You are hereಸತ್ತೋಗೋರಾ
ಸತ್ತೋಗೋರಾ
ರಾಜಕೀಯದ ಗಡಿಬಿಡಿ ವಳಗೋಡಾಡೋರಾ
ಪಾರ್‍ಲಿಮೆಂಟು, ಅಸಂಬ್ಲೀಲಿ ಮ್ಯತ್ಗಿರೋ ಸೀಟ್ನಮ್ಯಾಲ್ ಕುಂತು
ಪಾನ್ ಬೀಡಾ ಅಗ್ಯೋ ನಾಯಕ್ರಾ
ನಿಮ್ಗ್ ಕೇಳ್ಸಲ್ವೇನ್ರಲೇ ನಮ್ ಕೂಳಿಲ್ಲದ ಕೂಗು
ಪಂಚ್ ತಾರಾದ್ವಳಗೆ ಕಣ್ಣಾರ್ ಕಾಂಚಾರ ಉಂಡು, ಬಿದ್ದು
ಡೆಳ್ಳೀಗೂ ಬೆಂಗ್ಳೂರ್‍ಗು ಆಕಾಸ್ದೇಲ್ ತಾರಾಡೋರಾ
ದಿನ್ದಿನ್ಕೂ ಕುಬೇರ್ರಾಗಿ, ಬಡೂರುದ್ಧಾರ್‍ಕೋಸ್ಕರ
ಭಜ್ನೆ ಮಾಡಾಕ್ ಗುಡಿ ಕಟ್ಟುಸ್ಕೊಟ್ಟು
ನಿಮ್ಗೆ ಬಂಗ್ಲೆ ಕಟ್ಟುಸ್ಕತ್ತೀರೇನ್ರೋ
ನಿಮ್ ನಿಮ್ ಸೀಟ್ಟಾಗಿ ಕ್ವಲೆ ಮಾಡ್ಸುದ್ರು ನಮ್ಗ್ ಮಾತ್ರ
ನೀತಿ ಅಹಿಂಸೆ ಹೇಳ್ಕೊಡ್ತೀರೇನ್ರಲಾ
ಗಾಂಧೀ ಮಾತ್ಮನ ಅಚ್ಚುಗಳಾ
ನೀವು ಎಮ್ಮೆಲ್ಲೆಗಳು, ಮಿನೀಸ್ಟ್ರುಗಳು
ಬೋಳ್ ಮುದುಕ್ರಾ
ಹಲ್ ಉದ್ರೋದೋರಾ ಹಲ್ ಕಟ್ಟುಸ್ಕೊಂಡೋರಾ
ಜನ್ದೆದ್ರು ಮೈಕ್ನ ಮುಂದೆ ತಂದ್ ವಿಚಾರ್‍ಸುದ್ರೆ
ತ್ರಾಣಾ ಪ್ರಾಣಾ ಎಳ್ಡೂ ಇಲ್ದೆ
ತ್ವಡೇ ನಡ್ಗಿ ಸತ್ತೋಗೋರಾ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page