, ಸ್ವತಂತ್ರ ಧೀರರು. ಅಂತೆಯೆ ಅವರಿಗೆ ಅನ್ನದ ಋಣ (ಜೋಳವಾಳಿ) ಎಂಬ ಮೌಲ್ಯದಲ್ಲಿ ನಂಬಿಕೆ ಇರಲಿಲ್ಲ. ತತ್ತ್ವಕ್ಕಾಗಿ ಮರಣವನ್ನು ಕೂಡ ಆಹ್ವಾನಿಸುವ ಮೌಲ್ಯ ಅವರದಾಗಿತ್ತು. ‘ಜೋಳವಾಳಿಯನಲ್ಲ, ವೇಳೆವಾಳಿಯವ ನಾನಯ’ ಎಂದು ಬಸವಣ್ಣನವರು ಹೇಳ್ದಿದು ಇದೇ ಅರ್ಥದಲ್ಲಿ.

ಹೀಗೆ ಶರಣರು ಆತ್ಮಕಲ್ಯಾಣಕ್ಕಾಗಿ ಇಷ್ಟಲಿಂಗವನ್ನು ಪೂಜಿಸುತ್ತ ಮತ್ತು ಲೋಕಕಲ್ಯಾಣಕ್ಕಾಗಿ ಜಂಗಮಲಿಂಗ (ಸಮಜವೆಂಬ ದೇವರು) ವನ್ನು ದಾಸೋಹದ ಮೂಲಕ ಪೂಜಿಸುತ್ತ ಇಹ ಲೋಕದ ಬದುಕನ್ನು ಹಸನುಗೊಳಿಸಿದರು. ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವಾಗಿಸಿದರು.

ಈ ಲೋಕ ಕರ್ತಾರನ ಕಮ್ಮಟವಾಗಿರುವುದರಿಂದ ಮತ್ತು ದೇವರೇ ಈ ಲೋಕವ್ಯವಹಾರದ ವ್ಯಾಪಾರಿಯಗಿರುವುದರಿಂದ ‘ಕಾಣಿಯ ಸೋಲ ಅರ್ಧಗಾಣಿಯ ಗೆಲ್ಲ’ ಎಂದು ಬಸವಣ್ಣನವರು ಹೇಳುತ್ತಾರೆ. ಪೈಸೆ, ಅರ್ಧಪೈಸೆಯಷ್ಟು ಕೂಡ ಹೆಚ್ಚುಕಡಿಮೆಯದಗಂತೆ ದೇವರು ನೋಡಿಕೊಳ್ಳುತ್ತಾನೆ ಎಂದರೆ ಜೀವಜಾಲ ಸಮತೋಲನವನ್ನು ಕಾಪಾಡಿಕೊಳ್ಳುತ್ತಾನೆ ಎಂದರ್ಥ. ಇಂಥ ದೇವರ ಉಪಾಸಕರ ಮೇಲೆ ಪರಿಸರ ರಕ್ಷಣೆಯ ಹೊಣೆ ಇದೆ ಎಂದೇ ಅರ್ಥ. ಹೀಗೆ ಶರಣರು ಇಡೀ ಜೀವಜಗತ್ತಿನ ಬಗ್ಗೆ ಕಾಳಜಿ ಹೊಂದ್ದಿದರು. ಅಂತೆಯೆ ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಕುಲಜರಾದರು.

ಇಂಥ ಮನಸ್ಥಿತಿಗೆ ‘ಗುರು-ಲಿಂಗ-ಜಂಗಮ’ವೇ ಆಧಾರವಾಗಿದೆ. ಗುರುವೆಂಬ ಅರಿವನ್ನು, ಆತ್ಮಜ್ಞಾನವೆಂಬ ಲಿಂಗವನ್ನು ಮತ್ತು ಸಕಲಜೀವಾತ್ಮರೆಂಬ ಜಂಗಮವನ್ನು ದಾಸೋಹಂಭಾವದಿಂದ ಕಾಣಬೇಕು. ಇದುವೇ ತ್ರಿವಿಧ ದಾಸೋಹ. ಇಂಥ ದಾಸೋಹಿಯೇ ವಿಶ್ವಮನವನಾದ ಶರಣ.

