You are hereForums / ಸಾಮಾಜಿಕ ವಿಚಾರಗಳು / Hindu Komuvaada Beda Adare Muslim Komuvaadakke bembala idu Sariye?

Hindu Komuvaada Beda Adare Muslim Komuvaadakke bembala idu Sariye?


By Rajendra - Posted on 30 March 2009

Maanya Sampaadakarige

Karaavali yalliruva swayam goshita 'sick'larist galu muslim komuvadi sangatanegalige bembala nidutiruvudu sariyaadare bahusankyataru hindu komuvaadigalige bembala suchisidare hege tappagutade

ಇಲ್ಲಿ ಮುಸ್ಲಿಂ ಮತ್ತು ಹಿಂದೂ ಕೋಮುವಾದದ ಪ್ರಶ್ನೆ ಉದ್ಭವಿಸುವುದಿಲ್ಲ. ಕೋಮುವಾದಕ್ಕೆ ಬಲಿಯಾಗುವ ಸಾಮಾನ್ಯ ಜನತೆ ಕೋಮುವಾದಿಗಳಾಗಿರುವುದಿಲ್ಲ ಎಂಬುದನ್ನು ಗಮನಿಸಿ. ಇದೇ ಭಯೋತ್ಪಾದನೆಗೂ ಅನ್ವಯಿಸುತ್ತದೆ. ಕೋಮುವಾದವನ್ನು ಬೆಳೆಸಿ ಪೋಷಿಸುವುದು ಮತೀಯ ಶಕ್ತಿಗಳು. ಅದು ಹಿಂದೂ, ಇಸ್ಲಾಂ ಮತ್ತು ಕ್ರೈಸ್ಥ ಮತಗಳಲ್ಲಿ ಕಂಡುಬರುತ್ತವೆ. ವರುಣ್ ಗಾಂಧಿ, ಪ್ರವೀಣ್ ತೊಗಡಿಯಾ, ಪ್ರಮೋದ್ ಮುತಾಲಿಕ್, ಶಹಬುದ್ದೀನ್ ಮತ್ತು ಲಷ್ಕರ್ ಸಂಘಟನೆಗಳ ಪ್ರತಿಪಾದಕರು ಆಡುವ ಮಾತುಗಳು ಒಂದು ಸಂಸ್ಕ್ರುತಿಯನ್ನು ಬಿಂಬಿಸುತ್ತವೆ. ಎಲ್ಲರಲ್ಲೂ ಇರುವ ಸಮಾನ ಧ್ಯೇಯವೆಂದರೆ ಸಾಮಾನ್ಯ ಜನತೆಯನ್ನು ಮತೀಯ ಭ್ರಮಾಲೋಕದಲ್ಲಿ ಸಿಲುಕಿಸಿ ನಿಷ್ಕ್ರಿಯರನ್ನಾಗಿ ಮಾಡುವುದು. ಈ ಸಂಘಟನೆ, ವ್ಯಕ್ತಿಗಳಿಗೆ ಸಾಮಾನ್ಯ ಜನತೆಯ ಏಳಿಗೆ ಮುಖ್ಯವಾಗಿರುವುದಿಲ್ಲ. ಅಮಾಯಕ ಜನತೆಯನ್ನು ಮತೀಯ ಭಾವನೆಗಳಿಗೆ ಸಿಲುಕಿಸಿ, ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದು ಇವರ ಧ್ಯೇಯವಾಗಿರುತ್ತದೆ.
ಆದರೆ ಭಾರತೀಯ ಕಲ್ಚರ್ ಬಹುಪಂಥೀಯವಾಗಿದ್ದು, ತಾಲಿಬಾನ್, ಲಷ್ಕರ್ ನಂತಹ ಸಂಘಟನೆಗಳಿಗೆ ಇಲ್ಲಿ ಪ್ರಾಮುಖ್ಯತೆ ದೊರೆಯಲು ಅವಕಾಶ ನೀಡಬಾರದು. ಹಿಂದೂ ಮೂಲಭೂತವಾದಿಗಳು ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸುವ ನಿಟ್ಟಿನಲ್ಲಿ ಹಿಂದೂಗಳಲ್ಲೂ ತಾಲಿಬಾನ್ ಗಳನ್ನು ತಯಾರುಮಾಡುತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಸೆಕ್ಯುಲರಿಸಂನ ಪರವಾಗಿರುವವರು ವಿರೋಧಿಸುತ್ತಾರೆ. ಇಲ್ಲಿ ಯಾವುದಕ್ಕೆ ಬೆಂಬಲ ನೀಡುತ್ತಿದ್ದೇವೆ ಎನ್ನುವುದಕ್ಕಿಂತಲೂ ಯಾರನ್ನು ವಿರೋಧಿಸುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ.
An Eye for An Eye makes the whole world blind ಎಂದು ಗಾಂಧೀಜಿಯವರು ಹೇಳಿದ್ದರು. ನಾವು ಅದೇ ಸ್ಥಿತಿಯನ್ನು ತಲುಪುತ್ತಿದ್ದೇವೆ. ಕಾಲ್ಪನಿಕ ಮತ್ತು ಭಾವನಾತ್ಮಕಸಂಸ್ಕ್ರುತಿಯನ್ನು ರಕ್ಷಿಸುವ ನೆಪದಲ್ಲಿ ಮಾನವ ಸಂಸ್ಕ್ರುತಿಯನ್ನು ನಾಶಮಾಡುತ್ತಿದ್ದೇವೆ. ಇದನ್ನು ಗಮನಿಸಿದರೆ ಒಳಿತು.

ನಾ ದಿವಾಕರ

NA Divakar

ರಾಜೇಂದ್ರರವರೆ,

ಮುಸ್ಲಿಂ ಕೋಮುವಾದಿಗಳಿಗೆ ಸ್ವಯಂಘೋಷಿತ ಸಿಕ್ಯುಲರಿಸ್ಟ್ ಗಳು ಬೆಂಬಲ್ ನೀಡುತ್ತಿರುವುದು ಸರಿಯೆಂದು ನೀವು ಹೇಳುತ್ತೀರಾ!?
ನಾನು ಅದನ್ನು ತಪ್ಪೆಂದು ಹೇಳುತ್ತೇನೆ ಮತ್ತು ಬಹುಸಂಖ್ಯಾತರು ಹಿಂದು ಕೋಮುವಾದಿಗಳಿಗೆ ಬೆಂಬಲ ಸೂಚಿಸುವುದನ್ನೂ ತಪ್ಪೆಂದು ಹೇಳುತ್ತೇನೆ. ಹಿಂದುಗಳಾಗಿ ಹುಟ್ಟಿರಲಿ, ಮುಸ್ಲಿಂರಾಗಿ ಹುಟ್ಟಿರಲಿ. ಕ್ರಿಮಿನಲ್ ಗಳು ಕ್ರಿಮಿನಲ್ ಗಳೇ - ಅವರನ್ನು ಬೆಂಬಲಿಸುವವರೂ ಕ್ರಿಮಿನಲ್ ಗಳು.

ಅನ್ಯಾಯವನ್ನು ಯಾವತ್ತೂ ಧಿಕ್ಕರಿಸಬೇಕು. ಯಾರೋ ಒಬ್ಬ ತಲೆ ಕೆಟ್ಟವ ಅನ್ಯಾಯವನ್ನು ಸಮರ್ಥಿಸುತ್ತಾನೆ ಎನ್ನುವ ಕಾರಣಕ್ಕೆ ಪ್ರತಿ(ಇನ್ ರೆಸ್ಪೋನ್ಸ್) ಅನ್ಯಾಯವನ್ನು ಬೆಂಬಲಿಸುವವ ಸಿಕ್ಯುಲರ್ ಗಳಿಗಿಂತಲೂ ಸಿಕ್ ಆಗುತ್ತಾನೆ.