You are hereಉಡುಪಿ ಸಂವಾದದ ಪತ್ರಿಕಾ ವರದಿಗಳು

ಉಡುಪಿ ಸಂವಾದದ ಪತ್ರಿಕಾ ವರದಿಗಳು


By admin - Posted on 16 April 2009

ಜನಪರ ವೇದಿಕೆ-ಉಡುಪಿ ಘಟಕ ಮತ್ತು www.vicharamantapa.net 29-03-2009 ರಂದು ಉಡುಪಿಯಲ್ಲಿ ಏರ್ಪಡಿಸಿದ್ದ "ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ: ನಮ್ಮೆದುರಿನ ಸವಾಲುಗಳು" ಸಂವಾದ ಕಾರ್ಯಕ್ರಮದ ಪತ್ರಿಕಾ ವರದಿಗಳು ಇವು. ಕಾರ್ಯಕ್ರಮಕ್ಕೆ ಬಂದ, ಸಂವಾದದಲ್ಲಿ ಪಾಲ್ಗೊಂಡ, ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರಿಗೂ ವಿಚಾರಮಂಟಪ.ನೆಟ್ ಪರವಾಗಿ ಧನ್ಯವಾದಗಳು.

ರವಿ...


ವಾರ್ತಾ ಭಾರತಿ

ಪ್ರಜಾವಾಣಿ

ಕನ್ನಡಪ್ರಭ

ವಿಜಯ ಕರ್ನಾಟಕ


ಇದೇ ಕಾರ್ಯಕ್ರಮದ ಮತ್ತೊಂದಷ್ಟು ಚಿತ್ರಗಳು ಅಂದೇ ತೆರೆಯಲಾದ ಜನಪರ ವೇದಿಕೆಯವರ ಬ್ಲಾಗ್‌ನಲ್ಲೂ ಇವೆ. ಈ ಕಾರ್ಯಕ್ರಮದ ವಿಡಿಯೊ ಸಹ ಮಾಡಲಾಗಿದೆ. ಅದನ್ನು ಎಡಿಟ್ ಮಾಡಿ ಇಂಟರ್‍ನೆಟ್‌ಗೆ ಏರಿಸಿದಾದಲ್ಲಿ ಅದರ ಲಿಂಕ್ ಅನ್ನೂ ಮುಂದೆ ವಿಚಾರ ಮಂಟಪದಲ್ಲಿ ಕೊಡಲಾಗುತ್ತದೆ.

ಆತ್ಮೀಯ ರವಿಯವರೆ,
ಕಳೆದ ಎರಡು ವರ್ಸಗಳಿಂದ ನಿಮ್ಮ ಚಟುವಟಿಕೆಗಳನ್ನು ಗಮನಿಸುತ್ತಿದ್ದೇನೆ. ನಿಮ್ಮ ಕನ್ನಡ, ಇಂಗ್ಲೀಸ, ಬ್ಲಾಗಗಳನ್ನು ಓದುತ್ತಾ ಬಂದಿದ್ದೇನೆ. ವಾರ್ತಾಭಾರತಿ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ನಿಮ್ಮನ್ನು ಒಮ್ಮೆ ಪ್ರೆಸ್ ಕ್ಲಬ್ಬಲ್ಲಿ ಮಾತನಾಡಿಸಿದ್ದು ಉಂಟು. ಒಮ್ಮೆ ಏಕಾಂಗಿಯಾಗಿ ಮತ್ತೋಮ್ಮೆ ಗುಂಪು ಕಟ್ಟಿಕೊಂಡು ಕೋಮುವಾದ, ಚುನಾವಣೆಯ್ ಅವ್ಯವಸ್ತೆ ಹೋರಾಡುತ್ತಲೆ ಬಂದಿದ್ದಿರಿ, ಗ್ರೇಟ್.
ಮೊನ್ನೆ ಅಚಾನಕ್ಕಾಗಿ ನಿಮ್ಮ ವಿಚಾರ ಮಂಟಪವನ್ನು ನೋಡುವ್ ಭಾಗ್ಯ ಸಿಕ್ಕಿತು. ಬರೋಬ್ಬರಿ ಮೂರು ದಿನಗಳವರೆಗೆ ನಿಮ್ಮ ಈ ವಿಚಾರಮಂಟಪದಲ್ಲಿಯೇ ತಂಗಿ ಓದುತ್ತಾ ನನ್ನನ್ನು ನಾನು ಮರೆತಿದ್ದೇನೆ. ನಿಮ್ಮ ಬ್ಲಾಗಿನೊಳಗೊಂದು ಸುತ್ತು, ಒಳಗೆ ಹೊಕ್ಕಸ್ಟು ಆಳಕ್ಕೆ ಎಳೆದೊಯ್ಯುತ್ತದೆ. ನನಗೆ ನೀಜಕ್ಕೂ ಅಂತರ್ಜಾಲದಲ್ಲಿ ಕನ್ನಡ ಬಳಕೆಯ ಸುಗ್ಗಿ ನಡೆದಿದೆ ಅನಿಸಿತು. ಅದೆಲ್ಲ ಇರಲಿ, ನಿಮ್ಮ ವಿಚಾರಮಂಟಪದಲ್ಲಿ ನನ್ನ ಕತೆಯನ್ನು(ವಿಕ್ರಾಂತ ಕರ್ನಾಟಕ ಪತ್ರಿಕೆಯಲ್ಲಿ ಗಾಂದೀ ಕತಾಸ್ಪರ್ದೆಯಲ್ಲಿ ಪ್ರಕಟವಾದ ಕತೆ) ಪ್ರಕಟಿಸಿದ್ದಿರಿ! ನಿಮ್ಮಿಂದ ಪ್ರಭಾವಿತನಾದ ನಾನು ಒಂದು ಬ್ಲಾಗಿಗೆ( ಗ್ರಾಮಭಾರತಿ) ಜನ್ಮ ನೀಡಿದ್ದೇನೆ. ವೀಕ್ಸಿಸಿ ಸಲಹೆ ನೀಡಿ.
ಮತ್ತೊಂದು ವಿನಂತಿ, ನಾನೀಗ ಸದ್ಯ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಸ್ಟಾನದ ಫೆಲೋಶಿಫ್ ಆಯ್ಕೆಯಾಗಿ ಎನ್.ಜಿ.ಒ. ನಿರ್ವಹಣೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಇದು ಮುಗಿದ ನಂತರ ಒಂದು ಗ್ರಾಮ್ ವಿಕಾಸಕ್ಕೆ ಸಂಬಂದಿಸಿದ ಸಂಸ್ತೆಯೊಂದನ್ನು ಹುಟ್ಟುಹಾಕಬೇಕೆಂದಿದ್ದೇನೆ. ಅದಕ್ಕೆ ನಿಮ್ಮ ನೆರವೆನಾದರೂ ಸಿಗಬಹುದೆ? ನಿಮ್ಮ ತಿಳಿಸಿ.

ಓದುಗರ ಅಭಿಪ್ರಾಯಗಳು

Search