You are hereಆರ್ಥಿಕ ಅಸ್ಪೃಶ್ಯ ಸಮಾಜದ ಬದುಕು-ಬವಣೆ
ಆರ್ಥಿಕ ಅಸ್ಪೃಶ್ಯ ಸಮಾಜದ ಬದುಕು-ಬವಣೆ
ಲೇಖಕರು: ಕೆ.ಆರ್.ರವೀಂದ್ರ
ಭಾರತ ಗಣರಾಜ್ಯವನ್ನು ರೈತ ರಾಜ್ಯವೆಂದು ಕೂಡ ಕರೆಯುತ್ತೇವೆ. ಏಕೆಂದರೆ ಮೂಲತಃ ಭಾರತ ಕೃಪಿ ಪ್ರಧಾನವಾದ ದೇಶ. ಇದೇ ಕಾರಣಕ್ಕೆ ದಿವಂಗತ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯುವರು 'ಜೈ ಜವಾನ್-ಜೈ ಕಿಸಾನ್' ಎಂಬ ನಿನಾದವನ್ನು ದೇಶಕ್ಕೆ ನೀಡಿದರು. ಭಾರತದಲ್ಲಿ ಎಲ್ಲಾ ರಾಜಕೀಯಕ್ಕೆ ಬಳಕೆಯಾಗುವ ಸಂಗತಿಗಳೇ, ಇದರಿಂದ ರೈತ ಕೂಡ ಹೊರತಲ್ಲ. ಮಾಜಿ ಉಪಪ್ರಧಾನಿಯಾಗಿದ್ದ ದಿವಂಗತ ದೇವಿಲಾಲ್ ರೈತ ಮಗನೆಂಬ ಘೋಷಣೆ ಅಡಿಯಲ್ಲಿ ಆರಂಭಿಸಿದ ರಾಜಕೀಯದಾಟ ಅದು ಇತರಡೆಗೆ ಪಸರಿಸಿ ಎಲ್ಲಾ ರಾಜಕಾರಣಗಳು ರೈತ ಮಕ್ಕಳೆಂಬ ಘೋಷ ವಾಕ್ಯದ ಮೇಲೆ ರಾಜಕೀಯ ದೊಂಬರಾಟ ಆಡಿದವರೆ!
ರಾಜ್ಯದಲ್ಲಿ ಮಾಜಿಪ್ರಧಾನಿ ದೇವೆಗೌಡ್ರು ಮಣ್ಣಿನ ಮಗನಾದರೆ, ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು. ಒಟ್ಟಿನಲ್ಲಿ ದೇಶ-ರಾಜ್ಯ ರಾಜಕಾರಣದಲ್ಲಿ ಬಹುತೇಕ ರಾಜಕಾರಣಗಳು ಮಣ್ಣಿನ ಮಕ್ಕಳು ಇಲ್ಲ ಮೊಮ್ಮಕಳೇ! ಆದರೆ ಯಾರು ಕೂಡ ರೈತರಲ್ಲ, ಇದು ವ್ಯವಸ್ಥೆಯ ದುರಂತ. ರೈತ ಹೆಸರಿನಲ್ಲಿ ರಾಜಕಾರಣ, ಸಂಘಟನೆ, ಚಳುವಳಿ ಇದೆಲ್ಲಾ ಹಿಂದಿನಿಂದಲ್ಲೂ ನಡೆದುಕೊಂಡು ಬಂದೇ ಇದೆ. ಆದರೆ ಇದರಿಂದ ರೈತನಿಗಾದೆ ಉಪಯೋಗ ಮಾತ್ರ ಶೂನ್ಯ. ಇದಕ್ಕೆ ಕಾರಣ ನಮ್ಮಲ್ಲಿ ಬಂಡವಾಳಶಾಹಿಗಳಂತೆ ರೈತ ಲಾಬಿ ಇಲ್ಲ. ಹೀಗಾಗಿ ಅನ್ನದಾತ ಗೋಳು ಕೇಳುವ ನಾಥನೇ ಇಲ್ಲ ಕಾಣದಂತಾಗಿದೆ.
ರೈತ ಇಲ್ಲಿ ಎಲ್ಲಾ ಪಕ್ಷಗಳಿಗೂ ಮತದಾನ ಪ್ರಭು. ಆದರೆ ಅವನ ಮಾತ್ರ ಇವರಿಂದ ಏನನ್ನು ನಿರೀಕ್ಷಿಸುವಂತಿಲ್ಲ. ನಿರೀಕ್ಷಿಸಿದರು ಸಿಗುವದೇನು? ರೈತ ಆತ್ಮಹತ್ಯೆ ಮಾಡಿಕೊಂಡಾಗ ಅವನ ಕುಟುಂಬಕ್ಕೆ ಸರ್ಕಾರ ಕಡೆಯಿಂದ ಪರಿಹಾರದ ಚೆಕ್ (ಅವು ಕೂಡ ಅದೆಷ್ಟೋ ಸಲ ಬೋನಸ್ ಆಗಿಬಿಡುತ್ತೆ) ಪ್ರತಿಪಕ್ಷಗಳಿಂದ ಸವಕಲು ಪ್ರತಿಭಟನೆ. ರೈತ ಅಂದ್ರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆರ್ಥಿಕ ಅಸ್ಪೃಶ್ಯ ಎಂದು ವ್ಯಾಖ್ಯಾನಿಸಬಹುದು. ಈಗ ನೋಡಿ ಕೂಲಿಕಾರನಿಗೆ ಒಂದು ನಿಗದಿಯಾದ ಕೂಲಿ ಸಿಗುತ್ತೆ. ಒಬ್ಬ ದಲ್ಲಾಳಿಗೆ ಅವನ ಕಮೀಷನ್ ಯಾವುದೆ ಭಾದೆಯಿಲ್ಲದೆ ಸಿಗುತ್ತೆ. ಇದೇ ಬೆಳೆ ಬೆಳದೆ ರೈತನಿಗೆ ಮಾತ್ರ ನಿರಿಕ್ಷಿತ ಮಟ್ಟದಲ್ಲಿ ಹಣ ಸಿಗುವುದೇ ಇಲ್ಲ. ಆಸಲಿಗೆ ಅವನ ಅಸಲು ಕೂಡ ಸಿಗುವುದಿಲ್ಲ. ಬೆಳೆ ಸಿಗದೇ ಹೋದಾಗ ಸರ್ಕಾರಗಳು ಘೋಷಿಸುವ ಬೆಂಬಲ ಬೆಲೆ ಅವನು ಪಡೆದ ಸಾಲದ ಮರು ಪಾವತಿಗೂ ಸಾಕುಗುವುದಿಲ್ಲ. ಅಂದ್ಮೇಲೆ ರೈತ ಆರ್ಥಿಕ ಅಸ್ಪೃಶ್ಯ ತಾನೆ!
ಬರದ ಪರಿಸ್ಥಿತಿ ಉಂಟಾದಾಗ, ಇಲ್ಲ ಅತಿವೃಷ್ಟಿಯಿಂದ ಬೆಳೆ ಹಾನಿಯಾದಾಗ ಅವನ ನೋವಿಗೆ ಯಾರು ಸ್ಪಂದಿಸುವುದಿಲ್ಲ. ಅವನು ತನಗೆ ಅರ್ಹವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡುವುದು ಅನಿವಾರ್‍ಯ ತಾನೇ. ಸಾಮಾಜಿಕ ವ್ಯವಸ್ಥೆ ಬಲಗೊಂಡಿದ್ದು ಕೂಡ ಆಂದೋಲನಗಳ ಮೂಲಕವೇ, ಸೋ ಹೀಗಾಗಿ ರೈತ ಕೂಡ ಅವನೊಂದು ಬಲವಾದ ಸಾಮಾಜಿಕ ಆಂದೋಲನಕ್ಕೆ ಅಣಿಯಾಗದೇ ಅವನಿಗೆ ಈ ವ್ಯವಸ್ಥೆಯಲ್ಲಿನ ಆರ್ಥಿಕ ಅಸ್ಪೃಶ್ಯಯಿಂದ ಮುಕ್ತಿ ಸಾಧ್ಯವಿಲ್ಲ. ಗ್ಯಾಟ್, ಡೆಂಕಲ್ ಒಪ್ಪಂದಗಳೆಲ್ಲಾ ಮುಗಿದು ಹೀಗ ಕುಲಾಂತರಿವರಿಗೂ ವ್ಯವಸ್ಥೆ ಪಯಣಿಸಿದೆ. ಅಂದ್ಮೇಲೆ ರೈತ ಇನ್ನೂ ನೆಮ್ಮದಿಯಾಗಿ ಉಸಿರಾಡಲು ಭಾರತ ಸೇರಿದಂತೆ ತೃತೀಯ ಜಗತ್ತಿಗೆ ಸಾಧ್ಯವೇ ಇಲ್ಲ. ಯುರೋಪ್, ಅಮೇರಿಕಾದಲ್ಲಿ ರೈತ ಅತ್ಯಂತ ಬಲವಾದ ಶಕ್ತಿ. ನಮ್ಮಲ್ಲಿನ ಬಂಡವಾಳಶಾಹಿಯಂತೆ ಅವನಿಗೆ ಅಲ್ಲಿ ವಿಶೇಷ ಮಾನ್ಯತೆ ಇದೆ. ಅವನನ್ನು ತೃಪಿಪಡಿಸಲು ಇಡೀ ವಿಶ್ವದ ಕೃಷಿ ಪ್ರಧಾನ ದೇಶಗಳ ರೈತರನ್ನು ಕಣ್ಣೀರ ಕೊಡಿಗೆ ಬಂಡವಾಳಶಾಹಿ ದೇಶಗಳು ನೂಕುತ್ತಿರುವುದು ಜಾಗತಿಕ ಒಪ್ಪಂದಗಳ ಒಂದು ಪ್ರಧಾನವಾದ ಭಾಗವೇ ಸರಿ.
ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣವಲ್ಲ:
ಆದಿ ಮಾನವ ಗೆಡ್ಡೆ ಗೆಣಸು, ಹಸಿ ಮಾಂಸ ತಿನ್ನುವುದನ್ನು ಬಿಟ್ಟು, ಕೃಷಿತನ್ನು ಪ್ರಾರಂಭಿಸಿ, ನೀರು, ಫಲವತ್ತಾದ ಭೂಮಿಯು ಇರತಕ್ಕಂತಹ ಸ್ಥಳದಲ್ಲಿ ನೆಲೆಸಿ, ಕೃಷಿ ಕೆಲಸಗಳಿಗೆ ದನ, ಕರು, ಎಮ್ಮೆಗಳನ್ನೂ, ಮಾಂಸ ಮೊಟ್ಟೆಗಳಿಗೆ ಕೋಳಿ ಮುಂತಾದವುಗಳನ್ನು ಸಾಕಲಾರಂಭಿಸಿದನು. ಮುಂದಿನ ದಿನಗಳಲ್ಲಿ ತನಗೆ ಬೇಕಾದ ದವಸ-ಧ್ಯಾನ, ಮೇವಿಗೆ ಹಲ್ಲು, ಉರುವಲಿಗೆ ಸೌದೆ ಇವುಗಳನ್ನು ಗಳಿಸಲು ಪ್ರಾರಂಭಿಸಿದ ದಿನಗಳನ್ನು ಕೃಷಿಯ ಪ್ರಾರಂಭವಾದ ದಿನಗಳೆಂದು ಕರೆಯಬಹುದು. ಪ್ರಾಚೀನ ವ್ಯವಸಾಯ ಪದ್ಧತಿಗಳು ಸಾವಯವ ಕೃಷಿ ಪದ್ಧತಿಗಳನ್ನೇ ಆಧರಿಸಿ ವ್ಯವಸಾಯ ಮಾಡುತ್ತಿದ್ದರು.
ನಮಗೆ ಸ್ವಾತಂತ್ರ್ಯ ಬಂದಾಗ ೩೩ ಕೋಟಿ ಜನ ಇದ್ದರು. ಆಗ ೫೦ ದಶಲಕ್ಷ ಟನ್ ಆಹಾರ ಉತ್ಪತ್ತಿಯಾಗುತ್ತಿತ್ತು. ಇವತ್ತು ೧೦೫ ಕೋಟಿ ಜನಸಂಖ್ಯೆ ಆಗಿದ್ದು, ಸುಮಾರು ೨೦೦ ದಶಲಕ್ಷ ಟನ್‌ಗಳಷ್ಟು ಆಹಾರವನ್ನು ಉತ್ಪತ್ತಿ ಮಾಡುತ್ತಿದ್ದರೂ ಸಾಕಾಗುತ್ತಿಲ್ಲ. ಹಳೆಯ ಪದ್ಧತಿಗಳ ಮೂಲಕ ಹೆಚ್ಚಿನ ಇಳವರಿಗಳನ್ನು ಪಡೆಯಲು ಸಾಧ್ಯವಿಲ್ಲದ ಕಾರಣ ಆಧುನಿಕ ಪದ್ಧತಿಗಳಿಗೆ ಮೊರೆ ಹೋಗುವುದು ಒಂದು ಹಂತದಲ್ಲಿ ರೈತರಿಗೆ ಅನಿರ್ವಾಯ ಕೂಡ ಆಯಿತು. ಯೂರಿಯಾ, ಪೊಟಾಷ್‌ಗಳ ಒಳಕೆ ಇಳವರಿಯ ದೃಷ್ಟಿಯಿಂದ ಒಳಕೆ ಮಾಡುವುದು ಅನಿವಾರ್‍ಯವಾಯಿತು. ಇದರಿಂದ ಭೂಮಿ ಬಹಳ ಬೇಗ ಬರುಡಾಗುವ ಅಪಾಯ ಎದುರಾಯಿತು. ಇದರ ಜೊತೆಗೆ ಕೀಟಗಳ ನಾಶಕಕಾಗಿ ಅಕಾರಿಸೈಡ್, ನಿಮ್ಯಾಟಿಸೈಡ್, ರೋಡೆಂಟಿಸೈಡ್, ವೀಡಿಸೈಡ್‌ಗಳ ಬಳಕೆ ಹೆಚ್ಚಾಯಿತು.
ಇಂತಹ ಆಧುನಿಕ ಕೃಷಿಯಿಂದ ರೈತ ಹೆಚ್ಚಿನ ಇಳವರಿ ಪಡೆಯುತ್ತಿದ್ದರು, ಒಂದಡೆ ಸರಿಯಾದ ಬೆಂಬಲದ ಬೆಳೆಯಿಲ್ಲದೆ ಲಕ್ಷಾಂತರ ರೂಪಾಯಿ ಸುರಿದು ಬೆಳೆದ ಬೆಳೆಯನ್ನು ಕಂಡು ಅವನು ಕಂಗಲಾಗಿ ಆತ್ಮಹತ್ಯೆ ಮಾಡಿಕೊಂಡ ಸಾವಿರಾರು ಉದಾಹರಣೆಗಳು ನಮ್ಮಲಿದೆ. ಹಾಗಂತ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ?. ರೈತರು ಕೂಡ ಸ್ವಲ್ಪ ಚಿಂತಿಸಿ ಬೆಳೆಗಳನ್ನು ಬೆಳೆಯುವುದು ಅನಿವಾರ್‍ಯ. ನಾನು ಕಂಡಂತೆ ನಮ್ಮ ಚಿಂತಾಮಣಿ ತಾಲ್ಲೂಕಿನಲ್ಲಿ ರೈತರು ಸಾಮಾನ್ಯವಾಗಿ ಟಾಮೋಟೋಯನ್ನು ಆರ್ಥಿಕ ಬೆಳೆಚಿiiಗಿ ಬೆಳೆಯುತ್ತಾರೆ. ಒಂದೊಂದ್ಸಲ ಅದರ ಬೆಲೆ ಬಾಕ್ಸ್ (ಒಂದು ಬಾಕ್ಸ್‌ಗೆ ೩೦ ಕೆ.ಜಿ) ೨ ರೂ ಯಿಂದ ೩ ರೂಪಾಯಿಗೆ ಕುಸಿದು ಹೋಗಿರುತ್ತೆ.
ಅಂತಹ ಸಂದರ್ಭದಲ್ಲಿ ರೈತರು ಇಡೀ ಟಾಮೋಟೋಗಳನ್ನು ರಸ್ತೆಗೆ ಸುರಿದು ಬೆಟ್ಟವನ್ನೇ ನಿರ್ಮಿಸಿ ಪ್ರತಿಭಟನೆಗಳನ್ನು ಮಾಡುತ್ತಾರೆ. ಒಂದ್ಸಲ ಬೆಳೆಯಿಲ್ಲ ಎಂಬ ಕಾರಣದಿಂದ ರೈತರು ಯಾರು ಹೆಚ್ಚಾಗಿ ಟ್ಯಾಮೇಟೋ ಬೆಳೆಯಲು ಮುಂದಾಗಲಿಲ್ಲ. ಆದರೆ ಉಲವಾಡಿ ಎಂಬ ಊರಿನ ರೈತ ಆ ವರ್ಷ ಸುಮಾರು ೧೦ ಎಕರೆ ಪ್ರದೇಶದಲ್ಲಿ ಟ್ಯಾಮೇಟೋ ಬೆಳೆದನ್ನು, ಒಂಪರ್ ಬಹುಮಾನ ಪಡೆದಂತೆ ಅವನು ಆ ವರ್ಷ ಲಕ್ಷಾಂತರ ರೂಪಾಯಿ ಸಂಪಾದಿಸಿಬಿಟ್ಟ. ಅಲ್ಲದೇ ಅದೇ ಖುಷಿಯಲ್ಲಿ ಒಂದು ಮಾರುತಿ ಕಾರ್ ಕೂಡ ಖರೀದಿಸಿಬಿಟ್ಟ. ಇದನ್ನು ನೋಡಿದ-ಕೇಳಿದ ರೈತರೆಲ್ಲಾ ಮುಂದಿನ ಸಲ ಬರೀ ಟ್ಯಾಮೇಟೋ ಬೆಳೆಯಲು ಮುಂದಾದರು. ಆದರೆ, ಮತ್ತೆ ಅದೇ ಸೂತಕ ಛಾಯೆ ಅವರ ಮುಖಗಳಲ್ಲಿ ಕಂಡಿದ್ದು. ಅದೇ ಊಲವಾಡಿ ರೈತ ಈ ಬಾರಿ ಟ್ಯಾಮೇಟೋ ಬದಲು ರೇಷ್ಮೆ ಬೆಳೆದು ಲಾಭ ಮಾಡಿಕೊಂಡ. ಆಗ ಅವನು ನೀಡದ ಉತ್ತರ ’ ಎಲ್ಲಾರು ಬೆಳೆದಿದ್ದು ನಾವು ಬೆಳೆಯೋಕ್ಕೆ ಹೋಗ್‌ಬಾರದು. ಸ್ವಲ್ಪ ಕಾದು ನೋಡಿ, ಯಾವ ವಸ್ತುವಿಗೆ ಡಿಮ್ಯಾಂಡ್ ಬರಬಹುದೆಂದು ಅರ್ಥ ಮಾಡಿಕೊಂಡು ಬೆಳೆಕ್ಕೆ ಹೋಗ್ಬೇಕು’.
ಆ ರೈತನ ಮಾತು ಎಷ್ಟೊಂದು ಸತ್ಯವಲ್ಲ. ರೈತರ ಯಾವುದೇ ಬೆಳೆಯನ್ನು ಬೆಳೆಯುವ ಮುನ್ನ ಸ್ವಲ್ಪ ಸಾಧಕ-ಭಾದಕಗಳನ್ನು ಪರಿಶೀಲಿಸಿ ಹೆಜ್ಜೆಯಿಡುವುವದು ಉತ್ತಮ.
ಕೃಷಿಗೂ ಬೇಕು ಕ್ರಿಯಾಶೀಲತೆ:
ಸಾಧಾರಣವಾಗಿ ನಾವು ಮೂರು ಕಾಲಗಳಲ್ಲಿ ಬೆಳೆಯನ್ನು ಬೆಳೆಯುತ್ತೇವೆ. ಮೊದಲನೆಯದು ಮುಂಗಾರು, ಎರಡನೆಯದು ಹಿಂಗಾರು ಹಾಗೂ ಮೂರನೆಯದು ಬೇಸಿಗೆ. ಹೆಚ್ಚಿನ ಪ್ರದೇಶಗಳಲ್ಲಿ ಸಾಗುವಳಿ ಮುಂಗಾರಿನಲ್ಲೇ ಆಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಹಿಂಗಾರಿನಲ್ಲೂ ನಡೆಯುತ್ತದೆ. ಬೇಸಿಗೆಯಲ್ಲಿ ಸಾಗುವಳಿ ಬಹಳ ಕಡಿಮೆ. ಮಳೆ ಆಧಾರಿತ ಚಟುವಟಿಕೆಗಳನ್ನು ನಾವು ಒಣಭೂಮಿ ಬೇಸಾಯ ಎಂದು ಕರೆಯುತ್ತೇವೆ. ಅನಗತ್ಯವಾಗಿ ರಸಗೊಬ್ಬರಗಳನ್ನು, ಕೀಟಶಾಶಕಗಳನ್ನು ಉಪಯೋಗಿಸುವುದು ಅಲ್ಲದೇ ಅಗತ್ಯಕ್ಕಿಂತ ಹೆಚ್ಚಾಗಿ ನೀರಿನ ಬಳಕೆಯಿಂದಾಗಿ ಕೂಡ ಅನೇಕ ಸಮಸ್ಯೆಗಳು ಉಂಟಾಗುತ್ತಿದೆ. ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ ರೈತರು ಉತ್ತಮವಾದ ಪೌಷ್ಠಿಕವಾದ ಆಹಾರವನ್ನು ಉತ್ಪಾದಿಸಬಹುದು. ಇದು ಸಾವಯವ ತರಕಾರಿಗಳಿಗೆ, ಆಹಾರ ಪದಾರ್ಥಗಳಿಗೆ ವಿಶ್ವದ್ಯಾಂತ ಮಾರಕಟ್ಟೆ ಸೃಷ್ಟಿಚಿiiಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ರೈತರು ಮುಂದಾಗಬೇಕಿದೆ. ಅಲ್ಲದೇ ಹನಿ ನೀರಾವರಿ ಪದ್ದತಿಯನ್ನು ಕೃಷಿಯಲ್ಲಿ ರೂಢಿಸಿಕೊಂಡರೆ ನೀರಿನ ಸಮಸ್ಯೆ ಕೂಡ ನೀಗಸಬಹುದಾಗುತ್ತದೆ.
ಅಲ್ಲದೆ ಸಾವಯವ ಕೃಷಿಯಲ್ಲಿ ಹೆಚ್ಚಾಗಿ ನೈಸರ್ಗಿಕ ಸಂಪನ್ಮೂಲಗಳನ್ನೇ ಆಧರಿಸಿ ಕೃಷಿ ಮಾಡುವುದರಿಂದ ಯಾವುದೇ ರೀತಿಯ ವಿಷಕಾರಿ ಅಥವಾ ದುಷ್ಪರಿಣಾಮಕಾರಿ ವಸ್ತುವನ್ನು ಉಪಯೋಗಿಸುವುದಿಲ್ಲ. ಇಲ್ಲಿ ಎಲ್ಲವೂ ಜೈವಿಕ ವಸ್ತುಗಳಾಗಿದ್ದು, ಪರಿಸರಕ್ಕೆ ಅಥವಾ ಬೆಳೆಯುವಂತಹ ಬೆಳೆಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಜೊತೆಗೆ, ಇದರಿಂದ ಹೆಚ್ಚಾಗಿ ಆರೋಗ್ಯಕ್ಕೆ ಬೇಕಾದಂತಹ ಉತ್ತಮ ಫಸಲನ್ನು ಪಡೆಯಬಹುದು. ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡಾಗ ಬೆಳೆಯ ಇಳವರಿ ತುಸು ಕಡಿಮೆ ಆಗಬಹುದು. ಆದರೆ ಫಸಲು ಕೈಗೆ ಬಂದಾಗ ಈ ಸಾವಯವ ಕೃಷಿ ಪದ್ದತಿಯ ಬೆಳೆಗೆ ಹೆಚ್ಚು ಬೆಲೆಯಿರುವುದರಿಂದ ಲಾಭ ಹೆಚ್ಚು ಬರುತ್ತದೆ. ಈ ಪದ್ಧತಿಯ ನಿರಂತರ ಬಳಕೆಯಿಂದ ರೈತ ಸುಸ್ಥಿತಿಯನ್ನು ಪಡೆಯುತ್ತಾನೆ. ಅಲ್ಲದೆ ಬಂಜರು ಭೂಮಿಯಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ ಎಂಬ ಭಾವನೆ ಬಹುತೇಕ ಮಂದಿಯಲ್ಲಿದೆ. ಮೊದಲು ಬಂಜರು ಭೂಮಿಯನ್ನು ಸಾವಯವ ಕೃಷಿಯ ಮೂಲಕ ಫಲವತ್ತಾಗಿಸಬಹುದು.
ನಮ್ಮಲ್ಲಿ ಸರ್ಕಾರಗಳು ಕೂಡ ಕೃಷಿ, ತೋಟಗಾರಿಕೆ, ರೇಷ್ಮೆ, ಜಲಸಂವರ್ಧನೆ, ಸಣ್ಣ ನೀರಾವರಿ ಇತ್ಯಾದಿ ಇಲಾಖೆಗಳ ಮೂಲಕ ಅನೇಕ ರಚನ್ಮಾತಕವಾದ ಯೋಜನೆಗಳನ್ನು ರೂಪಿಸಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಇದರ ಮಾಹತಿಯ ಕೊರತೆಯಿಂದ ಕೂಡ ರೈತರು ಅನೇಕ ಯೋಜನೆಗಳ ಸದುಪಯೋಗಕ್ಕೆ ಒಳಗಾಗದಿರಬಹುದು. ಇದರ ಅರ್ಥ ಸರ್ಕಾರಗಳು ರೈತರಿಗೆ ಏನು ಮಾಡುತ್ತಿಲ್ಲಾ ಎಂದು ಭಾವಿಸುವುದು ತಪ್ಪಾಗುತ್ತೆ. ಆದರೆ ಯೋಜನೆಗಳ ಅನುಷ್ಠಾನಗಳಲ್ಲಿ ಪ್ರಾಮಾಣಿಕತೆ ಕೊರತೆ ಇರುವುದು ಸುಳ್ಳಲ್ಲ. ರೈತರು ಕೂಡ ಸ್ವಲ್ಪ ವಿವಚನೆಯಿಂದ ಬೆಳೆ ಪದ್ಧತಿಗಳನ್ನು ರೂಢಿಸಿಕೊಳ್ಳುವುದು ಅನಿವಾರ್‍ಯ ಮತ್ತು ಅಗತ್ಯ. ಇಲ್ಲದೆ ಹೋದರೆ ಕಬ್ಬು ಬೆಳಗಾರರಂತೆ ಪ್ರತಿ ಸಲ ಬೀದಿಗಿಳಿದು ಹೋರಾಟ ಮಾಡುತ್ತಲೇ ಇರಬೇಕಾಗುತ್ತೆ. ಬಹು ಬೆಳೆಯ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವುದು, ಸಾವಯವ ಕೃಷಿಗೆ ಒತ್ತು ಕೊಡುವುದು, ಹೈನಗಾರಿಕೆ, ಕೋಳಿ ಸಾಗಣಿಕೆ, ಮೀನುಗಾರಿಕೆಯಂತ ಉಪ ಕುಸುಬಗಳನ್ನು ಕೃಷಿ ಚುಟುವಟಿಕೆಗಳ ಜೊತೆಯಲ್ಲಿ ರೂಢಿಸಿಕೊಂಡರೆ ರೈತರಿಗೂ ಸ್ವಲ್ಪ ಮಟ್ಟಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಅನೇಕ ರೈತರು ಇದೇ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.
ರೈತರ ಧ್ವನಿಯಾಗೋಣ
ಭಾರತೀಯ ರೈತರು ಆರ್ಥಿಕವಾಗಿ ಅತ್ಯಂತ ಕೆಳ ಹಂತದ ಆದಾಯ ಹೊಂದಿರುವ ಜನರಾಗಿದ್ದಾರೆ. ಅದೇ ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶದಲ್ಲಿ ಕೇವಲ ಜನ ಸಂಖ್ಯೆ ೩ ರಿಂದ ೫ ರಷ್ಟು ಜನರು ಮಾತ್ರ ಕೃಷಿ ಅವಲಂಬಿತರಾಗಿದ್ದರು, ಒಂದು ಬಲವಾದ ಲಾಬಿಯ ಮೂಲಕ ತೃತೀಯ ಜಗತ್ತಿನ ರೈತರನ್ನು ನರಕಕ್ಕೆ ನೂಕುತ್ತಿದ್ದಾರೆ. ಕುಲಾಂತರಿ ಬದನೆಕಾಯಿಯ ಮೂಲಕ ವಿಶ್ವದ್ಯಾಂತ ಆತಂಕವನ್ನು ಸೃಷ್ಟಿಸುತ್ತಿದ್ದಾರೆ. ಇದೇ ರೀತಿ ನಮ್ಮ ರೈತರು ಬೆಳೆಯುವ ಹಣ್ಣು-ತರಕಾರಿಗಳಿಗೆ ಮಾರಕಟ್ಟೆ ಇಲ್ಲದೇ ಹೋಗುವ ಅಪಾಯ ಭವಿಷ್ಯದಲ್ಲಿ ಎದುರಾಗುವ ಅಪಾಯಗಳನ್ನು ನಿವಾರಿಸಲು ಪ್ರತಿಯೊಬ್ಬರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಏಕೆಂದರೆ ಇದು ನಮ್ಮ ರೈತರಿಗೆ ಮಾತ್ರ ಎಚ್ಚರಿಕೆಯ ಗಂಟೆಯೆಂದು ನಾವು ಭಾವಿಸುವುದು ತಪ್ಪಾಗುತ್ತೆ. ಇದು ಇಡೀ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುವ ಅಪಾಯವಿರುವುದರಿಂದ ರೈತರ ಪರ ಪ್ರತಿಯೊಬ್ಬ ಭಾರತೀಯನು ಒಂದು ಧ್ವನಿಯಾಗಿ, ರೈತನಿಗೊಂದು ಆರ್ಥಿಕ ಸ್ಥಾನಮಾನ ಸಿಗುವಂತಾಗಲ್ಲು ಹೋರಾಡಬೇಕಿದೆ. ಇದು ರೈತರ ಸಮಸ್ಯೆ ಬಿಡು, ನಮಗ್ಯಾಕೆ ಎಂದು ಉದಾಸೀನ ತೋರಿದೆ, ಭವಿಷ್ಯದಲ್ಲಿ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗಲು ಇಲ್ಲಿ ಹೋರಾಟದ ಕಾವು ಇರುವುದಿಲ್ಲ. ಪ್ರತಿಯೊಬ್ಬರು ಒಂಟಿ ಧ್ವನಿಗಳಾಗಿ ತಮ್ಮ ಸಮಸ್ಯೆಗಳಿಗೆ ವ್ಯರ್ಥ ಹೋರಾಟ ಮಾಡಬೇಕಾದ ಪರಸ್ಥಿತಿ ನಿರ್ಮಾಣವಾದಿತು.
- Login or register to post comments
- Email this page
Hi Buddy today I got the time to read your article. Nice Shami, Suni, Ani, Rahul, Swathi, Sumanth all read and expressed their comments. Good these days u becoming big man. Any way Article is nice dude.
Pune is boring dude, any way this month end I will come to Chintamani. We will meet there. All the Best and good luck
Amith
Hi Ravi article is good....you are from chintamani?
Natesh
Hi Natesh thanks for your compliment. Currently I Working in Bangalore, but my hometown is Chintamani, Residing in Anjani Extension.
With Regards
Ravindra
HI Ravi Thanks for your reply. I am studying Final year BCA in Pragathi College. Residing in 7th cross, premnagar (Near G.K Venkatashiva Reddy, Srinivasapur MLA House)
With Regards
Natesh
Hi Buddy nice article...When u coming to Chintamani?
Bye
Sharmada
Hi Ravindra your article is very nice to read. Sumanth said that you going to direct the movie. Is it True? When can we expect your film? Any way Article is Good and I liked it. All the best…be in Touch
Bye
Sunitha
Hi Dear Ravindra always nice to read your articles...you know that I like your Personality very much...we are looking forward to see your short movie dude...
Bye
Y.P.Swathi
Hi Ravi i gone Through our article dude. its a nice one...article is simple but the same time content wise its really good...
Sumanth
Hi Buddy I read your article. It’s a good one. As Rahul mentioned we all known you as a good storywriter. But first time you really focused on real India and its problems. I liked your attempt. Content wise also its good one…
Bye…
Anitha
Hi Ravindra I know you are a good story writer...but first time i saw your article relating to rural India...
Good something which i never seen in your article's that was Rural India and Farmers which today i read...good attempt...
Rahul
Hi Ravindra your aricle is good. keep writing this kind of articles