You are hereಗ್ರಾಮ ಭಾರತದ ಸವಾಲುಗಳು ಮತ್ತು ಪರಿಹಾರಗಳು
ಗ್ರಾಮ ಭಾರತದ ಸವಾಲುಗಳು ಮತ್ತು ಪರಿಹಾರಗಳು
ಲೇಖಕರು: ವಿಜಯಲಕ್ಷ್ಮಿ ಉಡಿಕೇರಿ
ಉತ್ತಮ ಒಕ್ಕಲುತನ, ಮಧ್ಯಮ ವ್ಯಾಪಾರ, ಕನಿಷ್ಠ ನೌಕರಿ ಎಂಬುದು ನಮ್ಮ ಹಿರಿಯರು ಹೇಳುವ ನಾಣ್ಣುಡಿ. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಈ ನಾಣ್ಣುಡಿ ಇಂದು ರೈತ ಅನ್ನದಾತ ಎಂಬುವುದನ್ನು ಹೇಳುತ್ತದೆ. ಕಾಯಕವೇ ಕೈಲಾಸ ಎಂದು ಚಾಚೂ ತಪ್ಪದೇ ಅನುಸರಿಸಿ ನಡೆಯುವನೆಂದರೆ ರೈತ ಮಾತ್ರ, ದುಡಿದು ಉಣ್ಣು ಎಂಬ ಸ್ವಾವಲಂಬಿ ಸೂತ್ರಕ್ಕೆ ಬಲವಾಗಿ ಅಂಟಿಕೊಂಡವನೆಂದರೆ ರೈತನೊಬ್ಬನೇ ಎಂದು ಹೇಳಿದರೆ ತಪ್ಪಾಗಲಾರದು.
ಭಾರತದ ಹೃದಯ ಗ್ರಾಮಗಳಲ್ಲಿ ಇದೆ ಎಂದು ಮಹಾತ್ಮ ಗಾಂಧೀಜಿಯವರು ಅತ್ಯಂತ ಹೆಮ್ಮೆಯಿಂದ ಹೇಳುತ್ತಿದ್ದರು, ಗ್ರಾಮಗಳು ಸುಧಾರಣೆಯಾಗಬೇಕು ಅಂದರೆ ದೇಶ ಸುಧಾರಣೆಯಾಗುತ್ತದೆ. ಗ್ರಾಮಗಳಲ್ಲಿ ಹೆಚ್ಚಾಗಿ ಕೃಷಿ ಉದ್ಯೋಗವಾಗಿ ಚಾಲನೆಯಲ್ಲಿದೆ. ಕೃಷಿ ಕಾರ್ಮಿಕರನ್ನು ಅಥವಾ ಕೃಷಿಕರನ್ನು ಗ್ರಾಮೀಣರು ಎಂದು ಹೇಳಬಹುದು. ಭಾರತವು ಒಂದು ವಿಶಾಲವಾದ ಭೂಪ್ರದೇಶವನ್ನು ಹೊಂದಿದ ದೊಡ್ಡ ದೇಶ. ಇಲ್ಲಿ ಎಲ್ಲ ಬಗೆಯ ದವಸ ಧಾನ್ಯ, ತರಕಾರಿ ಮತ್ತು ಹಣ್ಣು ಹಂಪಲಗಳನ್ನು ಹುಲುಸಾಗಿ ಬೆಳೆಯಲು ಅನುಕೂಲವಾಗುವಂತ ಹವಾಮಾನ ಮತ್ತು ಮಣ್ಣನ್ನು ಹೊಂದಿದೆ.
ಭಾರತದ ಸವಾಲುಗಳು ಮತ್ತು ಪರಿಹಾರಗಳು:
- ಬಡ ಕೃಷಿಕನ ಹೊಲದಲ್ಲಿ ಹಾಗೂ ಬಡ ಗ್ರಾಮಗಳನ್ನು ಉದ್ಧರಿಸಬಲ್ಲ ಕೃಷಿಯಲ್ಲಿ ಸಂಶೋಧನೆ ಮತ್ತು ಕಡಿಮೆ ಬೆಲೆಯಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹಾಗು ಅವಶ್ಯಕತೆಗಳನ್ನು ಒದಗಿಸಲು ಹೆಚ್ಚು ಒತ್ತು ಕೊಡುವುದು.
- ಕೃಷಿಗೆ ಜೀವನಾಧಾರವಾದ ನೀರು, ನೀರಿನ ವ್ಯವಸ್ಥೆ ನೀರಿನ ಸಂಗ್ರಹ, ಮಳೆ ನೀರಿನ ಉಳಿತಾಯದ ಹಾಗೂ ಉಪಯೋಗದ ಬಗ್ಗೆ ಗ್ರಾಮೀಣ ಜನರಲ್ಲಿ ತಿಳುವಳಿಕೆ ಮೂಡಿಸುವುದು ಮತ್ತು ಕೃಷಿ ಭೂಮಿಗೆ ಯಾವ ಕಾಲದಲ್ಲೂ ನೀರಿನ ಅಭಾವ ಆಗದಂತೆ ವ್ಯವಸ್ಥೆ ಮಾಡುವುದು
- ಗ್ರಾಮಗಳಲ್ಲಿ ಪಕ್ಕಾ ರಸ್ತೆ ಮತ್ತು ಚರಂಡಿ ವ್ಯವಸ್ತೆ ಒಳ್ಳೆಯ ಗುಣಮಟ್ಟದಾಗಿದ್ದು ಗ್ರಾಮೀಣ ಜನರ ಸುವ್ಯವಸ್ಥೆಯಿಂದ ನೋಡಿಕೊಳ್ಳುವ ತಿಳುವಳಿಕೆ ದೊರಕಿಸುವುದು
- ಗ್ರಾಮಗಳಲ್ಲಿ ಅಬ್ಬಬ್ಬಾ ಎಂದರೆ ದಿನಕ್ಕೆ ೨ರಿಂದ೩ ಘಂಟೆ ಮಾತ್ರ ವಿದ್ಯುತ್ ಸೌಂಕರ್‍ಯವಿದ್ದು ಇದು ೧೨ ಘಂಟೆಗಳ ಕಾಲ ವಿದ್ಯುತ್ ಇರುವ ವ್ಯವಸ್ಥೆಯಾಗಬೇಕು
- ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಗ್ರಾಮಗಳನ್ನು ಸುಧಾರಿಸಲು ಗ್ರಾಮಗಳಲ್ಲಿಯೆ ಉದ್ಯೋಗ ದೊರಕಿಸುವ ಉದ್ದಿಮೆಗಳಿರುವ ವ್ಯವಸ್ಥೆಯಾಗಬೇಕು ಇದರಿಂದ ಗ್ರಾಮೀಣ ಜನರ ವಿದ್ಯಾಭ್ಯಾಸದಲ್ಲಿ ಸುಧಾರಣೆ ತರಲು ಅನುಕೂಲವಾಗುತ್ತದೆ
- ಮಹಿಳೆಯರು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ, ವಿದ್ಯಾಭ್ಯಾಸ, ಮತ್ತು ಆರೋಗ್ಯ ದೊರಕುವ ವ್ಯವಸ್ಥೆಯಾಗಬೇಕು.
- ಗ್ರಾಮಗಳಲ್ಲಿ ಹೊಸ ಹೊಸ ತಂತ್ರಜ್ಞಾನದ ಪರಿಚಯ ಜನರಿಗೆ ಆಗುವ ಹಾಗೆ ಮಾಡಬೇಕು. ಅದು ಕೃಷಿಯಲ್ಲಿಯೇ ಇರಲಿ ಅಥವಾ ಗೃಹ ಉದ್ಯೋಗದಲ್ಲಿಯೇ ಇರಲಿ ಅಥವಾ ಇನ್ನಾವುದೇ ಕ್ಷೇತ್ರದಲ್ಲಿರಲಿ ಹೊಸ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಮೂಡಿಸಿ ಕಾರ್ಯ ರೂಪಕ್ಕೆ ತರುವುದು.
- ಗ್ರಾಮೀಣ ಜನರನ್ನು ಆಹಾರ ಪದಾರ್ಥ ಉತ್ಪಾದನೆ ಮತ್ತು ಲೇವಾದೇವಿ ವ್ಯವಹಾರಗಳಲ್ಲಿ ವ್ಯಕ್ತಿಗತ ತೊಡಗಿಕೊಳ್ಳುವಂತೆ ಅರಿವು ಮೂಡಿಸುವುದು.
- ಗ್ರಾಮೀಣ ಜನರಿಗೆ ಅದು ತಮ್ಮ ಗ್ರಾಮ ತಾವು ಮಾತ್ರ ಶುಚಿಯಾಗಿ ಸುವ್ಯವಸ್ಥಿತವಾಗಿ ಹಾಗೂ ನೈರ್ಮಲ್ಯವಾಗಿ ಇಟ್ಟುಕೊಳ್ಳುವಂತೆ ತಿಳುವಳಿಕೆ ಮೂಡಿಸಿ ಅದಕ್ಕೆ ಅನುಕೂಲವಾಗುವ ಸಹಾಯವನ್ನು ಮಾಡುವುದು.
- ಗ್ರಾಮಗಳು ಮತ್ತು ಗ್ರಾಮೀಣ ಜನರು ಉದ್ಧಾರವಾಗುವಂತೆ ರೈತರಿಗೆ ನೀಡುವ ಸಾಲಗಳು ಸರಿಯಾಗಿ ಬಳಕೆಯಾಗುತ್ತವೆಯೊ, ಇಲ್ಲವೋ ಎಂದು ಸಾಲ ನೀಡುವ ಬ್ಯಾಂಕುಗಳು ಮತ್ತು ಅದರ ಅಧಿಕಾರಿಗಳು ಸ್ವಯಂ ರೈತನಲ್ಲಿಗೆ ಹೋಗಿ ಆಗಾಗ ಗಮನಿಸುತ್ತಿರಬೇಕು ಮತ್ತು ರೈತನಿಗೆ ನೀಡಿದ ಸಾಲ ದುರ್ಬಳಕೆಯಾಗದಂತೆ ತಡೆಯಬೇಕು.
- ಬಹು ಬೇಗ ಹಾಳಾಗುವ ಪದಾರ್ಥಗಳು ಅಂದರೆ ತರಕಾರಿ, ಹಣ್ಣು ಂಪಲು, ಮೀನು ಮತ್ತು ಮಾಂಸ ಬಹಳ ದಿನಗಳ ಕಾಲ ಕೆಡದಂತೆ ಗ್ರಾಮೀಣ ಜನರು ತಮ್ಮ ಸ್ಥಳದಲ್ಲಿಯೇ ಶೇಖರಿಸುವ ವ್ಯವಸ್ಥೆಯಾಗಬೇಕು. ಇದರಿಂದ ರೈತನಿಗೂ ಹಾಗೂ ಗ್ರಾಹಕನಿಗೂ ಲಾಭವಾಗುತ್ತದೆ. ಬೆಲೆ ಕುಸಿತದಿಂದ ರೈತನ ಬೆಳೆಗೆ ಆಗುತ್ತಿರುವ ಹಾನಿಯನ್ನು ತಪ್ಪಿಸಬಹುದು.
ಸರ್ಕಾರ ಕೈಗೊಳ್ಳಬೇಕಾದ ನೀತಿಗಳು:
- ಬಡವರಿಗಾಗಿ ಇಂದಿರಾ ಆವಾಸ ಯೋಜನೆಯಡಿಯಲ್ಲಿ ನಿರ್ಮಿಸಿದ ಮನೆಗಳಿಂದ ಬಡವರಿಗೆ ಹಾಗೂ ಮನೆಯಿಲ್ಲದವರಿಗೆ ಅನುಕೂಲವಾಗುವಂತೆ ಸರ್ಕಾರ ವ್ಯವಸ್ಥೆ ಮಾಡಿದೆ. ಆದರೆ ರಾಜಕೀಯ ಜನರ ಹಣದಾಸೆಯಿಂದ ಆ ಎಲ್ಲಾ ಮನೆಗಳು ಕಳಪೆ ಮಟ್ಟದ್ದಾಗಿದ್ದು ವಸತಿಗೆ ಅಷ್ಟೊಂದು ಯೋಗ್ಯವಾಗಿಲ್ಲ. ಕಾರಣ ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಪಾರದರ್ಶಕವಾಗಿ ಮಾಡಬೇಕು.
- ಗ್ರಾಮೀಣ ಕೂಲಿ ಕೆಲಸಗಾರರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಅವರಿಗೆ ಬರಬೇಕಾದ ಕೂಲಿ ಪ್ರಧಾನ ಮಂತ್ರಿ ರೋಜಗಾರ ಯೋಜನೆಯಿಂದ ಸಾಧ್ಯವಾಗಿದೆ. ಇದು ರಾಷ್ಟ್ರಮಟ್ಟಕ್ಕಲ್ಲದೇ ಎಲ್ಲ ರಾಜ್ಯಗಳಿಗೂ ಬಂದಿದೆ. ಸರ್ಕಾರ ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆದರೆ ಯಾವುದನ್ನು ಕಾರ್ಯ ರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ರಾಜಕಾರಣಿಗಳ ಲಂಚಾವತಾರದ ಪರಿಣಾಮ ಆದ್ದರಿಂದ ದಕ್ಷ ಅಧಿಕಾರಿಗಳನ್ನು ನಿಷ್ಠ ಅಧಿಕಾರಿಗಳನ್ನು ಸರ್ಕಾರ ನೇಮಿಸಿ ಅವರಿಗೆ ಅನುಕೂಲವಾಗುವಂಥ ಅಧಿಕಾರಗಳನ್ನು ಕೊಡಬೇಕು.
- ಮೊದಲು ಹಳ್ಳಿಗಳಲ್ಲಿ ಸರಿಯಾದ ರಸ್ತೆಗಳಿರಲಿಲ್ಲ ಹಾಗೆ ನೋಡಿದರೆ ಈಗ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಿಂದ ರಸ್ತೆಗಳ ನಿರ್ಮಾಣವಾಗಿದೆ. ಅದು ಕೂಡ ಕಳಪೆ ದರ್ಜೆಯಲ್ಲಿ ಇಷ್ಟೆಲ್ಲ ಪರಿಹಾರಗಳಿದ್ದರೂ ಅವು ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ, ಕಾರ್ಯ ರೂಪಕ್ಕೆ ಬಂದರೂ ಸುಸ್ಥಿತಿಯಲ್ಲಿಲ್ಲ ಇದರ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ತಂದು ಅವರಿಗಾಗಿ ಮಾಡಿದ ಎಲ್ಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ತಿಳುವಳಿಕೆ ಮೂಡಿಸಬೇಕು.
- ಹಳ್ಳಿಗಳಲ್ಲಿ ಶಾಲಾ ಕಟ್ಟಡಗಳಿವೆ ಆದರೆ ಶಿಕ್ಷಕರಿಲ್ಲ, ಸರ್ಕಾರ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಬಿಸಿಯೂಟ ವ್ಯವಸ್ಥೆ ಮಾಡಿದರೂ ಮಕ್ಕಳು ಶಾಲೆಗೆ ಬರುತ್ತಿಲ್ಲ. ಆದಕಾರಣ ಶಿಕ್ಷಕರು ಗ್ರಾಮಗಳ ಶಾಲೆಗೆ ಬರಲು ಹಾಗೂ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಅವರಿಗೆ ಒಳ್ಳೆಯ ವ್ಯವಸ್ಥೆ ಮಾಡಿಕೊಡಬೇಕು. ಪ್ರಾಥಮಿಕ ಮಟ್ಟದಲ್ಲಿಯೇ ಗ್ರಾಮೀಣರಿಗೆ ಸರಿಯಾದ ಶಿಕ್ಷಣ ಸಿಗದಿದ್ದರೆ ಅವರೆಂದು ಒಳ್ಳೆಯ ಗುಣಮಟ್ಟದ ನಾಗರಿಕ ಜೀವನ ಸಿಗಲಾರದು.
- ಹಳ್ಳಿಗಳಲ್ಲಿ ಸರಿಯಾದ ರಸ್ತೆ, ನೀರಿನ ವ್ಯವಸ್ಥೆ, ವಿದ್ಯುತ್ ಹಾಗೂ ಆರೋಗ್ಯದ ವ್ಯವಸ್ಥೆ ಮಾಡಿದರೆ ಇಲ್ಲಿನ ಜನರಿಗೆ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಮೂಡಿಸಿ ಅವರಿಗೆ ಅನುಕೂಲವಾಗುವಂತ ತಾಂತ್ರಿಕ ಶಿಕ್ಷಣ ಕೊಡಿಸಿ ಗ್ರಾಮದಲ್ಲಿಯೇ ಸಣ್ಣ ಪ್ರಮಾಣದ ಉದ್ದಿಮೆ ಪ್ರಾರಂಭಿಸಿ ಉದ್ಯೋಗಾವಕಾಶದ ವ್ಯವಸ್ಥೆಯಾದರೆ ಗ್ರಾಮೀಣ ಯುವಕರು ಉದ್ಯೋಗಕ್ಕಾಗಿ ಪಟ್ಟಣಕ್ಕೆ ಹೋಗುವುದನ್ನು ತಪ್ಪಿಸಬಹುದು.
- ತಂತ್ರಜ್ಞಾನವನ್ನು ಗ್ರಾಮೀಣ ಜನರಿಗೆ ತಲುಪಿಸಲು ಸರ್ಕಾರ ಸಫಲವಾಗಿಲ್ಲ. ಏಕೆಂದರೆ ಸರಿಯಾದ ವಿದ್ಯುತ್ ಸೌಲಭ್ಯವಿಲ್ಲ ಹಾಗೂ ಜನರಿಗೆ ತಿಳುವಳಿಕೆ ಕೊಡಲು ಬೇಕಾಗುವ ಮೂಲಭೂತ ಅವಶ್ಯಕತೆಗಲ ವ್ಯವಸ್ಥೆಯಿಲ್ಲ. ಇಗೀಗ ಬೆರಳೆಣಿಕೆಯಷ್ಟು ಗ್ರಾಮೀಣ ಜನರಿಗೆ ಮಾತ್ರ ಇಂಟರ್ ನೆಟ್‌ನ ಪರಿಚಯವಿದೆ. ಗ್ರಾಮಗಳಲ್ಲಿ ಸ್ಥಿತಿವಂತರು ಮಾತ್ರ DTH ಮತ್ತು Dish TV ನೋಡುತ್ತಾರೆ. ಇಗೀಗ ಮೋಬೈಲ್ ಬಳಕೆ ಶುರುವಾಗಿದೆ.
ಕೃಷಿಗೆ ಸಂಬಂಧಪಟ್ಟಂತೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ರೈತನ ಬೆಳೆಗೆ ಬೆಂಬಲ ಬೆಲೆಯನ್ನು ಕೊಡುತ್ತದೆ, ಬೆಳೆಗೆ ವಿಮಾ ಯೋಜನೆ ದೊರಕಿಸುತ್ತದೆ. ಹೀಗೆ ಮಾಡುವುದರಿಂದ ರೈತ ಸೋಮಾರಿಯಾಗುತ್ತಾನೆ. ಸರ್ಕಾರ ಹೀಗೆ ಮಾಡುವ ಬದಲು ರೈತನಿಗೆ ಬೆಳೆ ಬೆಳೆಯಲು ಬೇಕಾದ ಹೊಸ ಹೊಸ ಸಂಶೋಧನೆಗಳನ್ನು ತಿಳಿಸಿಕೊಟ್ಟು ಅವುಗಳ ಬಳಕೆಯನ್ನು ಅಳವಡಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಬೇಕು. ಕೃಷಿ ತಜ್ಞರು ರೈತರನ್ನು ಸಂಪರ್ಕಿಸಿ ಅವರಿಗೆ ಅನುಕೂಲವಾಗುವ ಬೆಳೆ (ಆದಾಯ ತರುವ) ಬೆಳೆಯುವ ವ್ಯವಸ್ಥೆ ಮಾಡಬೇಕು. ರೈತರು ಹೊಸ ಹೊಸ ತಳಿಗಳನ್ನು ಬೆಳೆಯಬೇಕು. ರೈತರು ಸರ್ಕಾರ ರಾಸಾಯನಿಕ ಗೊಬ್ಬರ ಕೊಡುವ ವ್ಯವಸ್ಥೆ ಮಾಡಲಿಲ್ಲ ಎಂದು ದೂರದೇ ಸಾವಯವ ತಿಪ್ಪೆ ಗೊಬ್ಬರ ಹಾಕಿ ಬೆಳೆ ಬೆಳೆಯಬೇಕು ಇದರಿಂದ ಭೂಮಿಗೂ ಮತ್ತು ರೈತನಿಗೂ ಅನುಕೂಲ. ಎಲ್ಲ ರೈತರು ಒಂದೇ ಬೆಳೆ ಬೆಳೆದು ಅದಕ್ಕೆ ಬೆಲೆ ಬರಲಿಲ್ಲ ಎಂದು ರಸ್ತೆಯಲ್ಲಿ ಬಿಸಾಕದೇ ಆ ಬೆಳೆಯನ್ನು ಸಂರಕ್ಷಿಸಿ ಕೆಡಲಾರದ ಹಾಗೇ ಶೇಖರಿಸುವ ವ್ಯವಸ್ಥೆಯ ಬಗ್ಗೆ ತಿಳಿದು ಅದನ್ನು ಅಳವಡಿಸಿಕೊಂಡು ಆ ಬೆಳೆಗೆ ಬೆಲೆ ಬಂದಾಗ ಮಾರಾಟ ಮಾಡುವುದರಿಂದ ರೈತನಿಗೆ ಲಾಭ ಸಿಗುತ್ತದೆ.
ಗ್ರಾಮೀಣ ಭಾರತದ ಪ್ರಜಾ ಆಡಳಿತ ಸವಾಲುಗಳು: ಜನರ ಪಾತ್ರ ಮತ್ತು ಅವರ ಮೀತಿಗಳು
ಗ್ರಾಮೀಣ ಭಾರತದ ಪ್ರಜಾ ಆಡಳಿತ ಗ್ರಾಮ ಪಂಚಾಯಿತಿಗೆ ಒಳಪಡುತ್ತದೆ. ಗ್ರಾಮೀಣ ಜನರಿಂದ ಆಯ್ಕೆಯಾದ ಅಭ್ಯರ್ಥಿಗಳು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಈ ಗ್ರಾಮ ಪಂಚಾಯತ ಸದಸ್ಯರು ಆ ಗ್ರಾಮದ ಭೂಮಿ, ಹೊಲ, ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ಶೌಚಾಲಯ, ಆರೋಗ್ಯ ಇಲಾಖೆ, ಶಾಲೆ, ವಿದ್ಯುತ್ ವ್ಯವಸ್ಥೆ, ಇವೆಲ್ಲವು ಸುವ್ಯವಸ್ಥೆಯಲ್ಲಿರುವಂತೆ ನೋಡಿಕೊಳ್ಳಬೇಕು. ಗ್ರಾಮಪಂಚಾಯತ ಅಧ್ಯಕ್ಷನಿಗೆ ಒಬ್ಬ ಮುಖ್ಯ ಮಂತ್ರಿಗೆ ಆ ರಾಜ್ಯದ ಬಗ್ಗೆ ಇರುವಷ್ಟು ಎಲ್ಲ ಅಧಿಕಾರಗಳು ಆ ಗ್ರಾಮದ ಬಗ್ಗೆ ಇರುತ್ತದೆ ಗ್ರಾಮದಲ್ಲಿರುವ ಶಿಕ್ಷಣ ಹಾಗೂ ಮೂಲಭೂತ ವ್ಯವಸ್ಥೆಗಳ ಕೊರತೆಯಿಂದ ಗ್ರಾಮ ಪಂಚಾಯತ ಸದಸ್ಯರಿಗೆ ಅವರ ಅಧಿಕಾರದ ಬಗ್ಗೆ ತಿಳಿದಿಲ್ಲ ಎಲ್ಲರೂ ತಮಗೆ ತಿಳಿದ ಅಧಿಕಾರವನ್ನು ತಮ್ಮ ರಾಜಕೀಯ ಬೆಳವಣಿಗೆಗೆ ಉಪಯೋಗಿಸಿ ಕೊಳ್ಳುತ್ತಾರೆ ಚುನಾವಣಾ ಸಮಯದಲ್ಲಿ ಮಾತ್ರ ಗ್ರಾಮದ ಎಲ್ಲ ಅಭಿವೃದ್ಧಿ ಕಾರ್‍ಯಗಳ ಬಗ್ಗೆ ಯೋಚಿಸುತ್ತಾರೆ ಅದೂ ಓಟಿನ ಸಲುವಾಗಿ ಗ್ರಾಮದ ಎಲ್ಲ ಅಭಿವೃದ್ಧಿ ಕಾರ್‍ಯಗಳನ್ನು ಗ್ರಾಮ ಪಂಚಾಯತ ಸದಸ್ಯರೆ ಮಾಡಬೇಕು ಆದರೆ ಆ ಗ್ರಾಮವನ್ನೊಳಗೊಂಡ ಎಮ್ ಎಲ್ ಎ ಎಲ್ಲ ಕಾರ್‍ಯಗಳನ್ನು ತಮ್ಮ ಅನುಕೂಲಕ್ಕೆ ಮಾಡಲು ಬಂದು ಕಳಪೆ ದರ್ಜೆಯಲ್ಲಿ ಮಾಡಿ ಮುಗಿಸುತ್ತಾರೆ.
ಗ್ರಾಮದ ಜನರಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರಿಂದ ಅವರಿಗೆ ತಿಳುವಳಿಕೆ ಬರುತ್ತದೆ ತಾವೆ ಆರಿಸಿ ಕಳುಹಿಸಿದ ಗ್ರಾಮ ಪಂಚಾಯತ ಸದಸ್ಯರುಗಳಿಂದ ಗ್ರಾಮದ ಉದ್ಧಾರಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಜನರೆ ಮಾಡಿಸುವಷ್ಟು ಅರಿವುಳ್ಳವರಾಗಿರುತ್ತಾರೆ ಗ್ರಾಮ ಪಂಚಾಯತ ಆದಾಯ ಮೂಲ ಎಂದರೆ ಮನೆ,ಹೊಲ, ಖಾಲಿ ಜಾಗೆ, ಅಂಗಡಿ, ವ್ಯಾಪಾರ, ನೀರು, ಎಲ್ಲದರು ಮೇಲಿನ ಸುಂಕ ಜೊತೆಗೆ ಗ್ರಾಮಾಭಿವೃದ್ಧಿಗೆ ಸರಕಾರ ಕೊಡುವ ಸ್ವಲ್ಪ ಹಣ. ಗ್ರಾಮೀಣರಿಗೆ ಶಿಕ್ಷಣ ಕೊಟ್ಟು ಸರ್ಕಾರ ಕೊಡುವ ಸವಲತ್ತುಗಳ ತಿಳುವಳಿಕೆ ಕೊಡಬೇಕು ಮತ್ತು ಕೆಲವು ಕಾರ್‍ಯ ಕ್ರಮಗಳನ್ನು ಗ್ರಾಮ ಪಂಚಾಯತ ನಿರ್ವಹಿಸಬೇಕು ಉದಾಹರಣೆಗಾಗಿ 1)JRDP, 2)JRY, 3)DWCRA, 4)EAS, 5)SGRY, ಮುಂತಾದವುಗಳ ಕಾರ್‍ಯಾಚರಣೆಗೆ ಬರುವುದಲ್ಲಿ ವಿಳಂಬವಾಗಿದೆ ಎಕೆಂದರೆ ರಾಜಕೀಯ ಹಾಗೂ ಎಮೆ.ಎಲ್.ಎ ಗಳು ಮತ್ತು ಗ್ರಾಮ ಪಂಚಾರತ ಸದಸ್ಯರ ನಡುವಿನ ಅಂತರ.
ಕಾರ್‍ಯಕ್ರಮ PDS (Public distribution system) ಗ್ರಾಮೀಣ ಜನರಿಗೆ ಪಡೀತರ ಚೀಟಿಯ ಮೂಲಕ ಧಾನ್ಯಗಳನ್ನು ಹಂಚುವುದು ಜನರ ಆರ್ಥಿಕ ಪರಿಸ್ಥಿತಿ ನೋಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಯೋಗ್ಯ ರೀತಿಯಲ್ಲಿ ಎಣ್ಣೆ ವಿತರಣೆ ಮುಂತಾದವುಗಳನ್ನು ಗ್ರಾಮ ಪಂಚಾಯತ ನಿರ್ವಹಿಸಬೇಕು. ಗ್ರಾಮ ಪಂಚಾಯತ ಸದಸ್ಯರ ಜೊತೆಗೆ ಗ್ರಾಮೀಣ ಜನರು ’ ಈ ಕೆಲಸ ಗ್ರಾಮ ಪಂಚಾಯತ ಅಧಿಕಾರ’ ಎಂಬ ದೋರಣೆಯಿಂದ ಕೆಲಸ ಮಾಡಬೇಕು ಇದರಿಂದ ಗ್ರಾಮಗಳು ಎಲ್ಲ ರೀತಿಯಿಂದ ಸುಧಾರಿಸುತ್ತವೆ ಜೊತೆಗೆ ಗ್ರಾಮದ ಯುವಕರು ಪಟ್ಟಣಕ್ಕೆ ಉದ್ಯೋಗಕ್ಕಾಗಿ ಹೋಗುವುದನ್ನು ತಪ್ಪಿಸಬಹುದು ಗ್ರಾಮ ಪಂಚಾಯತ ತನ್ನೆಲ್ಲ ಅಧಿಕಾರ ಉಪಯೋಗಿಸಿಕೊಂಡು ಜನರ ಸಹಕಾರದಿಂದ ಗ್ರಾಮಗಳನ್ನು ಉದ್ಧರಿಸಿದರೆ ದೇಶವೆ ಉದ್ದಾರವಾಗುತ್ತದೆ. ಯಾವುದಕ್ಕೂ ಸರಕಾರದ ಮೇಲೆ ಅವಲಂಬಿತವಾಗದೆ ತಮ್ಮ ಅಭಿವೃದ್ಧಿಯನ್ನು ತಮ್ಮ ಅಧಿಕಾರ ಉಪಯೋಗಿಸಿಕೊಂಡು ಮಾಡಬೇಕು.
ಗ್ರಾಮೀಣ ಉದ್ದಿಮೆಗಳು
ಗ್ರಾಮದಲ್ಲಿ ಮಾಡುವಂತ ಸಣ್ಣ ಪ್ರಮಾಣದ ಉದ್ದಿಮೆಗಳನ್ನು ಗ್ರಾಮೀಣ ಉದ್ದಿಮೆಗಳೆನ್ನುತ್ತಾರೆ ಅಂದರೆ ಸೀರೆ ನೆಯುವುದು, ಮಡಿಕೆಮಾಡುವುದು, ಚಮ್ಮಾರ ಕೆಲಸ, ಇಟ್ಟಿಗೆ ಮಾಡುವುದು, ಕೆರೆಯಲ್ಲಿ ವೀನು ಹಿಡಿಯುವುದು, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮತ್ತು ಗೃಹ ಉದ್ದಿಮೆಗಳಾದ ಉಪ್ಪಿನಕಾಯಿ, ಹಪ್ಪಳ, ಚಟ್ನಿಪುಡಿ,ರೊಟ್ಟಿ, ಹೀಗೆ ಅನೇಕ ಪದಾರ್ಥಗಳನ್ನು ಮಾಡುವುದು. ಇವುಗಳಿಗೆ ಸರ್ಕಾರ, ಸ್ವಯಂಸೇವಾ ಸಂಘಗಳು, ಮಹಿಳಾ ಮಂಡಳಗಳು ಸಹಾಯ ಮಾಡಬೇಕು ಹಾಗೂ ಗ್ರಾಮೀಣ ಉದ್ಯೋಗದಲ್ಲಿ ನಿರತರಾದ ಜನರಿಗೆ ಹೊಸ ಹೊಸ ತಂತ್ರಜ್ಞಾನ ಬೆಳೆಸಿ ಉದ್ಯೋಗದಲ್ಲಿ ಹೆಚ್ಚಿನ ಉತ್ಪಾದನೆಯಾಗಲು ತರಬೇತಿ ಕೊಡಬೇಕು. ಗ್ರಾಮೀಣ ಉದ್ದಿಮೆಗಳ ಉತ್ಪನ್ನಗಳನ್ನು ಹೆಚ್ಚಾಗಿ ಕರಿದೀಸಿ ಅವರಿಗೆ ಪ್ರೋತ್ಸಾಹ ಹಾಗೂ ಆದಾಯ ದೊರೆಯುವ ವ್ಯವಸ್ಥೆ ಮಾಡಬೇಕು ಗ್ರಾಮೀಣ ಉದ್ದಿಮೆಗೆ ಬೇಕಾದ ಎಲ್ಲ ಮೂಲಭೂತ ಸೌಂಕರ್‍ಯಗಳನ್ನು ಒದಗಿಸಬೇಕು, ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳು ಕಡಿಮೆ ಮತ್ತು ಸುಲಭ ದರದಲ್ಲಿ ಸಿಗುವ ವ್ಯವಸ್ಥೆಯಾಗಬೇಕು
ಗ್ರಾಮೀಣ ಪ್ರದೇಶದಲ್ಲಿರುವ ಅತೀ ಸಣ್ಣ ಉದ್ದಿಮೆಗಳನ್ನು ಮೇಲೆತ್ತುವುದಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಉತ್ಪನ್ನ ಮಾರಾಟ ಎಜನ್ಸಿಗಳನ್ನು ೧೮೬೦ ರ ಸಹಕಾರಿ ಸಂಘಗಳ ನೋಂದಣಿ ಕಾನೂನಿನನ್ವಯ ರಚಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಎರಡು ದಶಕ ಕಾಲದಿಂದ ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿ ಕಾರ್‍ಯಕ್ರಮದಡಿ ಗ್ರಾಮೀಣ ಉತ್ಪಾದಕರ ಬಳಕೆಗೆ ಸಹಾಯವಾಗುವಂತೆ ಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಿದೆ. ಸ್ವ ಉದ್ಯೋಗ ಕಾರ್‍ಯಕ್ರಮದಡಿ ವಿಶೇಷವಾಗಿ SಉSಙ ಫಲಾನುಭವಿಗಳಿಗಾಗಿ ರಾಷ್ಟ್ರ ಮಟ್ಟದಲ್ಲಿ ಒಂದು ಸಮೀತಿಯು ಗ್ರಾಮೀಣ ಉತ್ಪಾದಕರ ಉತ್ಪನ್ನ ಮಾರಾಟಕ್ಕಾಗಿ ಇರುವ ಪ್ರಮುಖ ಸಮಸ್ಯೆಗಳನ್ನು ನೋಡಿಕೊಳ್ಳುತ್ತದೆ. ಗ್ರಾಮೀಣಾಬಿವೃದ್ಧಿ ಸಚಿವಾಲಯ ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಬೆಂಬಲಿಸುವ ಕಾರಣಕ್ಕಾಗಿ ಪ್ರತಿಯೊಂದು ಕುಟುಂಬದ ಆರ್ಥಿಕತೆಯನ್ನು ಉನ್ನತಿಕರಿಸುವುದಕ್ಕೆ ಸಹಾಯವಾಗಲು ಈಗಾಗಲೇ ನಂಬಿರುವ ಮುಖ್ಯ ಉದ್ಯೋಗದ ಜೊತೆಗೆ ಉಪಉದ್ಯೋಗಗಳನ್ನು ಸೃಷ್ಟಿಸಿದೆ. ಸ್ವಸಹಾಯ ಗುಂಪುಗಳ ಜಾಲವನ್ನು ಮುನ್ನಡಿಸುವ ದೃಷ್ಟಿಯಿಂದ ಸಮನ್ವಯತೆಯ ವಿಚಾರವಾಗಿ NABARD, SIDBI, ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಸಚಿವಾಲಾಯ, ಸಾಮಾಜಿಕ ನ್ಯಾಯಸಚಿವಾಲಯ, ರಾಷ್ಟ್ರೀಯ ಮಹಿಳಾಕೋಶ, ಆಇಂ ಬ್ಯಾಂಕಿಗ್ ಇಲಾಖೆ ಮುಂತಾದ ಪ್ರತಿನಿಧಿಗಳ ಸಭೆಯನ್ನು ಗ್ರಾಮೀಣಾಭಿವ್ರೃದ್ಧಿ ಅಧ್ಯಕ್ಷತೆಯಲ್ಲಿ ಸ್ವಸಹಾಯ ಗುಂಪು ಇತರ ಎಲ್ಲಾ ಇಲಾಖೆಗಳ ಸಮನ್ವಯ ಸಾಧಿಸಿ ಕುಟುಂಬಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಸ್ವಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ವಸ್ತುಗಳ ಮಾರಾಟಕ್ಕೆ ಬೆಂಬಲ ನೀಡುವುದಕ್ಕಾಗಿ ಈವರೆಗೆ ೧೧ ರಾಜ್ಯಗಳಲ್ಲಿ ಗ್ರಾಮೀಣ ಉತ್ಪನ್ನ ಮಾರಾಟಕ್ಕೆ ಮೂಲಭೂತ ಸೌಕರ್‍ಯಗಳನ್ನೊದಗಿಸಲಾಗಿದೆ.
- Login or register to post comments
- Email this page