You are hereರಾಮಚಂದ್ರ ಶರ್ಮ - ೭೦
ರಾಮಚಂದ್ರ ಶರ್ಮ - ೭೦
ಭೋಗಾದಿಯಲ್ಲಿ ಹುಟ್ಟಿದರೂ ಭೋಗಲಾಲಸೆಯಿಲ್ಲ
ಯೋಗಿಯ ಧಿಮಾಕಿಲ್ಲ
ಶರ್ಮರದು ಅಖಂಡ ಜೀವನ ಪ್ರೀತಿ
ಇವರ ಹುಡುಗಾಟ ಕಂಡು ಹುಡುಗರಿಗೆ ಅಸೂಯೆ
ಹುಡುಗಿಯರಿಗೆ ಆಶ್ಚರ್ಯ
ಮಾತುಮಾತಿಗೂ ಕೇಕೆ ಹಾಕಿ ನಗುವ ಶರ್ಮರಲ್ಲಿ
ಕೆಳಗೆ ಬಿದ್ದವರಿಗಾಗಿ ಎರಡು ಹನಿ ಕಂಬನಿಯುಂಟು
ಕನ್ನಡ ಕಾವ್ಯದಲ್ಲಿ ಶರ್ಮರ ಸ್ಥಾನವನ್ನು
ವಿಮರ್ಶಕರು ಸದಾ ಚರ್ಚಿಸುತ್ತಿರಲಿ
ಶರ್ಮರು ಕನ್ನದ ಕಾವ್ಯಪದ್ಮಕ್ಕಂಟಿದ ದುಂಬಿ
ಎಂಬುದಕ್ಕೆ ಯಾರದೂ ಭಿನ್ನಾಭಿಪ್ರಾಯವಿಲ್ಲ
ದೇವರನ್ನು ನಂಬದ ಶರ್ಮರಿಗೆ
ಜನರನ್ನು ಸುಲಭವಾಗಿ ನಂಬುವ ಮೂಢನಂಬಿಕೆ
ಈ ಒಪ್ಪೊತ್ತಿನಲ್ಲಿ ಶರ್ಮರಿಗೆ ಎಪ್ಪತ್ತು
ಅವರ ಅಂತಃಕರಣ ಉಲ್ಲಾಸ ತುಂಟತನ ಎಲ್ಲರಿಗು ಬರಲಿ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page