You are hereಮಾಟ ಆಗಿತ್ತು

ಮಾಟ ಆಗಿತ್ತು


ಮಾಟ ಆಗಿತ್ತು
ದೇಶಕೆ ಮಾಟ ಆಗಿತ್ತು

ದೇಶದ ದೇಹದ ಅಂಗಾಂಗಕ್ಕೆ
ಸಕಲವು ವಿಕಲ ಆಗುವಂತೆ
ತೃಣವು ಕೂಡ ಚಲಿಸದಂತೆ
ಮಾಟ ಆಗಿತ್ತು

ಮಳೆಯು ಬೆಳೆಯು ಆಗದಂತೆ
ಸತ್ಯದ ಸುಳಿವು ಸಿಕ್ಕದಂತೆ
ಯಾರಿಗು ಎಚ್ಚರವಾಗದಂತೆ
ಮಾಟ ಆಗಿತ್ತು

ಮಾಟ ಮದ್ದಿನ ಗದ್ದಲದಲ್ಲಿ
ಜನತೆಯ ಸದ್ದು ಅಡಗಿತ್ತಯ್ಯ
ಸೊಕ್ಕಿನ ದನಿಯು ಗುಡುಗಿತ್ತಯ್ಯ
ಮಾಟ ಆಗಿತ್ತು
ರಣ ಮಾಟ ಆಗಿತ್ತು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು