You are hereಕಾಯಕ ದಾನಿಗಳಿಗೆ ಶರಣು ಶರಣಾರ್ಥಿ

ಕಾಯಕ ದಾನಿಗಳಿಗೆ ಶರಣು ಶರಣಾರ್ಥಿ


ವಿಚಾರ ಮಂಟಪದಲ್ಲಿ ಎಲ್ಲಾ ತರಹದ ಸಾಹಿತ್ಯದ ಸಾಮಗ್ರಿ ಹೆಚ್ಚಲು, ಹೆಚ್ಚಾಗುತ್ತಿರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗುತ್ತಿರುವ ಮಿತ್ರರು ಹಲವಾರು ಮಂದಿ. ಬರಹಗಾರರನ್ನು ಸಂಪರ್ಕಿಸುವುದು, ಒಪ್ಪಿಗೆ ಪಡೆದುಕೊಳ್ಳುವುದು, ಸಾಹಿತ್ಯವನ್ನು 'ಬರಹ'/ಯೂನಿಕೋಡ್ ರೂಪದಲ್ಲಿ ಕೀಲಿಸುವುದು, ಪುಸ್ತಕಗಳನ್ನು ಒದಗಿಸುವುದು, ವಿವಿಧ ಕಡೆ ಸಂಪರ್ಕ ಕಲ್ಪಿಸುವುದು ಹೀಗೆ ಸ್ವಯಂಸ್ಫೂರ್ತಿಯಿಂದ ಸಕ್ರಿಯವಾಗಿ ತಮ್ಮ ಸಮಯ ಮತ್ತು ಕಾಯಕವನ್ನು ವಿನಿಯೋಗಿಸಿದ ಇವರೆಲ್ಲರಿಗೂ ಮತ್ತು ಇತರೆಲ್ಲರಿಗೂ ವಿಚಾರಮಂಟಪ.ನೆಟ್ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.