You are hereಹೋರಾಟವೆ ದಾರಿ

ಹೋರಾಟವೆ ದಾರಿ


ಕುಂತ ಮನಗಳೆ
ನಿಂತ ಜನಗಳೆ
ಕೇಳದೆ ಹೊಸನುಡಿ
ಕಾಣದೆ ಕೆಂಗಿಡಿ
ಹೋರಾಟವೆ ದಾರಿ
ಕೊನೆಗಾಣದ ಬಾಳಿನ ಗೋಳಿಗೆ
ಹೋರಾಟವೆ ದಾರಿ

ಭಿಕ್ಷಾನ್ನಕೆ ಕೈಯನು ಒಡ್ಡುವ
ಕೈಗಳು ಕೊಳೆಯುವವು
ಬೇಡುವ ನೀಡುವ ಜಾಲದಂತ್ಯದಲಿ
ಸೌಖ್ಯದ ನಾಡುದಯ
ಸಮಸೌಖ್ಯದ ನಾಡುದಯ
ಕಪ್ಪು ಕತ್ತಲೆಯ ಕಗ್ಗವಿಯಲ್ಲಿ
ಕೆಂಪು ಬೆಳಕಿನ ಕಿರಣಗಳು
ಸರಪಳಿ ಕಿತ್ತ ಕೆಂಪು ದಾರಿಯಲಿ
ಕೋಟಿಕಂಠಗಳ ಸಾಲುಗಳು

ಕುಂತ ಮನಗಳೆ
ನಿಂತ ಜನಗಳೆ
ಕೇಳದೆ ಹೊಸನುಡಿ
ಕಾಣದೆ ಕೆಂಗಿಡಿ
ಹೋರಾಟವೆ ದಾರಿ
ಕೊನೆಗಾಣದ ಬಾಳಿನ ಗೋಳಿಗೆ
ಹೋರಾಟವೆ ದಾರಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು