You are hereಹಾವುಗಳೇ ಕಚ್ಚಿ

ಹಾವುಗಳೇ ಕಚ್ಚಿ


ಆಕಾಶವ ಎತ್ತಿನಿಲಿಸಿ
ನೀಲಿಯಾಗಿ ನಿಂತವರೆ
ಕಪ್ಪುನೆಲವ ಕೆಂಪು ಮಾಡಿ
ಬಾಳೆಯಾಗಿ ಅರಳಿದವರೆ

ಮುತ್ತಿನ ಮಳೆ ಹುಯ್ಯುವಾಗ
ಸಿಡಿಲುಬಡಿದು ಸತ್ತವರೆ
ಸೊಕ್ಕಿದವರ ಸುಟ್ಟುಬಿಡಲು
ಬೆಂಕಿಯ ಮಳೆಯಾದವರೆ

ನೆಲನೆಲದಲಿ ಜಲವುಕ್ಕಿಸಿ
ಬೆಳ್ಳಿಯ ಬೆಳೆ ಬೆಳೆದವರೆ
ದುಡಿದು ದುಡಿದು ಧೂಳಾದವರೆ
ಹಸಿವನುಂಡ ಜನಗಳೆ

ಯಜಮಾನರ ಬೆತ್ತಗಳಿಗೆ
ಭುಜಬೆನ್ನನು ತೆತ್ತವರೆ
ಬಂದೂಕದ ತುದಿಗೆದೆಯನು
ಒಡ್ಡುವವರೆ ಬನ್ನಿರಿ

ಮಂತ್ರಗಳಲಿ ಮಲಗಿದವರೆ ಸತ್ಯಗಳಲಿ ಸತ್ತವರೆ
ಕಿಚ್ಚುಗಳೇ ಕೆರಳಿ
ಎಚ್ಚರವನು ತಪ್ಪಿದವರೆ ಮಚ್ಚರವನು ಮುಚ್ಚಿದವರೆ
ಹಾವುಗಳೇ ಕಚ್ಚಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು