You are hereಯುಗಾದಿ - ೨

ಯುಗಾದಿ - ೨


ಓ ಯುಗಾದಿ ಎಂದಿನಂತೆ
ಹರುಷವನ್ನೆ ತಂದರೂ
ಮಾವಿನೊಡನೆ ನೋವ ತಂದೆ
ಯಾರು ಏನೆ ಅಂದರು

ಸಂಕಟಗಳು ಮುಗಿಲಿಗೇರಿ
ಹಾರಾಟವ ಮಾಡಿವೆ
ಬಾಳ್ವೆಗಾಗಿ ಜನಜಂಗುಳಿ
ಹೋರಾಟವ ಮಾಡಿದೆ

ಉಳ್ಳವರಿಗೆ ಹಬ್ಬವಾಯ್ತು
ಕವಿಕುಲಕ್ಕೆ ಕಬ್ಬವಾಯ್ತು
ಇಲ್ಲದವರಿಗೇನಾಯಿತು
ಹೇಳೆ ಯುಗಾದಿ

ಸ್ವರ್ಗವನ್ನೇ ಭುವಿಗೆ ತಂದು
ನಲಿಯುತಿರುವ ಬನಗಳೆ
ಹಸಿರು ತೊಟ್ಟ ಗಿಡಗಳೆ, ಹಳದಿಯುಟ್ಟ ಮರಗಳೆ
ಇದಕುತ್ತರ ಹೇಳಿರಿ

ಬಾಳಿನೆಲ್ಲ ಕೇಡು ಕಳೆದು
ನವಯುಗಾದಿಯಾಗಲಿ
ಎಲ್ಲರೆದೆಯ ನೋವು ಅಳಿದು
ನವಜೀವನ ಮೂಡಲಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು