You are hereದೇಶದ ಬೆನ್ನಲಬು ರೈತ, ರೈತನ ಬೆನ್ನಲಬು ... . . . .?

ದೇಶದ ಬೆನ್ನಲಬು ರೈತ, ರೈತನ ಬೆನ್ನಲಬು ... . . . .?


ಲೇಖಕರು: ವಿನಾಯಕ ಎಲ್ ಪಟಗಾರ

ರೈತರು ದೇಶದ ಬೆನ್ನಲಬು. ಇದು ಚಿಕ್ಕವರಿದ್ದಾಗಿಂದ ನಾವೂ ರೈತರ ಬಗ್ಗೆ ಕೇಳಿ ಬಂದ ಮಾತಿದು. ನಿಜ. ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಹಸಿವನ್ನು ನಿಗಿಸುವವನ್ನೆ ರೈತ. ನಾವೂ ಏನೇ ಆಹಾರ ತಿಂದರೂ ಅದರ ಹಿಂದೆ ರೈತನ ಶ್ರಮ ವಿದೆ ಎನ್ನುವದನ್ನು ಮರೆಯುವಂತಿಲ್ಲ. ಇತ್ತಿಚ್ಚಿಗೆ ಜಗತ್ತೆ ಆರ್ಥಿಕ ಹಿಜರಿತಕ್ಕೆ ಸಿಲೂಕಿದರೂ ಭಾರvದಲ್ಲಿ ಅದರ ಪ್ರಮಾಣ ಕಡಿಮೆಯಾಗಿರುವಕ್ಕೆ ಕ್ರಷಿಯೇ ಕಾರಣ ಎನ್ನಲಾಗುತ್ತಿದೆ. ಇದನ್ನು ನೊಡಿದಾಗ ರೈತನ ಅವಶ್ಯಕತೆ,ಪ್ರಾಮುಖ್ಯತೆ ಅರಿವಾಗುತ್ತದೆ.

ಸ್ವಾತಂತ್ರ್ಯಾನಂತರದಲ್ಲಿ ನಮ್ಮನ್ನಾಳಿದ ಎಲ್ಲ ಸರಕಾರಗಳೂ ರೈತರ ಹೆಸರಿನಲ್ಲಿ ಆಳ್ವಿಕೆ ಮಾಡಿದ್ದಾರೆ. ಈಗಿನ ದಿನಗಳಲ್ಲಿ ರೈತರು ಮತ್ತು ಕ್ರಷಿ ಹೆಸರನ್ನು ಬಳಸಿಕೊಳ್ಳದೆ ರಾಜಕಾರಣ ಮಾಡುವುದು ಅಸಾಧ್ಯವೆನ್ನಿಸುವಷ್ಟರ ಮಟ್ಟಿಗೆ ಈ ಕ್ಷೇತ್ರ ಅನಿವಾರ್‍ಯವಾಗಿಬಿಟ್ಟಿದೆ. ಹಾಗಾದರೆ ಕ್ರಷಿ ಕ್ಷೇತ್ರ,ಮತ್ತು ರೈತ ಅಭಿವ್ವದ್ದಿ ಹೊಂದಿದ್ದಾರೆಯೇ ಎನ್ನವ ಪ್ರೆಶ್ನೆಗೆ ಇನ್ನು ಉತ್ತರ ವಿಲ್ಲಾ. ಕ್ರಷಿ ಮತ್ತು ರೈತರ ಅಭಿವ್ರದ್ಧಿಯ ಹೆಸರಿನಲ್ಲಿ ಪ್ರತಿ ವರ್ಷ ಕೊಟ್ಯಾಂತರ ರೂಪಾಯಿ ವೆಚ್ಚ ಸರಕಾರಗಳೂ ಮಾಡುತ್ತಿವೆ. ಉದ್ದಾರವಾದವರೂ ನಮ್ಮನ್ನಾಳುವವರು, ಮತ್ತು ಅಧಿಕಾರಿಗಳು. ಆತ್ಮಹತ್ಯೆಗೆ ಶರಣಾದವರು ರೈತರು. ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆಗಳು ಹೆಚ್ಚುತ್ತಹೊಗಿದ್ದೆ ಹೊರತು ಕಡಿಮೆಯಾಗುತ್ತಿಲ್ಲ. ಹಾಗಾದರೆ ಮೂಲ ಸಮಸ್ಯೆ ಇರುವುದು ಎಲ್ಲಿ. ನಮ್ಮನ್ನಾಳುವವರಲ್ಲಿ ಇರುವ ಬದ್ದತೆ ಕೊರತೆ. ಅಸರ್ಮಕ ಕ್ರಷಿನೀತಿ. ಇತರೆ ಉದ್ಯಮಿಗಳಗೆ ಸಿಕ್ಕ ಪ್ರಾಮುಖ್ಯತೆ ಕ್ರಷಿಗೆ ಸಿಕ್ಕದಿರುವುದು.

ಸ್ವಾತಾಂತ್ರ್ಯನಂತರದಲ್ಲಿ ಭಾರತದಲ್ಲಿ ಸರ್ವಾಂಗೀಣ ಅಭಿವ್ರದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಯೊಜನೆಗಳಲ್ಲಿ ಕ್ರಷಿಗೆ ಸಾಕಸ್ಟು ಪ್ರಾಮುಖ್ಯತೆ ನಿಡಲಾಯಿತು. ಇದರ ಪರಿಣಾಮ ಎಂಬಂತೆ ಆಹಾರ ಉತ್ಪಾದನೆಯಲ್ಲಿ ನಾವೂ ಸಾಕಷ್ಟು ಸ್ವಾವಲಂಬನೆ ಪಡೆದವು. ಸಾಕಷ್ಟು ನದಿಗಳಿಗೆ ಆಣೆಕಟ್ಟು ನಿರ್ಮಿಸುವದರ ಮೂಲಕ ವಿಸ್ತಾರವಾದ ಭೂಮಿಗಳಲ್ಲಿ ಬೆಳೆ ಬೆಳೆಯಲಾಯಿತು. ಕ್ರಷಿಯಲ್ಲಿ ಆಧುನಿಕತೆ ಬಳಸುವದರ ಮೂಲಕ ಹೆಚ್ಚಿನ ಉತ್ಪಾದನೆ, ಲಾಭ ಪಡೆಯುವಂತಾಯಿತು. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾgದ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅನಿವಾರ್‍ಯತೆ ಭಾರತಕ್ಕೆ ಉಂಟಾಯಿತು. ಕಡಿಮೆ ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯಲ್ಲು ಅನೂಕುಲವಾಗುವಂತೆ ರಾಸಾಯನಿಕ ಗೊಬ್ಬರ ಬಳಸುವಂತೆ ಸರಕಾರದಿಂದ ಪ್ರೋತ್ಸಾಹ ದೊರೆಯಿತು. ಅಲ್ಲದೆ ರಸಗೊಬ್ಬರಕ್ಕೆ ಸಬ್ಸಿಡಿ ನಿಡುವದರ ಮೂಲಕ ಕಡಿಮೆ ದರದಲ್ಲಿ ರಸಗೊಬ್ಬರಗಳನ್ನು ರೈತರಿಗೆ ಪೂರೈಸಿತ್ತು. ರೈತನ್ನು ತನ್ನ ಸಾಂಪ್ರದಾಯಕ ಕ್ರಷಿ ಪದ್ದತಿ ಬಿಟ್ಟು ಆಧುನಿಕ ಕ್ರಷಿಗೆ ಒಗ್ಗಿಕೊಂಡ. ಪರಿಣಾಮ ಭಾರತದಲ್ಲಿ ಹಸಿರು ಕ್ರಾಂತಿಯೇ ಉಂಟಾಯಿತು. ಹೆಚ್ಚುತ್ತಿರುವ ಜನಸಂಖ್ಯೆಯ ಹಸಿವನ್ನು ನೀಗಿಸುವ ಕೆಲಸ ಹಸಿರು ಕ್ರಾಂತಿ ಮಾಡಿತ್ತು ಎಂದರೆ ತಪ್ಪಾಗಲ್ಲಿಕ್ಕಿಲ್ಲ. ಒಟ್ಟಿನಲ್ಲಿ ಜೈಜವಾನ್,ಜೈಕಿಸಾನ್ ಎನ್ನುವುದು ಮೊದಲ್ಲೆಲ್ಲಾ ರೈತರ ಬಗೆಗಿನ ಮಾತುಗಳು ನಿಜಕ್ಕೂ ವಾಸ್ತವವಾಗಿದ್ದವು.

ಭಾರತದಲ್ಲಿ ಕ್ರಷಿ ತೊಂದರೆ ಗೊಳಗಾಗುತ್ತಿರುವುದು ಯಾವಾಗಿನಿಂದ. ಭಾರತ ಜಾಗತೀಕರಣಕ್ಕೆ ತೆರೆದುಕೊಂಡಾಗ. ಜಾಗತೀಕರಣ ಭಾರತದಲ್ಲಿ ಸಾಧಕ-ಭಾದಕಗಳೆರಡನ್ನು ಉಂಟು ಮಾಡಿದೆ. ಗ್ಯಾಟ್ ಒಪ್ಪಂದವೂ ಭಾರತೀಯ ಕ್ರಷಿಕರಿಗೆ ಹೆಚ್ಚಿನ ಭಾದಕನ್ನುಂಟು ಮಾಡಿತ್ತು. ಕ್ರಷಿಗೆ ಸಂಬಂಧಪಟ್ಟ ಭಾರತ ಸರಕಾರ ನಿಡುತ್ತಿದ್ದ ಸಬ್ಸಿಡಿಯನ್ನು ಕಡಿಮೆಗಳಿಸುವಂತೆ ವಿಶ್ವ ವ್ಯಾಪರ ಸಂಘಟನೆಗಳು ಒತ್ತಡ ತಿವ್ರಗೊಳಿಸಿದ್ದವು.ಇದರ ಪರಿಣಾಮ ಕ್ರಷಿಗೆ ಸಂಬಂದಪಟ್ಟಂತೆ ವಸ್ತುಗಳ ಮೇಲಿನ ಸಬ್ಸಿಡಿ ಕಡಿತಗೊಂಡು ದರಗಳು ಜಾಸ್ತಿಯಾಯಿತು. ಇದರ ಪರಿಣಾಮ ನೇರವಾಗಿ ಕ್ರಷಿಕರ ಮೇಲಾಯಿತು. ಕ್ರಷಿಮಾಡುವುದು ಖರ್ಚು ಜಾಸ್ತಿ ಲಾಭ ಕಡಿಮೆ ಎನ್ನುವಂತಾಯಿತು.

ಭಾರತದಲ್ಲಿ ಮಳೆಯಾದರಿತ ಕ್ರಷಿ ಜಾಸ್ತಿ ಎನ್ನುವುದು ಎಲ್ಲಿರಿಗೂ ಗೊತ್ತಿರುವ ವಿಚಾರ. ಇತ್ತಿಚ್ಚಿನ ದಶಕಗಳಲ್ಲಿ ಭಾರತದಲ್ಲಿ ಹವಮಾನ ವೈಪರಿತ್ಯದಿಂದಾಗಿ ಮಳೆ ರೈತನಿಗೆ ಕೈಕೊಡುತ್ತಿರುವುದು ಬರಗಾಲದ ಪರಿಸ್ಥಿತಿ ಒಂದೊಂದು ಸಲ ಬಂದೊದಗಿದೆ. ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತನಿಗೆ ಸರಿಯಾದ ಸಮಯಕ್ಕೆ ಮಳೆ ಬರದೆ ಇದ್ದರೆ, ಪರ್‍ಯಾಯ ವ್ಯವಸ್ಥೆಯು ಇಲ್ಲದಾಗಿ ರೈತ ಕಂಗಾಲಾಗುತ್ತಾನೆ. ಕೊನೆಗೆ ಆತ್ಮ ಹತ್ಯೆಗೆ ಶರಣಾಗುತ್ತಾನೆ.ಇವತ್ತು ಮಳೆ ರೈತ ಬೆಳೆ ಬೆಳೆಯಲು ಬೀಜ ಬಿತ್ತಿದ್ದಾಗ ಬರದೆ ಕೈ ಕೊಟ್ಟರೆ, ಮುಂದೆ ಬೆಳೆ ಬಂದಾಗ ಅದನ್ನು ಪಡೆದುಕೊಳ್ಳಲು ಸಾದ್ಯವಾಗದಂತೆ ಪ್ರವಾಹದ ರೀತಿಯಲ್ಲಿ ಬಂದು ಕೈ ಗೆ ಬಂದ ಬೆಳೆ ಬಾಯಿಗೆ ಬರದಂತೆ ಮಾಡುತ್ತಿದೆ. ಒಟ್ಟಿನಲ್ಲಿ ಮಳೆಗಾಲ ರೈತನಿಗೆ ಅನೂಕುಲಕ್ಕಿಂತ ಅನಾನುಕೂಲವನ್ನೆ ಜಾಸ್ತಿ ಮಾಡುತ್ತಿದೆ.

ಕ್ರಷಿ ವಿಜ್ನಾನಿಗಳ ಸಂಶೋಧನೆಗಳು ರೈತರಿಗೆ ಅನೂಕುಲ ಮಾಡಿದ್ದಿಕ್ಕಿಂತ ಹೆಚ್ಚಾಗಿ ಬಹುರಾಷ್ಟೀಯ ಕಂಪನಿಗಳಿಗೆ ಉಪಯೊಗವಾಗಿದ್ದೆ ಜಾಸ್ತಿ. ಎಷ್ಟಲ್ಲಾ ಕ್ರಷಿ ಸಂಬಂಧ ಪಟ್ಟ ಉತ್ಪನ್ನಗಳು ಬಹುರಾಷ್ರೀಯ ಕಂಪನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದನ್ನು ಕಂಪನಿ ನಿರ್ಧರಿಸಿದ ದರದಲ್ಲಿ ರೈತ ಖರಿದಿಸಬೇಕಾಗಿದೆ. ಜಾಸ್ತಿ ಇಳುವರಿ ಆಶೆ ತೊರಿಸಿ ಹೈಬ್ರಿಡ ತಳಿಗಳನ್ನು ಬೆಳೆಯುವಂತೆ ಬಹುರಾಷ್ಟೀಯ ಕಂಪನಿಗಳು ರೈತರನ್ನು ಒತ್ತಾಯಿಸಿದ್ದವು. ಆಸೆ ಬಿದ್ದು ಬೆಳೆದ ರೈತನಿಗೆ ಮೊದಮೊದಲು ಉತ್ತಮ ಲಾಭವನ್ನೆ ತಂದು ಕೊಟ್ಟಿತ್ತು. ಅದರ ಜೊತೆಗೆ ಖರ್ಚುಗಳು ಜಾಸ್ತಿಯಾಯಿತು.ಅವುಗಳಿಗೆ ತಗಲುವ ಕ್ರಿಮಿಕೀಟಗಳನ್ನು ನಾಶಪಡಿಸುವದಕ್ಕಾಗಿ ರಾಸಾಯನಿಕಗಳನ್ನು ಸಿಂಪಡಿಸುವಂತೆ ಬಲವಂತ ಮತ್ತು ಅನಿವಾರ್‍ಯತೆಯನ್ನು ರೈತರಿಗೆ ಸ್ರಷ್ಟಿಸುವದರ ಮೂಲಕ ಕಂಪನಿಗಳು ತಾವೇ ಸ್ರಷ್ಟಿಸಿದ ರಾಸಾಯನಿಕಗಳಿಗೆ ಗ್ರಾಹಕರನ್ನು ಸ್ರಷ್ಟಿಸಿಕೊಂಡರು. ಹೈಬ್ರಿಡ ಬೆಳೆಯ ತಾತ್ಕಾಲಿಕ ಆಶೆಗೆ ಒಳಗಾದ ರೈತ ತನ್ನ ಸಾಂಪ್ರದಾಯಕ ಕ್ರಷಿ ಪದ್ದತಿಗಳನ್ನು ಮರೆಯತೊಡಗಿದ್ದ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದು, ರಾಸಾಯನಿಕಗಳನ್ನು ಸಿಂಪಡಿಸುವುದೇ ಆಧುನಿಕ ಕ್ರಷಿ ಎಂಬಂತೆ ಕ್ರಷಿಕರನ್ನು ಸರಕಾರ, ಕ್ರಷಿವಿಶ್ವವಿಧ್ಯಾಲಯಗಳು, ನಂಬಿಸಿದವು. ಹಾಗೇ ನಂಬಿಸುವಂತೆ ಸರಕಾರವನ್ನು ಆಳುವವರಿಗೆ, ಕ್ರಷಿವಿಶ್ವವಿಧ್ಯಾಲಯದ ಪ್ರತಿನಿಧಿಗಳಿಗೆ ಬಹುರಾಷ್ರೀಯ ಕಂಪನಿಗಳು ಉಡುಗೊರೆ ಒತ್ತಡಗಳನ್ನು ಹೇರಲಾರಂಬಿಸಿದವು.ಇದರ ಪರಿಣಾಮ ಸರಕಾರದ ಕ್ರಷಿ ನೀತಿಗಳು ಕ್ರಷಿಯಲ್ಲಿ ರಾಸಾಯನಿಕ ಬಳಕೆಯನ್ನು ಉತ್ತೇಜಿಸಿದವು.ಬಹುರಾಷ್ಟ್ರೀಯ ಕಂಪನಿಯ ಬೆಳವಣಿಗೆಯ ಅನೂಕುಲಕ್ಕೆ ತಕ್ಕಂತೆ ಕ್ರಷಿ ನೀತಿಗಳು ರಚಿಸಲ್ಪಟ್ಟವು ಹೊರತು ಕ್ರಷಿಕರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಯಾವುದೇ ಕ್ರಾರ್‍ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ಬರಲ್ಲಿಲ್ಲ.

ಹೈಬ್ರಿಡ್ ತಳಿ ಬೆಳೆ, ರಾಸಾಯನಿಕ ಗೊಬ್ಬರಗಳ ಬಳಕೆ ಪ್ರಾರಂಭದ ವರ್ಷಗಳಲ್ಲಿ ರೈತರಿಗೆ ಉತ್ತಮ ಆದಾಯವನ್ನೆ ತಂದು ಕೊಟ್ಟಿತು. ಇದು ರೈತರನ್ನು ಮರಳು ಮಾಡಿತು . ತನ್ನ ಭೂಮಿಗೆ ಬೇಕಾಗುವಷ್ಟು ಬೀಜಗಳನ್ನು ತಾನೆ ಉತ್ಪಾದಿಸಿಕೊಳ್ಳುತ್ತದ್ದನ್ನು ಮರೆತುಬಿಟ್ಟ. ದನಕರುಗಳನ್ನು ಸಾಕುವದನ್ನು ಕಡಿಮೆ ಮಾಡಿದ ಪರಿಣಾಮ ಸೆಗಣಿ ಗೊಬ್ಬರಗಳು ಕಡಿಮೆಯಾಯಿತು. ತನ್ನ ಕ್ರಷಿಗೆ ಎನು ಬೇಕು ಅದನ್ನು ತಾನೆ ಉತ್ಪಾದಿಸಿಕೊಳ್ಳುತ್ತಿದ್ದಂಹ ಸಾಂಪ್ರದಾಯಿಕ ಕ್ರಷಿಯನ್ನು ಮರೆತುಬಿಟ್ಟು ಕ್ರಮೇಣ ಪರಾವಲಂಬಿಯಾಗತೊಡಗಿದ್ದ. ಪ್ರತಿ ವರ್ಷ ಬೀಜಕ್ಕಾಗಿ ಗೊಬ್ಬರಕ್ಕಾಗಿ ಸರಕಾರದ ಮುಂದೆ ಇಲ್ಲವೆ, ಕಂಪನಿಗಳ ಮುಂದೆ ಕೈಚಾಚಿ ನಿಲ್ಲುವ ಪ್ರಸಂಗ ಬಂದೊದಗಿತ್ತು. ಇದೆ ಸಂದಂರ್ಭಗಳಲ್ಲಿ ಕಂಪನಿಗಳು ಕೊರತೆಯನ್ನು ಕಾಣಿಸಿ ದುಪ್ಪಟ್ಟು ಬೆಲೆಗೆ ಮಾರುವದರ ಮೂಲಕ ಶೋಷಣೆಗೆ ಗುರಿಮಾಡಿದರು. ಇನ್ನು ಸರಕಾರವೂ ಸರಿಯಾದ ಸಮಯಕ್ಕೆ ರಿಯಾಯಿತಿ ದರದ ಗೊಬ್ಬರಗಳನ್ನು ,ಬೀಜಗಳನ್ನು ಕೊಡದೆ, ಕಂಪನಿಗಳ ಶೋಷಣೆಗೆ ಅಪರೋಕ್ಷವಾಗಿ ನೆರವಾದರು. ಇತ್ತ ರೈತನಿಗೆ ರಾಸಾಯನಿಕ ಗೊಬ್ಬರ ಬಳಕೆ ಬಿಡಲಾಗದೆ, ಸಾಂಪ್ರದಾಯಿಕ ಕ್ರಷಿಗೂ ಮರಳಾಲಗದೆ ನಡು ನಿರಿನಲ್ಲಿ ಬಿದ್ದ ನಾರಾಯಣನ ಪರಿಸ್ಥಿತಿಯಂತಾಗಿದೆ. ಇದರ ಪರಿಣಾಮವೇ. ಇತ್ತೀಚಿಗೆ ಕರ್ನಾಟಕದಲ್ಲಿ ನಡೆದ ಗೊಬ್ಬರ ಮತ್ತು ಬೀಜದ ಗಲಾಟೆಯೇ ಸಾಕ್ಷೀ. ನಮ್ಮೆಲ್ಲರ ಹಸಿವನ್ನು ನಿಗಿಸುವ ರೈತನ ಪರಿಸ್ಥತಿ ಯಾವ ಮಟ್ಟಕ್ಕೆ ಬಂದು ಮುಟ್ಟಿದೆ ನೋಡಿ. ರೈತ ಇದಕ್ಕೆ ಪರ್‍ಯಾಯ ಪದ ಸಂಕಷ್ಟ ಎನ್ನವಂತಾಗಿದೆ.

ಪ್ರತಿ ವರ್ಷ ರಾಸಾಯನಿಕಗಳ ಬಳಕೆ ಜಾಸ್ತಿಯಾಗುತ್ತಿದೆ. ರೈತನಿಗೆ ರಾಸಾಯನಿಕ ಗೊಬ್ಬರಗಳ ಬಳಕೆ ಇಲ್ಲದೆ ಬೇಸಾಯ ಮಾಡಲಾರದಷ್ಟು ಅದಕ್ಕೆ ಅವಲಂಬಿತನಾಗಿದ್ದಾನೆ. ದೇಶದ ಬೆನ್ನಲಬು ರೈತ, ರೈತನ ಬೆನ್ನಲಬು. . . . ? ರಾಸಾಯನಿಕ ಗೊಬ್ಬರ ಎಂದರೆ ತಪ್ಪಾಗಲಾರದು. ಇತ್ತ ಆತನ ಭೂಮಿ ಮಿತಿಮೀರಿದ ರಾಸಾಯನಿಕ ಗೊಬ್ಬರಗಳ ಬಳಕೆಯ ಕಾರಣ ಬಂಜರಾಗತೊಡಗಿತ್ತು. ಕ್ರಮೇಣ ಕ್ರಷಿ ಉತ್ಪನ್ನಗಳ ಇಳುವರಿಯಲ್ಲಿ ಕಡಿಮೆಯಾಗತೊಡಗಿತ್ತು. ಬೆಳೆ ಬಂದಂತಹುಗಳಿಗೆ ಸರಿಯಾದ ಮಾರುಕಟ್ಟೆ ದರ ಇಲ್ಲದೆ ಕಷ್ಟಕ್ಕಿಡಾಯಿತು. ಯಾವ ಬೆಳೆ ಯಾರು ಎಷ್ಟೇಷ್ಟು ಬೆಳೆಯಬೇಕು ಎನ್ನುವದರ ಬಗ್ಗೆ ನಮ್ಮಲಿ ಸರಿಯಾದ ನೀತಿಗಳು ಇಲ್ಲದ ಕಾರಣ ಎಲ್ಲರೂ ಒಂದೇ ರೀತಿಯ ಬೆಳೆ ಬೆಳೆಯುವದರ ಮೂಲಕ ಸರಿಯಾದ ಬೆಲೆ ಸಿಗುತ್ತಿಲ್ಲ. ಇವೆಲ್ಲವುಗಳನ್ನು ಗಮನಿಸಿದಾಗ ಸಮಗ್ರವಾದ ರೈತರ ಪರವಾದ ಕ್ರಷಿ ನೀತಿಯ ಕೊರತೆ ಕಾಣಿಸುತ್ತಿದೆ. ದೇಶದ ಬೆನ್ನಲಬು ರೈತ ಎನ್ನುತ ನಾವೆಲ್ಲರೂ ಸೇರಿ ಆತನ ಬೆನ್ನಲಬನ್ನೆ ಮುರಿಯಲು ಹೊರಟ್ಟಿದೆವೆ. ಪರಿಣಾಮ ರೈತ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಭಾರತದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚುತ್ತಿರುವುದು, ಹಾಗೂ ರೈತನ ಪರಿಸ್ಥಿತಿ ಗಮನಿಸಿ ಇಂದಿನ ಪೀಳಿಗೆ ಕ್ರಷಿ ಮಾಡಲು ಮುಂದೆ ಬರದೆ ಇರುವುದು ನಿಜಕ್ಕೂ ಕಳವಳಕಾರಿ.

ಕ್ರಷಿ ಮತ್ತು ಕ್ರಷಿಕ ಉತ್ತಮಗೊಳ್ಳಲು ಎನು ಮಾಡಬೇಕು? ಇದಕ್ಕೆ ಇವತ್ತಿನ ದಿನದಲ್ಲಿ ಉತ್ತರ ಕಷ್ಟಕರವಾದುದು. ರೈತನಾದವನ್ನು ಮೊದಲು ತನ್ನ ಕ್ರಷಿ ಚಟುವಟಿಕೆಗಳಿಗೆ ಪರಾವಲಂಬಿಯಾಗಬಾರದು. ತನ್ನ ಭೂಮಿಗೆ ಬೇಕಾದ ಬೀಜಗಳನ್ನು,ಗೊಬ್ಬರಗಳನ್ನು ತಾನೇ ಉತ್ಪಾದಿಸಿಕೊಳ್ಳುವಂತಾಗಬೇಕು. ರಾಸಾಯನಿಕ ಗೊಬ್ಬರಗಳ, ಕ್ರಿಮಿನಾಶಕಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತ ಮಂದೆ ಪೂರ್ತಿಯಾಗಿ ನಿಷೇಧಿಸುವುದು. ರೈತರಾದವರೂ ತಮ್ಮದೆ ಆದ ಸಂಘಟನೆಗಳನ್ನು ಮಾಡಿಕೊಂಡು ಯಾರು ಯಾರು ಯಾವ ಯಾವ ಬೆಳೆಗಳನ್ನು ಎಷ್ಟೇಷ್ಟು ಬೆಳೆಯಬೇಕು ಎನ್ನುವದರ ನೀರ್ಧಾರ ತೆಗೆದುಕೊಂಡು ಬೆಳೆ ಬೆಳೆದರೆ ಬೆಲೆ ಕುಸಿತದ ಭೀತಿಯು ಇರುವುದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ರೈತನ ಉದ್ದಾರ ಮಾಡಿತ್ತಿವಿ ಎನ್ನುವ ರಾಜಕಾರಣಿಗಳ ಮಾತನ್ನು ನಂಬದಿರಿ. ಇಲ್ಲಿಯರೆಗೂ ನಿಮ್ಮನ್ನು ಉದ್ದಾರ ಮಾಡುತ್ತೆವೆ ಎನ್ನುತ್ತ ಪರಾವಲಂಬಿಗಳನ್ನಾಗಿಸಿ, ತಮ್ಮ ಅಡಿಯಾಳಾಗಿ ಇಟ್ಟುಕೊಳ್ಳಲು ನೊಡುತ್ತಾರೆ. ಅವರಿಗೆ ರೈತರು ಸ್ವಾವಲಂಭಿಗಳಾಗಿ ಬದುಕುವುದು ಇಷ್ಟವಿಲ್ಲಾ. ಯಾವಾUಲೂ ತಮ್ಮ ಹತ್ತಿರ ಬಿಕ್ಷಾಂದೇಹಿ ಎನ್ನತ್ತ ಬೀಕ್ಷೆ ಬೇಡುತ್ತ ಇರಬೇಕು ಎಂದು ಯೊಚಿಸುತ್ತ ಇರುತ್ತಾರೆ. ಇನ್ನು ಕ್ರಷಿ ಸಂಶೋಧಕರು. ಇವರು ಯಾವುದಾದರೂ ಕಂಪನಿಯ ಅದನ್ನ ಬಳಸಿ ಇದನ್ನ ಬಳಸಿ ಎನ್ನುತ್ತ ರೈತರ ಹತ್ತಿರ ಬಂದರೆ ಉಗಿದು ಕಳುಹಿಸುವಂತಾಗಬೇಕು. ಕ್ರಷಿ ಸಂಶೋಧನೆಗಳು ಯಾವಾಗಲೂ ರೈತರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಇದ್ದರೆ ಅದನ್ನು ಮಾತ್ರ ರೈತರು ಬೆಂಬಲಿಸಬೇಕು. ರೈತರು ಸಮಸ್ಯೆಗಗಳಿಂದ ಹೊರಬರಲು ತಮ್ಮಲ್ಲೇ ಪರಿಹಾರ ಇದೆ. ಅದನ್ನು ಜಾರಿಗೆ ತರುವ ಧ್ರಡವಾದ ಮನಸ್ಸು ಬೇಕು ಅಷ್ಟೇ ?

ಓದುಗರ ಅಭಿಪ್ರಾಯಗಳು

Search