You are hereಭವಿಷದ್ಗೀತೆ
ಭವಿಷದ್ಗೀತೆ
ರ್ಮೋಡ ಕವಿದಿತ್ತು ಕಗ್ಗಪ್ಪು ಕೆದರಿತ್ತು
ಕಡುರೌದ್ರ ತುಂಬಿತ್ತು ಬಾನಿನಲ್ಲಿ
ಕ್ರಾಂತಿಕರೆಗೋಗೊಟ್ಟು ಕಪ್ಪುವಸ್ತ್ರವತೊಟ್ಟು
ಭೂದೇವಿ ನಿಂತಿತ್ತು ರಾತ್ರಿಯಲ್ಲಿ
ಅಸಮತೆಯ ಗುಡುಗಿನಲಿ ಸಂಕಟದ ಸಿಡಿಲಿನಲಿ
ಚಿಂದಿಬಟ್ಟೆಯಲೊಂದು ಮಿಂಚುಕಂಡು
ಬಿರುಗಾಳಿ ಬೀಸಿತ್ತು ಛೀರಾಟ ಚಿಮ್ಮಿತ್ತು
ದೂರದಾ ಕಾರ್ಮುಗಿಲ ಬಿರುಕಿನಲ್ಲಿ
ತೊರೆತುಂಬಿ ಹರಿದಿತ್ತು ಕೆರೆತುಂಬಿ ತುಳುಕಿತ್ತು
ಮಳೆಯಾಗಿ ಸುರಿದಿರಲು ಕೆಂಪುರಕ್ತ
ಕ್ರಾಂತಿಕಾರಿಯು ನುಗ್ಗಿ ಕೊಲೆಸುಲಿಗೆ ಗೈಯುತಿರೆ
ಅತ್ತಿದ್ದ ಸತ್ತಿದ್ದ ಗುಡಿಯ ಒಡೆಯ
ಕಾರ್ಗತ್ತಲಿನಲ್ಲೇ ಹಸಿದವರ ಬಂಡಾಯ
ಅಗುಳಿನಾಸೆಗೆ ಸೇರಿ ಸಾಗುತಿತ್ತು
ಕ್ರಾಂತಿಸರಪಳಿ ಆಗ ಶೋಷಕರ ಕೊರಳುಗಳ
ಬಿಗಿದಿತ್ತು ಒಗೆದಿತ್ತು ಕೊಲ್ಲುತಿತ್ತು
ಧರ್ಮಗುರುವಿನ ಪೀಠ ಮುಗ್ಗರಿಸಿ ಮುರಿದಿತ್ತು
ದೈವಗುಡಿ ಜನರಮನೆ ಆಗುತಿತ್ತು
ಕನಸೊಂದು ನನಸಾಗಿ ಕ್ರಾಂತಿಬೆಳೆ ಹುಲುಸಾಗಿ
ಬೆಳೆವುದೆನ್ನುವ ಆಸೆ ಮೂಡುತಿತ್ತು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page