You are hereಗೌಳಗಿತ್ತಿಯ ಹಾಡು

ಗೌಳಗಿತ್ತಿಯ ಹಾಡು


ಮಾವಿನ ತೋಪು ಫಲವತಿಯಾಗಿ
ಬಣ್ಣವೇರಿದಾಗ
ಪಟ್ಟಣದಿಂದ ನಮ್ಮೀ ಊರಿಗೆ
ಗಾಡಿಯೊಂದು ಬಂತು
ಗಾಡಿಯು ಬಂದು ಬೆರಗನು ತಂದು
ಸುಂದರಾಂಗ ಇಳಿದ

ಊರ ಹುಡುಗಿಯರು ಮರವನು ಹತ್ತಿ
ಹಣ್ಣ ಕೀಳುವಾಗ
ಚಿಗುರು ಮೀಸೆ ಹುಡುಗ
ಮರದ ಕೆಳಗೆ ನಿಂತು
ನೋಡಬೇಕಾದ್ದ ನೋಡೇ ಬಿಟ್ಟ
ತುಂಟ ನಗೆಯನು ನಕ್ಕೇ ಬಿಟ್ಟ
ಹೊಳೆವ ಕಣ್ಣ ಹುಡುಗ

ಮಾವಿನ ಹಣ್ಣನು ತಿನ್ನಲು ಕುಂತರೆ
ಹುಡುಗನ ಸವಿನೆನಪು
ಮನಸನು ಕದ್ದು ದೂರಕೆ ಹೋದ
ತುಂಟನ ಸವಿನೆನಪು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು