You are hereಯುಗಾದಿ - ೩
ಯುಗಾದಿ - ೩
ನವಭಾವದ ನವಬದುಕನು
ಹೊಸ ಯುಗಾದಿ ತೆರೆಯಲಿ
ಪ್ರೀತಿಯ ಬೆಳದಿಂಗಳಲ್ಲಿ
ಭೂಮಿಯ ಮೈ ಮರೆಯಲಿ
ಕೆಡುಕಿನ ಕಡುಕತ್ತಲಳಿದು
ಹಕ್ಕಿಹಾಡು ಮೊಳಗಲಿ
ಕಂದನ ಕಣ್ ಬೆಳಕಿನಲ್ಲಿ
ಹೊಸ ಯುಗಾದಿ ಮೂಡಲಿ
ಯುಗಯುಗಗಳ ನಗೆಯ ಹೊನಲು
ಬತ್ತದಂತೆ ಹರಿಯಲಿ
ಜಗದ ಹೆಗಲ ನೊಗದ ಭಾರ
ಹಗುರವಾಗುತಿಳಿಯಲಿ
ಮರಕೆ ಬಿದ್ದ ಉರಿಯು ಆರಿ
ಮತ್ತೆ ಬನವು ಚಿಗುರಲಿ
ದೂರವಾದ ಹೃದಯಗಳಲಿ
ಮೈತ್ರಿಭಾವ ಸುಳಿಯಲಿ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page