’ಶರಣ ಸತಿ ಲಿಂಗ ಪತಿ’ ಎಂದು ಹೇಳುವುದರ ಮೂಲಕ ಶರಣರು ಸ್ತ್ರೀವಾದಿ ನೆಲೆಯಲ್ಲಿ ಜಗತ್ತನ್ನು ನೋಡಿದರು. ಅಂತೆಯೆ ಅನೇಕ ವಚನಕಾರ್ತಿಯರು ಏಕಕಾಲಕ್ಕೆ ಸಮಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ೩೩ ವಚನಕಾರ್ತಿಯರ ವಚನಗಳು ಸಿಕ್ಕಿವೆ. ಒಂದು ಕಾಲಮನದಲ್ಲಿ ಇಷ್ಟೊಂದು ಮಂದಿ ಮೌಲಿಕ ಮಹಿಳಾ ಸಾಹಿತಿಗಳು ಕಂಡುಬಂದ್ದದು ವಿಶ್ವದ ಇತಿಹಾಸದ ಅನುಪಮವಾಗಿದೆ.

ಅನುಭವ ಮಂಟಪವೆಂಬ ಸಮಜೋ ಧಾರ್ಮಿಕ ಸಂಸತ್ತಿನಲ್ಲಿ ೭೭೦ ಅಮರಗಣಂಗಳು ವಿವಿಧ ಸಮಜದ ಪ್ರತಿನಿಧಿಗಳಾಗ್ದಿದರು. ಹಡಪದ, ಮಡಿವಾಳ, ಡೋಹರ, ಸಮಗಾರ, ಮೇದಾರ, ಮದಾರ ಮುಂತಾದ ಸಮುದಾಯಗಳ ಪ್ರತಿನಿಧಿಗಳು ಅಲ್ಲ್ದಿದರು. ಹೀಗೆ ಶರಣರು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದರು.

ಹೀಗೆ ಶರಣರ ಧರ್ಮವು ದಯೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಮೂಲಾಧಾರವಾಯಿತು. ಜೀವಕಾರುಣ್ಯದಿಂದ ಕೂಡಿದ ಪ್ರಜಾಪ್ರಭುತ್ವವೇ ೨೧ನೇ ಶತಮನದ ಧರ್ಮವಾಗಿದೆ. ಈ ಧರ್ಮದ ಮೂಲ ಶರಣಧರ್ಮವಾದ ಬಸವಧರ್ಮದಲ್ಲಿದೆ.

ಜನರನ್ನು ಹೀನಾಯ ಸ್ಥಿತಿಗೆ ತಳ್ಳುವ ಮೂಢನಂಬಿಕೆ, ಕರ್ಮಸಿದ್ಧಾಂತ, ಜಾತಿ, ಅಸ್ಪೃಶ್ಯತೆ, ಹೆಣ್ಣನ್ನು ಭೋಗವಸ್ತುವಾಗಿ ನೋಡುವ ದೃಷ್ಟಿಕೋನ, ಧನಮದದಂಥ ಅನಿಷ್ಟಗಳ ವಿರುದ್ಧ ಹೋರಾಡುತ್ತ ಮನವ ಏಕತೆಯನ್ನು ಸಾರಿದ ಧರ್ಮವೆಂದರೆ ಬಸವಧರ್ಮ. ಇಂಥ ಬಸವಧರ್ಮದ ಆಚರಣೆ ಎಂದರೆ ಪ್ರಜಾಪ್ರಭುತ್ವದ ಆಚರಣೆ, ಕಳಬೇಡ, ಕೊಲಬೇಡ ಎಂದು ಸಾರುವ ಶಾಂತಿ ಮತ್ತು ಸುವ್ಯವಸ್ಥೆ ಪಾಲನೆ, ಕಾಯಕ ಎಂದು ಹೇಳುವ ಸಮೃದ್ಧ ಸಮಜದ ರಚನೆ, ಪ್ರಸಾದ ಎಂದು ಹೇಳುವ ಅನ್ನದ ಅಗುಳನ್ನೂ ರಕ್ಷಿಸುವ ಯೋಜನೆ, ದಾಸೋಹ ಎಂದು ಹೇಳುವ ಮೇಲು ಕೀಳುಗಳಿಲ್ಲದೆ ಸಕಲಜೀವಾತ್ಮರ ಸಂರಕ್ಷಣೆ.

ಹೀಗೆ ಕನ್ನಡ ಧರ್ಮವಾದ ಬಸವಧರ್ಮ ಕಲ್ಯಾಣದ ಬೆಳಕಾಗಿದೆ; ಕನ್ನಡದ ಕಂಪಾಗಿದೆ. ಜಗತ್ತಿನ ಎಲ್ಲ ಮನವೀಯ ಮೌಲ್ಯಗಳ ಆಗರವಾಗಿದೆ. ರಾಜಕೀಯದಲ್ಲಿ ನುಸುಳದೆ ರಾಜಕಾರಣಿಗಳಿಗೂ ಮರ್ಗದರ್ಶನ ಮಡುವ ಧರ್ಮವಾಗಿದೆ.

ಕನ್ನಡ ಜನಪದರ ಧರ್ಮವಾದ ಬಸವಧರ್ಮ ಎಂಬುದು ಕನ್ನಡ ಸಂಸ್ಕೃತಿ ಮತ್ತು ಪರಂಪರೆಯ ದ್ಯೋತಕವಾಗಿದೆ. ಈ ಧರ್ಮ ಎಲ್ಲ ಜನವರ್ಗದವರ ಸಾಮಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಚಳವಳಿಯಗಿದೆ. ಈ ಚಳವಳಿ ನಿರಂತರವಾಗಿ ಮುಂದುವರಿಯುವಂತೆ ಮಡುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ.

ಸುವರ್ಣ ಕರ್ನಾಟಕ ಆಚರಣೆಯಲ್ಲಿ ಶರಣರ ನವನವೋನ್ಮೇಷಶಾಲಿನಿಯದ ವಿಚಾರಧಾರೆಯನ್ನು ಲೋಕ ಅರಿಯುವಂತೆ ಮಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಮಹಾನ್ ಆಡಳಿತಗಾರರೂ ಆಗ್ದಿದ ಬಸವಣ್ಣನವರ ಬೃಹತ್ ಮೂರ್ತಿಯನ್ನು ವಿಧಾನಸೌಧದ ಮುಂದೆ ಪ್ರತಿಷ್ಠಾಪಿಸುವುದು ಕೂಡ ಅವಶ್ಯವಾಗಿದೆ. (ಬಸವಣ್ಣನವರಿಗೆ ವ್ಯಕ್ತಿಪೂಜೆಯಲ್ಲಿ ನಂಬಿಕೆ ಇರಲಿಲ್ಲ, ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸುವುದು ಬಸವ ತತ್ತ್ವಕ್ಕೇ ವಿರುದ್ಧವಾಗಿದೆ. ಅಂತೆಯೆ ವಿಧಾನಸೌಧದ ಮುಂದೆ ಪ್ರಜಾಪ್ರಭುತ್ವದ ಸಂಕೇತವಾಗಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪನೆ ಮಡುವುದು ಅವಶ್ಯವಾಗಿದೆ ಹೊರತಾಗಿ ವ್ಯಕ್ತಿಪೂಜೆಗಾಗಿ ಅಲ್ಲ.)