You are hereಹಬ್ಬ
ಹಬ್ಬ
ದಲಿತರ ಮೂಳೆ ಪಕ್ಕೆ ತಲೆಬುರುಡೆ ಮ್ಯಾಲೆ
ಕಾರು, ರಿಕ್ಷ ಸ್ಕೂಟ್ರಲಿ ಓಡಾಡೋರು
ಕ್ಯಳಗ್ನೋರ್ ಕಣ್ಕಿತ್ತು ಕ್ಯಕ್ಕರಸ್ಕಂಡ್ ನೋಡೋರು
ಹಲ್ಲುದ್ರಿಸಿ ಫಕ್ಕನ್ ನಗೋರು
ಸುಲ್ಗೆ ಮಾಡೋ ಮೋಸಗಾರ
ಬಡ್ಡೀಮಕ್ಕಳ್ನ ಕ್ರಾಂತಿಕಾರಿಗಳ ಕೋರ್ಟಿಗೆಳೀತೀನಿ
ಮಾರ್ಕ್ಸ್ ನಿಂದ ಜಡ್ಜ್ಮೆಂಟ್ ಕೊಡುಸ್ತೀನಿ
ಅವುರ್‍ಗೆ ಫಾಸಿ ಆಯ್ತದೆ
ತಾತ ಮುತ್ತಾತನ ಕಾಲ್ದಿಂದ ಜೀವತೇದೋರು
ಕೋರ್ಟ್ನಂಗಳದ ತುಂಬ ನಿಂತ್ಕಂಡು
ಕ್ಯಾಕಾಹಾಕಿ ಕುಣೀತರೇ
ಸುಲ್ದೋರ್‍ನ ಸುಲಿಯೋ ದಿನ ಅದು
ಅವತ್ತು ದಲಿತರ ಹಬ್ಬ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page