ಏನೇ ಆಗಲಿ ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ.

ಕೆಂಟ್ ಕೀತ್‌ರವರು ಇಂಗ್ಲಿಷಿನಲ್ಲಿ ಬರೆದಿರುವ "Anyway – The Paradoxical Commandments" ಎಂಬ ಪುಸ್ತಕವನ್ನು ನಾನು "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದೇನೆ. ಇದು ಸುಮಾರು 14 ವಾರಗಳ ಕಾಲ "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. 2008 ರಲ್ಲಿ ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಇರಾದೆಯಿದೆ.

ಈಗ ಅದನ್ನೆ ನಾನು ಆಡಿಯೊ ಪುಸ್ತಕವಾಗಿ ಪರಿವರ್ತಿಸಿದ್ದೇನೆ. ಆಸಕ್ತ ಕೇಳುಗರು ಇದನ್ನು ಕೇಳಿ, ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆನ್ನುವ ನಂಬಿಕೆ ನನ್ನದು. ನಿಮಗಿದು ಇಷ್ಟವಾಗಿ, ನಿಮ್ಮ ಸ್ನೇಹಿತ/ಪರಿಚಯಸ್ಥರು ಇದನ್ನು ಕೇಳಬೇಕು ಎಂದು ನಿಮಗನ್ನಿಸಿದರೆ, ದಯವಿಟ್ಟು ಹಂಚಿಕೊಳ್ಳಿ.

ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್‌ಪಿರೇಷನಲ್ ಆಡಿಯೊ ಕ್ಯಾಸೆಟ್‍ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್‌ರವರು ತಮ್ಮ "ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ" ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ.

"ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಈಗ mp3 ಫಾರ್ಮ್ಯಾಟ್‌ನಲ್ಲಿದೆ. ಒಂದೇ ಸಿಟ್ಟಿಂಗ್‌ನಲ್ಲಿ ಕಂಪ್ಯೂಟರ್‍ನಲ್ಲಿ ರೆಕಾರ್ಡ್ ಮಾಡಿ, ಅದನ್ನೆ Audacity ಸಾಫ್ಟ್‌ವೇರ್ ಬಳಸಿ ಸ್ವಲ್ಪ ಎಡಿಟ್ ಮಾಡಿದ್ದೇನೆ. ಹಿನ್ನೆಲೆ ಸಂಗೀತ, ವಿಶೇಷ ಎಫ್ಫೆಕ್ಟ್ಸ್ ಅಂತಹವೇನೂ ಸದ್ಯಕ್ಕೆ ಸಂಯೋಜಿಸಿಲ್ಲ. ಅವೆಲ್ಲ ಮಾಡಬೇಕು ಅಂತಿದ್ದರೂ, ಸಮಯಾಭಾವದಿಂದ ಮತ್ತು ಇದ್ದಕ್ಕಿದ್ದಂತೆ ಬದಲಾಗುವ ಆಸಕ್ತಿಯ ಕಾರಣವಾಗಿ ಅದೆಲ್ಲ ಮಾಡಲಾಗಿಲ್ಲ. ಯಾರಾದರೂ ಹವ್ಯಾಸಿ ಕನ್ನಡ ಸ್ನೇಹಿತರು, ಇದನ್ನು ಡೌನ್‌ಲೋಡ್ ಮಾಡಿಕೊಂಡು, ಅದಕ್ಕೆ ಪ್ರೊಫೇಷನಲ್ ಟಚ್ ಕೊಟ್ಟು, ಸುಧಾರಿಸಿದರೆ, ನಿಮ್ಮಷ್ಟೆ ಸಂತೋಷ ನನ್ನದು, ಅಥವ ನನ್ನಷ್ಟೆ ಸಂತೋಷ ನಿಮ್ಮದು.

ಕೇಳುಗರ ಬ್ಯಾಂಡ್‌ವಿಡ್ತ್‌ಗೆ ಅನುಕೂಲವಾಗುವಂತೆ ಮೂರು ವಿಧವಾಗಿ ಇವನ್ನು ವಿಭಾಗಿಸಿದ್ದೇನೆ. ನಿಮಗೆ ಅನುಕೂಲವಾದ ರೀತಿಯಲ್ಲಿ ಡೌನ್‌ಲೋಡ್ ಮಾಡಿಕೊಂಡು, ಅನುಕೂಲವಾದ ರೀತಿಯಲ್ಲಿ (ಕಂಪ್ಯೂಟರ್, mp3 ಪ್ಲೇಯರ್, ಬೂಮ್‌ಬಾಕ್ಸ್, ಇತ್ಯಾದಿ), ಸಾವಕಾಶವಾಗಿ ಕೇಳಬಹುದು. ಒಟ್ಟಾರೆಯಾಗಿ 2 ಗಂಟೆ 13 ನಿಮಿಷಗಳ ಕೇಳು-ಪುಸ್ತಕ ಇದು.

(.mp3 ಫೈಲುಗಳನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವ ಬಗೆ: ಕೆಳಗಿನ ಹೈಪರ್‍ಲಿಂಕ್‍ಗಳ ಮೇಲೆ ಬಲಮೌಸ್ ಒತ್ತನ್ನು ಒತ್ತಿ, ಆಗ ಇಳಿಬರುವ ಮೆನುವಿನಲ್ಲಿ "save target as..." ನಂತಹುದನ್ನು ಆಯ್ಕೆ ಮಾಡಿಕೊಂಡು ಬೇಕಾದ ಫೋಲ್ಡರ್‌ನಲ್ಲಿ ಶೇಖರಿಸಿಕೊಳ್ಳಿ.)
ಜನವರಿ-14 ರಂದು ಸೇರಿಸಿದ್ದು:

ಗೆಳೆಯ ಪ್ರದೀಪ್ ಸಿಂಹ ಈ ಕೇಳು-ಪುಸ್ತಕ ವನ್ನು MPEG 4 ಫಾರ್ಮ್ಯಾಟ್‌‍ಗೆ ಕನ್ವರ್ಟ್ ಮಾಡಿದ್ದಾರೆ. ಇದನ್ನು Apple ಕ್ವಿಕ್‌‌ಟೈಮ್‌ನಲ್ಲಿ ಪ್ಲೆ ಮಾಡಬಹುದು. ಈ ಫಾರ್ಮ್ಯಾಟ್‌ನ ಮುಖ್ಯ ಅನುಕೂಲವೆಂದರೆ ಬೇಕಾದ ಅಧ್ಯಾಯಕ್ಕೆ ಮುಂದೆ-ಹಿಂದೆ ಜಂಪ್ ಮಾಡಬಹುದು.

"ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ" ಕೇಳು-ಪುಸ್ತಕದ ಒಂದು ಹೆಚ್ಚುಗಾರಿಕೆ ಏನೆಂದರೆ, ಅಧ್ಯಾಯ 1 ರಿಂದ ಅಧ್ಯಾಯ 11 ರವರೆಗಿನ ಅಧ್ಯಾಯಗಳು ಒಂದು ರೀತಿ ಸ್ವತಂತ್ರ ಅಧ್ಯಾಯಗಳು. ಈ ಅಧ್ಯಾಯಗಳ ಕಂಟಿನ್ಯುಟಿ ಇತರೆ ಅಧ್ಯಾಯಗಳ ಮೇಲೆ ಅವಲಂಬಿತವಾಗಿಲ್ಲ. ಹಾಗಾಗಿ, ಈ m4b ಆಡಿಯೊದ ಕೇಳು-ಪುಸ್ತಕ ಎಲ್ಲಿ ನಿಲ್ಲಿಸಿದ್ದೆವು ಎನ್ನುವುದರ ಬಗ್ಗೆ ಕೇಳುಗರು ತಲೆಕೆಡಿಸಿಕೊಳ್ಳದೆ ಇನ್ನೊಂದು ಸ್ವತಂತ್ರ ಅಧ್ಯಾಯಕ್ಕೆ ಹೋಗಲು ಅನುಕೂಲ ಮಾಡಿಕೊಡುತ್ತದೆ. ಒಂದು ರೀತಿಯಲ್ಲಿ 13 ಅಧ್ಯಾಯಗಳ ಆಲ್ಬಮ್; ಆದರೆ ಒಂದೇ ಫೈಲು. ಈ ಫಾರ್ಮ್ಯಾಟ್‍ನ ಕೇಳು-ಪುಸ್ತಕ ಇಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ.

ಕಳೆದ ವಾರ ಈ ಕೇಳು-ಪುಸ್ತಕವನ್ನು ಆಲಿಸಿದ ಗೆಳೆಯರೊಬ್ಬರು ಬರೆದದ್ದು ಹೀಗೆ: "Downloaded your audio book last week and listened to it while driving to and from work over the last week. It has come out well. It can do without **** ** *** ************* ******. Overall it is has come out very well. Useful book and great work. Good to see you put the technology to good use this way."

ನಿಮ್ಮ ಎಲ್ಲಾ ತರಹದ ಪ್ರತಿಕ್ರಿಯೆಗಳಿಗೆ ಸ್ವಾಗತವಿದೆ. ದಯವಿಟ್ಟು ಇಲ್ಲಿಗೆ ಬರೆಯಿರಿ - ravikreddy@yahoo.com

ಪ್ರೀತಿಯಿಂದ,
ರವಿ...

ನನ್ನ ಬ್ಲಾಗ್‍ನಲ್ಲಿ ಈ ಕೇಳು ಪುಸ್ತಕದ ಸ್ಟ್ರೀಮಿಂಗ್ ಸೌಲಭ್ಯ ಲಭ್ಯವಿದೆ. ಇಲ್ಲಿ ನೀವು ಆಡಿಯೊ ಫೈಲನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‍ಲೋಡ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ದಯವಿಟ್ಟು ಸಂದರ್ಶಿಸಿ: amerikadimdaravi.blogspot.com/