You are hereಹೆಂಡಕ್ಕೆ ಸಾವಿಲ್ಲವೊ
ಹೆಂಡಕ್ಕೆ ಸಾವಿಲ್ಲವೊ
ಭೂತಾಯಿ ಸಿಗಲಿಲ್ಲ ಈ ತಾಯಿ ಸಿಕ್ಕವಳೆ
ಕಾಣಿರೊ ಆನಂದವ
ಹೆಂಡ ಬಾಡಿನ ಮುಂದೆ ಇನ್ನು ದೇವರು ಉಂಟೆ
ಮಾಡಿರೋ ದೊಡ್ಡಬ್ಬವ
ಸಾವ್ಕಾರ್ರ ಸಾಲಗಳ ಅರಗಳಿಗೆ ಮರೆಯೋಣ
ಹಾಡಿರೊ ಸಂಗೀತವ
ನಮ್ಮಯ ದುಡಿಮೇಲಿ ಧಣಿಜೀವ ಅಡಗೈತೆ
ಧಣಿಗೆಂದು ನೋವಿಲ್ಲವೊ
ಹೆಂಡದ ಗಡಿಗೇಲಿ ನಮಜೀವ ಅಡಗೈತೆ
ಹೆಂಡಕ್ಕೆ ಸಾವಿಲ್ಲವೊ
ಉರಿಬಾಡು ಹೆಂಡಕ್ಕೆ ಹುಟ್ಟಿದ ಜನನಾವು
ವ್ಯಸನಕ್ಕೆ ತಾವಿಲ್ಲವೊ
ಹೆಂಡಕ್ಕೆ ಸಾವಿಲ್ಲವೊ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page