You are hereನೆನಪು

ನೆನಪು


ಹಾಡುವ ಹಕ್ಕಿ ಓಡುವ ಬಸ್ಸು
ಧುಮುಕುವ ಜೋಗದ ಜಲವನು ಕಂಡರೆ
ನಿನ್ನ ನೆನಪು ಗೆಳತಿ
ಕರೆಯುವ ಹಸುಗಳು ಕುಣಿಯುವ ನವಿಲು
ಚಂಗನೆ ನೆಗೆಯುವ ಜಿಂಕೆಯ ಕಂಡರೆ
ನಿನ್ನ ನೆನಪು ಗೆಳತಿ

ಕೆಂಪು ಕನಸುಗಳ ಈ ನೆಲದಲ್ಲಿ
ಕಂಪಾಗುವ ಬಯಕೆಯ ಬಿತ್ತಿ
ಬಣ್ಣಬಣ್ಣಗಳ ಹೂ ಬೆಳೆದೆ
ಹಾಡಿನ ಆನಂದದಲಿ ಮುಗಿಲುದ್ದಕು ನಗೆಚೆಲ್ಲಿ
ಮನ ಸೆಳೆದೆ

ಮಿಂಚುಗಳ ಬಳ್ಳಿಯಲಿ ಮೂಡಿ ನಡೆಯುವ ಬೆಳಕೆ
ಬೆಟ್ಟಗುಲಗಂಜಿಗಳ ಒಂದು ಮಾಡುವ ಕನಸೆ
ನೀನು ಬಯಸುವ ಬಣ್ಣ
ನೀನು ಮೆಚ್ಚುವ ಲೋಕ
ತಿಳಿಯದಲ್ಲೆ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು