You are hereಬಿಡುಗಡೆ

ಬಿಡುಗಡೆ


ಬಿಡುಗಡೆ ಎಂಬುದು ಏನೊ
ಬಿಡುಗಡೆ ಎಂಬುದು ಎಲ್ಲೊ

ಸ್ವಾತಂತ್ರ್ರ್ಯದ ಸೂರ್ಯ ಹುಟ್ಟಿದರು
ಕಿರಣ ಕಾಣಲಿಲ್ಲ
ಸೂರ್ಯನ ಎದುರು ಉಳ್ಳವರೊಡ್ಡಿದ
ಮೋಡ ಚದುರಲಿಲ್ಲ

ಯಾರು ಬಂದರೂ ಯಾರು ಹೋದರೂ
ಕತ್ತಲಳಿಯಲಿಲ್ಲ
ಅಸ್ಥಿಪಂಜರದ ಜೋಪಡಿಯೊಳಗೆ
ದೀಪ ಹಚ್ಚಲಿಲ್ಲ

ತುಳಿಯುವ ಬೂಟಿಗೆ ಸಿಡಿಯುವ ಗುಂಡಿಗೆ
ಅಡೆತಡೆ ಎಂದಿಗು ಇಲ್ಲ
ಬಿಗಿಯುವ ಸರಪಳಿ ಕಳೆಯಲಿಲ್ಲ
ಮುಂದಿನ ದಾರಿ ಹೊಳೆಯಲಿಲ್ಲ

ಬಿಡುಗಡೆ ಎಂಬುದು ಏನೊ
ಬಿಡುಗಡೆ ಎಂಬುದು ಎಲ್ಲೊ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು