You are here ಶೂದ್ರ
ಶೂದ್ರ
ಕ್ಷೌರ ಮಾಡಿಕೊಂಡರೆ ಬುದ್ಧನಂತೆ ಕಾಣುವ
ಶೂದ್ರ ಹಲವು ಸಾರಿ
ಬುಲ್ಗಾನಿನ್ ಗಡ್ಡಧಾರಿ
ಶೂದ್ರ ಬುದ್ಧನಂತೆ ಕಿಲಾಡಿಯಲ್ಲ
ಶೂದ್ರನದು ವೈರಾಗ್ಯದ ಬಾಡಿಯಲ್ಲ
ಹುಡುಗಿಯರನ್ನು ಮಾತಾಡಿಸಲು
ಗುಪ್ತಪ್ರೇಮಿಗಳು ಹೆದರುತ್ತಿದ್ದ ಕಾಲದಲ್ಲಿ
ಶೂದ್ರ ಮುನ್ನುಗ್ಗಿ ಹೆಂಗೆಳೆಯರಿಗೆ
ಮಾರ್ಕ್ಸಿಸಂ ಬೋಧಿಸಿದನು
ತಾಯಿಮನಸ್ಸಿನ ಶೂದ್ರ ಕುಳಿತಿದ್ದಾನೆ
ಬೋಧಿವೃಕ್ಷದ ಕೆಳಗೆ
ನಾನಾ ಚಿಂತೆಯೊಳಗೆ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page